ಹೈನುಗಾರಿಕೆ ಮಾಡುತ್ತಿರುವ ರೈತರು ತಮ್ಮ ಜಾನುವಾರಗಳಿಗೆ ಪ್ರತಿ ಮೂರು ಗಂಟೆಗೊಮ್ಮೆ ನೀರು ಕುಡಿಸಿ ಹೆಚ್ಚು ನೆರಳಿನಲ್ಲಿ ಜಾನುವಾರುಗಳನ್ನು ಕಟ್ಟಬೇಕೆಂದು ಪಶು ವೈದ್ಯಾಧಿಕಾರಿ ಮನವಿ ಮಾಡಿದ್ದಾರೆ.
ಬೆಟ್ಟದಪುರ : ಹೈನುಗಾರಿಕೆ ಮಾಡುತ್ತಿರುವ ರೈತರು ತಮ್ಮ ಜಾನುವಾರಗಳಿಗೆ ಪ್ರತಿ ಮೂರು ಗಂಟೆಗೊಮ್ಮೆ ನೀರು ಕುಡಿಸಿ ಹೆಚ್ಚು ನೆರಳಿನಲ್ಲಿ ಜಾನುವಾರುಗಳನ್ನು ಕಟ್ಟಬೇಕೆಂದು ಪಶು ವೈದ್ಯಾಧಿಕಾರಿ ಮನವಿ ಮಾಡಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನಲ್ಲಿ ರಣಬಿಸಲು ಹೆಚ್ಚಾಗಿದ್ದು, ಇತ್ತೀಚೆಗೆ ಹಲವಾರು ಜಾನುವಾರುಗಳು ಮೃತಪಟ್ಟಿದ್ದು, ಇವುಗಳಿಗೆ ಸೆಲೆ ಕಾಯಿಲೆ ತಗುಲಿ ಮೃತಪಡುತ್ತಿವೆ, ಇದಕ್ಕೆ ಕಾರಣ ಜಾನುವಾರುಗಳು ಕಾಲದಲ್ಲಿ ಹೆಚ್ಚು ನೀರನ್ನು ಕುಡಿಯಬೇಕು.
undefined
ಕಾಲಕ್ಕೆ ತಕ್ಕಂತೆ ಕುಡಿಯಬೇಕು ಹಾಗೂ ಹೆಚ್ಚು ಒಣ ಮೇವುಗಳನ್ನು ತಿನ್ನುವುದರಿಂದ ಜಾನುವಾರುಗಳಿಗೆ ಬಾಯಾರಿಕೆ ಹೆಚ್ಚಾಗುತ್ತಿರುವುದರಿಂದ ರೈತರು ತಮ್ಮ ಹೈನುಗಾರಿಕೆ ಜಾನುವಾರುಗಳಿಗೆ ಎಲ್ಲ ತರದ ತಳಿಯ ಹಸುಗಳಿಗೆ ಎತ್ತುಗಳಿಗೂ ಸಹ ಪ್ರತಿ ಮೂರು ಗಂಟೆಗೊಮ್ಮೆ ನೀರು ಕುಡಿಸಬೇಕು,
ಅಲ್ಲದೆ ಬೆಳಗ್ಗೆ 11 ರಿಂದ ಸಂಜೆ 4ರವರೆಗೆ ಭಾರಿ ಬಿಸಿಲಿನ ತಾಪ ಇರುವುದರಿಂದ, ರೈತರು ತಮ್ಮ ಜಾಗೃತೆಯಿಂದ ಭಾನುವಾರಗಳಿಗೆ ನೀರು ಕುಡಿಸುವುದನ್ನು ಅಲ್ಲದೆ ಹೆಚ್ಚಿನ ಕಾಲ ನೆರಳಿನಲ್ಲಿ ಜಾನುವಾರು ಸಂರಕ್ಷಿಸುವುದನ್ನು ಮರೆಯಬಾರದು ತಾಪಮಾನ ಹೆಚ್ಚಾದಂತೆ ಜಾನುವಾರು ನೀರು ಕುಡಿಯುತ್ತವೆ, ಆದ್ದರಿಂದ ರೈತರು ಹೆಚ್ಚು ಜಾನುವಾರುಗಳಿಗೆ ನೀರು ಕುಡಿಸುವುದು ಉತ್ತಮ ಎಂದು ಪಶು ಸಂಗೋಪನೆ ಇಲಾಖೆಯ ಡಾ. ಸೋಮಯ್ಯ, ಡಾ. ಸಂದೇಶ್ ರೈತರಲ್ಲಿ ಮನವಿ ಮಾಡಿದ್ದಾರೆ.