ತುಮಕೂರಿನಲ್ಲಿ ದೇವಸ್ಥಾನದ ಜಾಗವನ್ನು ಮುಸ್ಲಿಂ ವ್ಯಕ್ತಿಗಳಿಗೆ ಲೀಸ್ ಕೊಡುತ್ತಿರುವ ಸರ್ಕಾರ!

By Sathish Kumar KH  |  First Published Jul 26, 2024, 5:45 PM IST

ಸಾರ್ವಜನಿಕರ ವಿರೋಧದ ನಡುವೆಯೂ ದೇವಸ್ಥಾನದ ಜಾಗವೊಂದನ್ನು ಮುಸ್ಲಿಂ ವ್ಯಕ್ತಿಗಳಿಗೆ ಭೋಗ್ಯಕ್ಕೆ (ಲೀಸ್) ಕೊಡಲು ಕಾಂಗ್ರೆಸ್ ಸರ್ಕಾರ ಮುಂದಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.


ತುಮಕೂರು (ಜು.26): ಸ್ಥಳೀಯ ಜನರು, ಸಾರ್ವಜನಿಕರ ವಿರೋಧದ ನಡುವೆಯೂ ದೇವಸ್ಥಾನದ ಜಾಗವೊಂದನ್ನು ಮುಸ್ಲಿಂ ವ್ಯಕ್ತಿಗಳಿಗೆ ಭೋಗ್ಯಕ್ಕೆ (ಲೀಸ್) ಕೊಡಲು ಕಾಂಗ್ರೆಸ್ ಸರ್ಕಾರ ಮುಂದಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ಹೌದು, ದೇವಸ್ಥಾನದ ಜಾಗವನ್ನ ಮುಸ್ಲಿಂ ವ್ಯಕ್ತಿಗಳಿಗೆ ಲೀಸ್ ನೀಡುತ್ತಿರುವ ಪ್ರಕರಣಕ್ಕೆ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಇದರ ನಡುವೆಯೂ ಜನರ ವಿರೋಧವನ್ನು ಲೆಕ್ಕಿಸದೇ ದೇವಸ್ಥಾನದ ಜಾಗವನ್ನು ಮುಸ್ಲಿಂ ವ್ಯಕ್ತಿಗಳಿಗೆ ಭೋಗ್ಯಕ್ಕೆ ಕೊಡಲು ಗುದ್ದಲಿ ಪೂಜೆಗೆ ಮುಂದಾದ ಜಿಲ್ಲಾಡಳಿತ ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ. ಜಿಲ್ಲಾಡಳಿತದ ಅಧಿಕಾರಿಗಳು, ಕಾಮಗಾರಿ ನಡೆಸಿಯೇ ಸಿದ್ದ ಎಂದು ಮೊಂಡಾಟಕ್ಕೆ ಬಿದ್ದಿದ್ದಾರಾ? ಇನ್ನು ಜಿಲ್ಲಾಡಳಿತವು ಜನರ ಪ್ರತಿಭಟನೆಯನ್ನ ಹತ್ತಿಕ್ಕಲು ಪೊಲೀಸ್ ಇಲಾಖೆಯನ್ನ ಮುಂದೆ ಬಿಡ್ತಾ? ಎಂಬ ಅನುಮಾನಕ್ಕೆ ಎದುರಾಗಿದೆ.

Latest Videos

undefined

ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡಲು ಸಚಿವ ಸಂಪುಟ ಒಪ್ಪಿಗೆ!

ಇನ್ನು ತುಮಕೂರಿನಲ್ಲಿ ದೇವಸ್ಥಾನದ ಆವರಣದಲ್ಲಿ ನಡೆಯುವ ಸ್ಥಳೀಯ ಮಾರುಕಟ್ಟೆ ಸ್ಥಳದಲ್ಲಿ ದೊಡ್ಡ ಮಾಲ್ ನಿರ್ಮಾಣ ಮಾಡುವುದಕ್ಕೆ ಮುಸ್ಲಿಂ ವ್ಯಕ್ತಿಗಳಿಗೆ ಲೀಸ್ ಕೊಡಲಿಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಈ ಮೂಲಕ ಹಲವು ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬರುತ್ತಿದ್ದವರನ್ನು ಒಕ್ಕಲೆಬ್ಬಿಸಲು ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ. ಈಗಾಗಲೇ ಮುಸ್ಲಿಂ ವ್ಯಕ್ತಿಗೆ ಶಾಪಿಂಗ್ ಮಾಲ್ ನಿರ್ಮಾಣ ಮಾಡಲಿಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದ್ದು, ನಾಳೆ ಯೋಜನೆಯ ಕಾಮಗಾರಿಯ ಗುದ್ದಲಿ ಪೂಜೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದನ್ನು ತಡೆಯಲು ವ್ಯಾಪಾರಿಗಳು ಹಾಗೂ ಸ್ಥಳೀಯರು ಪ್ರತಿಭಟನೆ ಮಾಡುತ್ತಿದ್ದಾರೆ. ಈಗ ಕಾಮಗಾರಿಗೆ ವಿರೋಧ ಮಾಡುವವರೊಂದಿಗೆ ಸಂಧಾನ ಸಭೆ ನಡೆಸಲು ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಕಳುಹಿಸಲಾಗಿದೆ.

ಸ್ಥಳೀಯರಿಂದ ದೇವಸ್ಥಾನದ ಆವರಣದಲ್ಲಿರುವ ಮಾರುಕಟ್ಟೆ ಜಾಗವನ್ನು ಬೇರೊಬ್ಬರಿಗೆ ಕಾಮಗಾರಿ ಮಾಡಲು ಬಿಟ್ಟುಕೊಡಬಾರದು ಎಂದು ಸ್ಥಳೀಯ ಸಾರ್ವಜನಿಕರು ಮತ್ತು ಹಿಂದೂಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಪೊಲೀಸ್ ಇಲಾಖೆ ನೇತೃತ್ವದಲ್ಲಿ ಶಾಂತಿ ಸಂಧಾನ ಮಾಡಲು ಪೊಲೀಸ್ ಅಧಿಕಾರಿಗಳು ಆಗಮಿಸಿದ್ದಾರೆ. ತುಮಕೂರಿನ ಚಿಲುಪೆ ಸಭಾಭವನದಲ್ಲಿ ಪೊಲೀಸ್ ಅಧಿಕಾರಿಗಳು, ಸಾರ್ವಜನಿಕರೊಂದಿಗೆ ಸಭೆ ನಡೆಸಿ ಅಹವಾಲು ಸ್ವೀಕಾರ ಮಾಡುತ್ತಿದ್ದಾರೆ. ಆದರೆ, ಈ ಸಭೆಗೆ ಜಿಲ್ಲಾಧಿಕಾರಿ ಆಗಮಿಸಬೇಕಿದ್ದರೂ, ಗೈರಾಗುವ ಮೂಲಕ ಮುಸ್ಲಿಂ ಉದ್ಯಮಿಗಳ ಪರವಾಗಿ ನಿಲ್ಲುವುದಕ್ಕೆ ಸಿದ್ಧರಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪ ಮಾಡಿದ್ದಾರೆ. 

ವಾಲ್ಮೀಕಿ ನಿಗಮ, ಮುಡಾ ಹಗರಣ ಸಿಬಿಐ ತನಿಖೆಗೆ ಕೊಡಿ; ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಮನೆಗೆ ನಡಿ: ಬೊಮ್ಮಾಯಿ

ಇನ್ನು ಮಾರುಕಟ್ಟೆ ಜಾಗದಲ್ಲಿ ಮಾಲ್ ನಿರ್ಮಾಣ ಮಾಡುವುದಕ್ಕೆ ಅಭಿಪ್ರಾಯ ತಿಳಿಸಿ ಎಂದು ಸಾರ್ವಜನಿಕರನ್ನು ಕರೆದ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರು ಸಭೆಗೆ ಹಾಜರಾಗಿಲ್ಲ. ಪೊಲೀಸರು ಮಾತ್ರ ಸಭೆಯನ್ನು ನಡೆಸಿ, ಪ್ರತಿಭಟನಾಕಾರರ ಧ್ವನಿಯನ್ನು ಅಡಗಿಸಲು ಮುಂದಾಗಿದ್ದಾರೆ ಎಂಬ ಆರೋಪ ವ್ಯಕ್ತಬವಾಗಿದೆ. ತುಮಕೂರು ಪೊಲೀಸ್ ವರಿಷ್ಠಾಧಿಆರಿ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ವ್ಯಾಪಾರಸ್ಥರು ಮತ್ತು ಮುಖಂಡರ ಅಭಿಪ್ರಾಯ ಕೇಳೋ ಬದಲು, ನಾಳೆ ಕಾರ್ಯಕ್ರಮ ಜರುಗಿಯೇ ಜರುಗುತ್ತದೆ. ಈ ಬಗ್ಗೆ ನೀವೇನ್ ಹೇಳ್ತೀರಾ ಎಂದು ಸ್ಥಳೀಯ ಸಾರ್ವಜನಿಕರನ್ನು ಪ್ರಶ್ನೆ ಮಾಡಿದ್ದಾರೆ.

click me!