ಮಾಂಸ ಬರುತ್ತಿರುವ ಹಿನ್ನೆಲೆಯಲ್ಲಿ ಇದು ಕುರಿ ಮಾಂಸ ಅಥವಾ ಬೇರೆ ಮಾಂಸವಾ ಅನ್ನುವ ಬಗ್ಗೆ ಸಂಶಯದಿಂದ ದಾಳಿ ಮಾಡಲಾಗಿದೆ. ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಹಿಂದೂ ರಾಷ್ಟ್ರ ರಕ್ಷಣಾ ಪಡೆ ದಾಳಿ ಮಾಡಿದೆ. ಸ್ಥಳದಲ್ಲಿ ಮಾಂಸ ಸಾಗಾಟಗಾರರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಬೆಂಗಳೂರು(ಜು.26): ಅಕ್ರಮವಾಗಿ ರಾಜಸ್ಥಾನದಿಂದ ಕರ್ನಾಟಕಕ್ಕೆ ಮಾಂಸ ಸಾಗಾಟ ಮಾಡಲಾಗುತ್ತಿದೆ ಎಂಬ ಆರೋಪದ ಮೇಲೆ ಹಿಂದೂ ಸಂಘಟನೆಗಳು ಮಾಂಸ ಸಾಗಾಟ ಮಾಡುತ್ತಿದ್ದ ವಾಹನಕ್ಕೆ ಮುತ್ತಿಗೆ ಹಾಕಿದ ಘಟನೆ ಇಂದು(ಶುಕ್ರವಾರ) ನಡೆದಿದೆ.
ಜೈಪುರ್ ಮೈಸೂರ್ ಎಕ್ಸ್ ಪ್ರೆಸ್ ರೈಲಿನಲ್ಲಿ ಮಾಂಸ ಬಂದಿದ್ದು, ನೂರಾರು ಮಾಂಸದ ಬಾಕ್ಸ್ ಗಳುಳ್ಳ ವಾಹನಗಳನ್ನ ಹಿಂದೂ ಸಂಘಟನೆಗಳ ಕಾರ್ಯಕರ್ತರು ತಡೆದಿದ್ದಾರೆ. ಟ್ರೈಂ ನಂಬರ್ 12976 ರೈಲಿನಲ್ಲಿ ಸಾವಿರಾರು ಕೆಜಿ ಮಾಂಸ ಬಂದಿದೆ. ರಾಜಸ್ಥಾನದ ಜೈಪುರದಿಂದ ವಾರದ ಮೂರು ದಿನ ಬೆಂಗಳೂರಿಗೆ ಮಾಂಸ ಬರಲಿದೆ. ಬೆಂಗಳೂರಿನ ಪ್ರತಿಷ್ಟಿತ ಹೋಟೆಲ್‌ಗಳಿಗೆ ಮಾಂಸ ಸರಬರಾಜಾಗುತ್ತಿದೆ ಎಂಬ ಆರೋಪಿಸಲಾಗಿದೆ.
ಮಂಗಳೂರು: ಹಿಂದೂ ಸಂಘಟನೆಗಳ ವಿರೋಧ ನಡುವೆಯೇ ಟೆಂಡರ್, 6 ಅಂಗಡಿ ಮುಸ್ಲಿಮರಿಗೆ
ಮಾಂಸ ಬರುತ್ತಿರುವ ಹಿನ್ನೆಲೆಯಲ್ಲಿ ಇದು ಕುರಿ ಮಾಂಸ ಅಥವಾ ಬೇರೆ ಮಾಂಸವಾ ಅನ್ನುವ ಬಗ್ಗೆ ಸಂಶಯದಿಂದ ದಾಳಿ ಮಾಡಲಾಗಿದೆ. ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಹಿಂದೂ ರಾಷ್ಟ್ರ ರಕ್ಷಣಾ ಪಡೆ ದಾಳಿ ಮಾಡಿದೆ. ಸ್ಥಳದಲ್ಲಿ ಮಾಂಸ ಸಾಗಾಟಗಾರರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿದೆ.
90 ಬಾಕ್ಸ್ ಗಳಲ್ಲಿ 4500 ಕೆಜಿ ಮಟನ್ ಇದೆ. ಸಿರಾಜ್ ಶಹಜಾನ್ ಬಾಬು ಮೊತಲಿಬ್ ಒಡೆತನದ ಬಾಕ್ಸ್ ಗಳು ಇದಾಗಿವೆ. ಇವರು ಶಿವಾಜಿನಗರದ ಮಟನ್ ವ್ಯಾಪಾರಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.