ಮುಚ್ಚಿಟ್ಟಿದ್ದ ಮದುವೆಯನ್ನು ಬಿಚ್ಚಿಟ್ಟ ಚಿಕ್ಕಮಗಳೂರು ವಧು

By Web Desk  |  First Published Nov 14, 2018, 1:43 PM IST

ಮೊದಲೇ ಮದುವೆಯಾಗಿದ್ದ ವಿಷಯವನ್ನು ಮುಚ್ಚಿಟ್ಟ ವಧು ಕಢೇ ಕ್ಷಣದಲ್ಲಿ ಈ ವಿುಷಯವನ್ನು ಪೋಷಕರಿಗೆ ಹೇಳಿದ್ದಾಳೆ. ಇನ್ನೇನು ಮದುವೆ ಮಂಟಪಕ್ಕೆ ಹೋಗುವಾಗ ಖ್ಯಾತೆ ತೆಗೆದಿದ್ದಾಳೆ. ಆದರೂ, ಮದುವೆಗೆ ಒಪ್ಪಿಸಲು ವಧು ವರರ ಸಂಬಂಧಿಕರು ಯತ್ನಿಸಿದ್ದಾರೆ. ಮುಂದೆ ಆಗಿದ್ದೇನು?


ಮೈಸೂರು: ಆಗಲೇ ಪ್ರಿಯತಮನೊಂದಿಗೆ ರಿಜಿಸ್ಟ್ರಾರ್ ಮದುವೆಯಾಗಿದ್ದ ವಧುವೊಬ್ಬಳು, ಇನ್ನೇನು ಕಲ್ಯಾಣ ಮಂಟಪಕ್ಕೆ ಹೋಗಬೇಕೆನ್ನುವಾಗ ಮದುವೆಗೆ ಒಲ್ಲೆ ಎಂದು ಕೈ ಕೊಟ್ಟಿದ್ದಾಳೆ. ವಧುವಿನ ಹಠದಿಂದ ಮದುವೆ ಮುರಿದಿದೆ.

ಇಲ್ಲಿನ ರಾಮಸೇವಾ ಅರಸು ಮಂಡಳಿ ಕಲ್ಯಾಣ ಮಂಟಪದಲ್ಲಿ ಮದುವೆ ನಿಶ್ಚಯವಾಗಿತ್ತು. ಮದುವೆಗೆಂದು ಚಿಕ್ಕಮಗಳೂರಿನಿಂದ ಮೈಸೂರಿಗೆ ಬರುವವರೆಗೂ ವಧು ಸಂಗೀತಾ ಖುಷ್ ಖುಷಿಯಾಗಿಯೇ ಇದ್ದಳು. ಆದರೆ. ಕಲ್ಯಾಣ ಮಂಟಪಕ್ಕೆ ಹೋಗುವ ವೇಳೆ ಖ್ಯಾತೆ ತೆಗೆದಿದ್ದಾಳೆ.

Tap to resize

Latest Videos

ಪ್ರಿಯಕರನೊಂದಿಗೆ ಮದುವೆಯಾಗಿರುವ ವಿಷಯವನ್ನು ಮನೆಯಲ್ಲಿ ಮುಚ್ಚಿಟ್ಟಿದ್ದ ವಧು, ಕಲ್ಯಾಣ ಮಂಟಪಕ್ಕೆ ಹೋಗುವಾಗ ಪೋಷಕರಿಗೆ ತಿಳಿಸಿದ್ದಾಳೆ. ವಧುವಿನ ಈ ನಡವಳಿಕೆ ಹಾಗೂ ನಿರ್ಧಾರಕ್ಕೆ ವಧು ವರರ ಕುಟುಂಬಗಳು ಕಕ್ಕಾಬಿಕ್ಕಿಯಾಗಿವೆ. 

ಟಿ ನರಸೀಪುರ ನಿವಾಸಿ ನಿಖಿಲ್ ಅರಸ್ ಅವರೊಂದಿಗೆ ಸಂಗೀತಾ ಮದುವೆ ನಿಶ್ಚಯವಾಗಿತ್ತು. ಈಗಾಗಲೇ ಮದುವೆಯಾಗಿದೆ ಎಂದು ವಧು ಹೇಳುತ್ತಿದ್ದರೂ, ಮದುವೆಗೆ ಒಪ್ಪಿಸಲು ಉಭಯ ಕುಟುಂಬದ ಸದಸ್ಯರು ಯತ್ನಿಸುತ್ತಿದ್ದಾರೆ. ವಿಜಯನಗರದ ಸಂಬಂಧಿಕರ ಮನೆಯಲ್ಲಿ ಸಂಗೀತಾ ಉಳಿದುಕೊಂಡಿದ್ದಾರೆ.

click me!