ಪೊಲೀಸರನ್ನು ಕಂಡರೆ ಎಂದಿಗೂ ಭಯಪಡಬೇಡಿ

Published : Oct 22, 2018, 05:37 PM IST
ಪೊಲೀಸರನ್ನು ಕಂಡರೆ ಎಂದಿಗೂ ಭಯಪಡಬೇಡಿ

ಸಾರಾಂಶ

ಪೊಲೀಸರನ್ನು ಕಂಡರೆ ಭಯ ಪಡದೆ ತಮ್ಮ ಕಷ್ಟಗಳನ್ನು ದೂರಿನ ಮುಖಾಂತರ ಠಾಣೆಗೆ ಬಂದು ತಿಳಿಸಿದಾಗ ಕಾನೂನಿನ ಚೌಕಟ್ಟಿನಲ್ಲಿ ಸಮಸ್ಯೆ ಬಗೆಹರಿಸಲು ಪೊಲೀಸರು ನೆರವಾಗುತ್ತಾರೆ. ಸಾರ್ವಜನಿಕರು ಪೊಲೀಸರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಎಲ್ಲೇ ಅಪರಾಧಗಳು ನಡೆದರೂ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೆ ಪೊಲೀಸರು ಸ್ಥಳಕ್ಕೆ ಧಾವಿಸುತ್ತಾರೆ

ಪಿರಿಯಾಪಟ್ಟಣ[ಅ.22]: ಸಾರ್ವಜನಿಕರು ಪೊಲೀಸರನ್ನು ಕಂಡರೆ ಭಯಪಡುವ ಅಗತ್ಯವಿಲ್ಲ ತಮ್ಮ ಸಮಸ್ಯೆಗಳ ಬಗ್ಗೆ ದೂರು ನೀಡಿ ಕಾನೂನು ರೀತಿ ಪರಿಹಾರ ಕಂಡುಕೊಳ್ಳಬಹುದು ಎಂದು ಎಸ್‌ಐ ಗಣೇಶ್ ಹೇಳಿದರು.

ಪಟ್ಟಣದ ಆದಿಚುಂಚನಗಿರಿ ಪದವಿಪೂರ್ವ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಪೊಲೀಸ್ ಠಾಣೆಗೆ ಭೇಟಿ ನೀಡಿದ ಸಂದರ್ಭ ಪೊಲೀಸರು ಠಾಣೆಯಲ್ಲಿ ನಿರ್ವಹಿಸುವ ಕಾರ್ಯವೈಖರಿ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.

ಸಮಾಜದಲ್ಲಿ ನಡೆಯುವ ಅಪರಾಧಗಳ ಸಂಖ್ಯೆ ಕಡಿಮೆ ಮಾಡಲು ಹಾಗೂ ಅಪರಾಧಿಗಳನ್ನು ಪತ್ತೆ ಹಚ್ಚಲು ಪೊಲೀಸರು ಹಗಲಿರುಳೆನ್ನದೆ ತಮ್ಮ ಕುಟುಂಬದವರಿಂದ ದೂರವಿದ್ದು ಸಾರ್ವಜನಿಕ ಸೇವೆಗೆ ಸಿದ್ಧರಿರುತ್ತಾರೆ. ಪೊಲೀಸರನ್ನು ಕಂಡರೆ ಭಯ ಪಡದೆ ತಮ್ಮ ಕಷ್ಟಗಳನ್ನು ದೂರಿನ ಮುಖಾಂತರ ಠಾಣೆಗೆ ಬಂದು ತಿಳಿಸಿದಾಗ ಕಾನೂನಿನ ಚೌಕಟ್ಟಿನಲ್ಲಿ ಸಮಸ್ಯೆ ಬಗೆಹರಿಸಲು ಪೊಲೀಸರು ನೆರವಾಗುತ್ತಾರೆ. ಸಾರ್ವಜನಿಕರು ಪೊಲೀಸರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಎಲ್ಲೇ ಅಪರಾಧಗಳು ನಡೆದರೂ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೆ ಪೊಲೀಸರು ಸ್ಥಳಕ್ಕೆ ಧಾವಿಸುತ್ತಾರೆ ಎಂದು ತಿಳಿಸಿದರು.

ಎಎಸ್‌ಐಗಳಾದ ಚಿಕ್ಕನಾಯಕ , ಶೇಖರ್, ಸಿಬ್ಬಂದಿಯಾದ ಅನಂತ್, ಮಹೇಶ್, ಸಂಸ್ಥೆಯ ಪ್ರಾಂಶುಪಾಲ ಗೋವಿಂದೇಗೌಡ, ಎನ್‌ಎಸ್ ಎಸ್ ಅಧಿಕಾರಿಗಳಾದ ಬಸಲಾಪುರ ಆನಂದ್, ದೀಪಾ, ಗಿರೀಶ್ ಇದ್ದರು.

PREV
click me!

Recommended Stories

ಮೈಸೂರು, ಮಂಡ್ಯದಲ್ಲಿ ಬಾಲ್ಯ ವಿವಾಹಕ್ಕೆ ಗಣನೀಯ ಇಳಿಕೆ, ಸರ್ಕಾರದಿಂದ ಸಿಕ್ಕಿತು ನೆಮ್ಮದಿಯ ಸುದ್ದಿ
ಮೈಸೂರು ಏಕತಾ ಮಹಲ್‌ ವಿವಾದ, ಕೋರ್ಟ್ ಮೆಟ್ಟಲೇರಿದ ರಾಜಮಾತೆ ಪ್ರಮೋದಾದೇವಿ!