ಹಲೋ ಕಂದಾಯ ಸಚಿವರೆ ಕಾರ್ಯಕ್ರಮ ಅನುಷ್ಠಾನದಲ್ಲಿ ಉಕ ಪ್ರಥಮ

By Kannadaprabha News  |  First Published Aug 19, 2022, 10:09 AM IST

ಕಾರವಾರ ಜಿಲ್ಲೆಯಲ್ಲಿ ಹಲೋ ಕಂದಾಯ ಸಚಿವರೆ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಇದರ ಅನುಷ್ಠಾನದಲ್ಲಿ ಉತ್ತರ ಕನ್ನಡ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. 72 ಗಂಟೆ ಕಾಲಾವಕಾಶವಿದ್ದರೂ ಸಹಾಯವಾಣಿಗೆ ಕರೆ ಬಂದ ಬಹುತೇಕ ಅರ್ಜಿಗಳು ಎರಡು ದಿನದ ಒಳಗಾಗಿಯೇ ವಿಲೇವಾರಿ ಮಾಡಲಾಗಿದೆ. 


ಕಾರವಾರ (ಆ.19) : ಜಿಲ್ಲೆಯಲ್ಲಿ ಹಲೋ ಕಂದಾಯ ಸಚಿವರೆ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಇದರ ಅನುಷ್ಠಾನದಲ್ಲಿ ಉತ್ತರ ಕನ್ನಡ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. 72 ಗಂಟೆ ಕಾಲಾವಕಾಶವಿದ್ದರೂ ಸಹಾಯವಾಣಿಗೆ ಕರೆ ಬಂದ ಬಹುತೇಕ ಅರ್ಜಿಗಳು ಎರಡು ದಿನದ ಒಳಗಾಗಿಯೇ ವಿಲೇವಾರಿ ಮಾಡಲಾಗಿದೆ. ಒಟ್ಟು 1082 ಅರ್ಜಿ ಸ್ವೀಕರಿಸಲಾಗಿದ್ದು, 1078 ಪರಿಶೀಲನೆ ಪೂರ್ಣಗೊಂಡಿದೆ. 1003 ಅಟಲ್‌ ಜೀ ಸ್ನೇಹ ಕೇಂದ್ರ(ಎಜೆಎಸ್‌ಕೆ) ಪೋರ್ಟಲ್‌ನಲ್ಲಿ ಅಪ್‌ಲೊಡ್‌ ಆಗಿದೆ. ಕೇವಲ 2 ತಿರಸ್ಕಾರಗೊಂಡಿವೆ.

ಮೂರೇ ದಿನದಲ್ಲಿ ಭೂಪರಿವರ್ತನೆ: ಸಚಿವ ಅಶೋಕ್‌

Latest Videos

undefined

ಹೊನ್ನಾವರ(Honnavara)ದಲ್ಲಿ 103 ಅರ್ಜಿಗಳನ್ನು ಎಜೆಎಸ್‌ಕೆ(AJSK)ಯಲ್ಲಿ ಅಪ್‌ಲೊಡ್‌ ಆಗಿದ್ದು, 1 ತಿರಸ್ಕಾರವಾಗಿದೆ. 8 ಅರ್ಜಿ ಅರ್ಹತೆ ಪಡೆದುಕೊಂಡಿಲ್ಲ. 1ಅರ್ಜಿಗೆ ದಾಖಲೆ ಲಭ್ಯವಾಗಿಲ್ಲ. ಕಾರವಾರದಲ್ಲಿ 6 ಅರ್ಜಿ ಸ್ವೀಕಾರವಾಗಿದ್ದು, 1 ಅರ್ಜಿ ತಿರಸ್ಕಾರವಾಗಿದೆ. ಅಂಕೋಲಾದಲ್ಲಿ 10 ಎಜೆಎಸ್‌ಕೆ ಸ್ವೀಕರಿಸಿದ್ದು, 2ಕ್ಕೆ ದಾಖಲೆ ಸಲ್ಲಿಸಿಲ್ಲ. 1ಕ್ಕೆ ಮಾಹಿತಿ ಸಿಕ್ಕಿಲ್ಲ. ಭಟ್ಕಳ ತಾಲೂಕಿನಲ್ಲಿ 1 ಎಜೆಎಸ್‌ಕೆಯಿಂದ ಸ್ವೀಕಾರವಾಗಿದ್ದು, 3ಕ್ಕೆ ದಾಖಲೆ ಸಲ್ಲಿಸಿಲ್ಲ. ದಾಂಡೇಲಿಯಲ್ಲಿ 71 ಸ್ವೀಕಾರವಾಗಿದ್ದು, 1ಕ್ಕೆ ದಾಖಲೆ ಇಲ್ಲ. ಹಳಿಯಾಳದಲ್ಲಿ 622 ಅರ್ಜಿ ಸ್ವೀಕಾರವಾಗಿದ್ದು, 19 ದಾಖಲೆ ನೀಡಿಲ್ಲ. 10 ಅರ್ಜಿದಾರರ ಮಾಹಿತಿ ಸಿಕ್ಕಿಲ್ಲ.

ಕುಮಟಾ 46 ಅರ್ಜಿ ಅಪ್‌ಲೋಡಾಗಿದ್ದು, 6 ದಾಖಲೆ ಸಲ್ಲಿಕೆಯಾಗಿಲ್ಲ. 1 ಅರ್ಜಿಗೆ ದಾಖಲೆ ಸಿಕ್ಕಿಲ್ಲ. ಮುಂಡಗೋಡ 1 ಅರ್ಜಿ ಸ್ವೀಕಾರವಾಗಿದ್ದು, 1 ಅರ್ಜಿ ದಾಖಲೆ, 1 ಅರ್ಜಿಯ ಮಾಹಿತಿ ಸಿಕ್ಕಿಲ್ಲ. ಸಿದ್ದಾಪುರ 13 ಅರ್ಜಿ ಅಪ್‌ಲೋಡ್‌ ಆಗಿದ್ದು, 4 ದಾಖಲೆ ಲಭ್ಯವಾಗಿಲ್ಲ. ಶಿರಸಿಯಿಂದ 45 ಅರ್ಜಿ ಸ್ವೀಕರಿಸಿದ್ದು, 7 ಮಾಹಿತಿ, 1 ದಾಖಲೆ ಸಿಕ್ಕಿಲ್ಲ. ಯಲ್ಲಾಪುರದಿಂದ 83 ಅರ್ಜಿ ಸ್ವೀಕಾರವಾಗಿದ್ದು, 1 ತಿರಸ್ಕಾರ, 5 ದಾಖಲೆ, 2 ಮಾಹಿತಿ ಸಿಕ್ಕಿಲ್ಲ.

ಸರ್ಕಾರದ ನಡೆ ಹಳ್ಳಿ ಕಡೆ: ಉತ್ತರ ಕನ್ನಡದಲ್ಲಿ ಆರ್.ಅಶೋಕ್‌ ಗ್ರಾಮ ವಾಸ್ತವ್ಯ

ಏನಿದು ಕಾರ್ಯಕ್ರಮ?: ಅಂಕೊಲಾ ತಾಲೂಕಿನ ಅಚವೆಯಲ್ಲಿ 2022ರ ಏಪ್ರಿಲ್‌ನಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್‌. ಅಶೋಕ ‘ಹಲೋ ಕಂದಾಯ ಸಚಿವರೆ’ ಕಾರ್ಯಕ್ರಮ ಘೋಷಣೆ ಮಾಡಿದ್ದರು. ಉಚಿತ ಸಹಾಯವಾಣಿ ಸಂಖ್ಯೆ 155245ಕ್ಕೆ ಕರೆ ಮಾಡಿ ಆಧಾರ್‌ ಸಂಖ್ಯೆ ನೀಡಿದ್ದಲ್ಲಿ ಸಂಬಂಧಿಸಿದ ಫಲಾನುಭವಿಗೆ ಮುಂದಿನ 72 ಗಂಟೆಯೊಳಗೆ ಪಿಂಚಣಿ ಮತ್ತು ಆದೇಶದ ಪ್ರತಿಯನ್ನು ಅವರ ಮನೆಗೆ ತೆರಳಿ ವಿತರಣೆ ಮಾಡುವ ಕಾರ್ಯಕ್ರಮ ಇದಾಗಿದೆ.

ಈ ಕಾರ್ಯಕ್ರಮದ 1000ನೇ ಫಲಾನುಭವಿಯಾದ ತಾಲೂಕಿನ ಚೇಂಡಿಯಾದ ಮಧುಕರ ತುವಾ ನಾಯ್ಕಗೆ (71) ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಫಲಾನುಭವಿಯ ಮನೆ ಬಾಗಿಲಿಗೆ ಪಿಂಚಣಿ ಆದೇಶ ತಲುಪಿಸಿದ್ದಾರೆ. ಸಂಧ್ಯಾ ಸುರಕ್ಷಾ ಯೋಜನೆಯಡಿ .1200 ಮಾಸಾಶನವು ಮಂಜೂರಿಯಾಗಿದೆ. ಕಾರವಾರ ತಹಸೀಲ್ದಾರ್‌ ನಿಶ್ಚಲ್‌ ನರೋನ್ಹಾ, ತಹಸೀಲ್ದಾರ್‌ (ಗ್ರೇಡ್‌-2) ಶ್ರೀದೇವಿ ಭಟ್‌, ಸಹಾಯಕ ನಿರ್ದೆಶಕ ಪ್ರಶಾಂತ್‌ ಮೊದಲಾದವರು ಇದ್ದರು.

click me!