ಅಡಕೆ ಕೊಳೆರೋಗ ನಿಯಂತ್ರಣಕ್ಕೆ ಸಿಗದ ಸಹಾಯಧನ

By Kannadaprabha News  |  First Published Aug 19, 2022, 9:07 AM IST

ಅಡಕೆ ಬೆಳೆಗೆ ಕೊಳೆ ರೋಗ ಜಾಸ್ತಿ ಆಗುತ್ತಿದ್ದು, ಬೋರ್ಡೋ ತಯಾರಿಕೆಯ ಮೈಲುತುತ್ತದ ಸಹಾಯಧನಕ್ಕೆ ರೈತರು ಅರ್ಜಿ ಸಲ್ಲಿಸಿ ಕಾಯತೊಡಗಿದ್ದಾರೆ. ಇದುವರೆಗೂ ಸಹಾಯಧನ ಸಿಗದೆ ಬೆಳೆಗಾರರು ಕಂಗಾಲಾಗಿದ್ದಾರೆ.


 ಶಿರಸಿ (ಆ.19) : ಅಡಕೆ ಬೆಳೆಗೆ ಕೊಳೆ ರೋಗ ಜಾಸ್ತಿ ಆಗುತ್ತಿದ್ದು, ಬೋರ್ಡೋ ತಯಾರಿಕೆಯ ಮೈಲುತುತ್ತದ ಸಹಾಯಧನಕ್ಕೆ ರೈತರು ಅರ್ಜಿ ಸಲ್ಲಿಸಿ ಕಾಯತೊಡಗಿದ್ದಾರೆ. ಇನ್ನೊಂದೆಡೆ ಸರ್ಕಾರದಿಂದ ಸೂಕ್ತ ಸಹಾಯಧನ ಇಲ್ಲದೇ ಇಲಾಖೆ ಅಸಹಾಯಕ ಸ್ಥಿತಿಯಲ್ಲಿದೆ. ಮಗ್ರ ತೋಟಗಾರಿಕಾ ಬೆಳೆಗಳ ಕೀಟ ಹಾಗೂ ರೋಗಗಳ ನಿಯಂತ್ರಣ ಯೋಜನೆಯಡಿ ಮೈಲುತುತ್ತ ಸಬ್ಸಿಡಿ ನೀಡಲಾಗುತ್ತಿತ್ತು. ಆದರೆ, ಅನುದಾನ ಕಳೆದ ಎರಡು ವರ್ಷಗಳಿಂದ ಬಿಡುಗಡೆ ಆಗಿಲ್ಲ. ಈ ವರ್ಷ ಜಿಲ್ಲೆಗೆ ಅಂತೂ .17.25 ಲಕ್ಷ ಮಂಜೂರಾಗಿದೆ. ಆದರೆ, 469 ರೈತರು ಅರ್ಜಿ ಸಲ್ಲಿಸಿದ್ದು, ಈ ಅನುದಾನ ಯಾವುದಕ್ಕೂ ಸಾಲದಾಗಿದೆ. ಹೀಗಾಗಿ ಮೊದಲು ಅರ್ಜಿ ನೀಡಿದ ಒಂದಷ್ಟುರೈತರಿಗೆ ಮಾತ್ರ ಸೌಲಭ್ಯ ದೊರೆಯುವ ಸಾಧ್ಯತೆ ಇದೆ.

 

Latest Videos

undefined

Chitradurga; ಜಿಟಿ ಜಿಟಿ ಮಳೆಗೆ ಅಡಿಕೆ, ಈರುಳ್ಳಿ ಬೆಳೆ ಸಂಪೂರ್ಣ ನಾಶ

ಯಾವುದೇ ಒಂದು ಯೋಜನೆ ಅದು ರೈತಸ್ನೇಹಿ ಆಗಿರಬೇಕಾದರೆ ಫಲಾನುಭವಿ ರೈತರಿಗೆ ಪರಿಪೂರ್ಣವಾಗಿ ದೊರೆಯಬೇಕು. ಆದರೆ ಈ ರೀತಿ ಅನುದಾನ ಬಿಡಿಗಾಸು ಲಭ್ಯವಾದರೆ ಯೋಜನೆ ಇದ್ದೂ ನಿಷ್ೊ್ರಯೋಜಕವಾಗುತ್ತದೆ ಎಂಬ ಆಕ್ಷೇಪ ಅಡಕೆ ಬೆಳೆಗಾರರ ವಲಯದಿಂದ ಕೇಳಿಬರುತ್ತಿದೆ.

ಯೋಜನೆಯ ಪ್ರಕಾರ ಮೈಲುತುತ್ತಕ್ಕೆ ಶೇ.75ರಷ್ಟುಸಬ್ಸಿಡಿ ನೀಡಲಾಗುತ್ತದೆ. ಯೋಜನೆಯಡಿ ಒಬ್ಬ ರೈತನಿಗೆ 1 ಹೆಕ್ಟೇರ್‌ವರೆಗೆ 10 ಕೆಜಿ ಮೈಲುತುತ್ತಕ್ಕೆ ಸಬ್ಸಿಡಿ ದೊರೆಯಲಿದೆ. ಕೆಜಿಗೆ .320 ದರದ ಮೈಲುತುತ್ತಕ್ಕೆ ಈ ಸಬ್ಸಿಡಿ ಸೌಲಭ್ಯ ದೊರೆಯುತ್ತದೆ. ಯೋಜನೆಯಡಿ ಸಬ್ಸಿಡಿ ನೀಡುವುದಕ್ಕೆ ಕನಿಷ್ಠ .60-70 ಲಕ್ಷ ಬೇಕಾಗುತ್ತದೆ. ಹಿಂದೆಲ್ಲ ಶಿರಸಿ ತಾಲೂಕಿಗೆ .30 ಲಕ್ಷ ಅನುದಾನ ಸಿಗುತ್ತಿತ್ತು. ಆದರೆ ಈ ವರ್ಷ .3 ಲಕ್ಷಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ.

ಅಲ್ಪಸ್ವಲ್ಪ ಅನುದಾನ ಲಭ್ಯ ಆಗುತ್ತಿರುವುದರಿಂದ ಅರ್ಜಿ ಸಲ್ಲಿಸಿದ ಅದೆಷ್ಟೋ ರೈತರಿಗೆ ಸೌಲಭ್ಯ ಸಿಗದಂತಾಗಿದೆ. ಕೇವಲ ಅರ್ಜಿ ಸಲ್ಲಿಕೆಗೆ ಮಾತ್ರ ಸೀಮಿತವಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 469 ಮಂದಿ ಅರ್ಜಿ ಸಲ್ಲಿಸಿದ್ದು ತೋಟಗಾರಿಕಾ ಕ್ಷೇತ್ರಕ್ಕೆ ಸಂಬಂಧಿಸಿ ಆಯಾ ತಾಲೂಕುಗಳಿಗೆ .35 ಸಾವಿರದಿಂದ .3 ಲಕ್ಷವರೆಗೆ ಅನುದಾನ ನೀಡುವ ಗುರಿ ನಿಗದಿಪಡಿಸಲಾಗಿದೆ. ಅನುದಾನ ಕಡಿಮೆ ಇರುವುದರಿಂದ ಮೊದಲು ಅರ್ಜಿ ಸಲ್ಲಿಸಿದವರಿಗೆ ಸಬ್ಸಿಡಿ ನೀಡಲಾಗುತ್ತಿದೆ.

ಫಸಲಿಗೆ ಬಂದ ಅಡಿಕೆಗೆ ಕನ್ನ: ರಾತ್ರೋ ರಾತ್ರಿ ತೋಟಕ್ಕೆ ನುಗ್ಗಿ ಅಡಿಕೆ ಕದಿಯುತ್ತಿರುವ ಕಳ್ಳರು

ಯಾವ್ಯಾವ ತಾಲೂಕಿಗೆ ಎಷ್ಟೆಷ್ಟು..?

ತಾಲೂಕು ಅನುದಾನ ನಿಗದಿ ಅರ್ಜಿ ಸಲ್ಲಿಸಿದ ರೈತರು

ಶಿರಸಿ .3.03 ಲಕ್ಷ 125

ಸಿದ್ದಾಪುರ .2.95 ಲಕ್ಷ 122

ಜೋಯಿಡಾ .1.15ಲಕ್ಷ 58

ಮುಂಡಗೋಡ .84ಸಾವಿರ 50

ಹೊನ್ನಾವರ .1.92ಲಕ್ಷ 50

ಭಟ್ಕಳ .75,000 40

ಕುಮಟಾ .2.79ಲಕ್ಷ 28

ಯಲ್ಲಾಪುರ .75ಸಾವಿರ 20

ಹಳಿಯಾಳ .1.02ಲಕ್ಷ 20

ಅಂಕೋಲಾ .38,000 9

ಕಾರವಾರ .1.66ಲಕ್ಷ

ಸಮಗ್ರ ತೋಟಗಾರಿಕಾ ಬೆಳೆಗಳ ಕೀಟ ಹಾಗೂ ರೋಗಗಳ ನಿಯಂತ್ರಣ ಯೋಜನೆಯಡಿ ಮೈಲುತುತ್ತ ಸಬ್ಸಿಡಿಗೆ ಜಿಲ್ಲೆಗೆ .17.25 ಲಕ್ಷ ಅನುದಾನ ಲಭ್ಯವಿದೆ. ಅದರಲ್ಲಿ ಮೊದಲು ಅರ್ಜಿ ಸಲ್ಲಿಸಿದ ರೈತರಿಗೆ ಆದ್ಯತೆ ನೀಡಲಾಗುತ್ತದೆ.

-ಬಿ.ಪಿ. ಸತೀಶ- ಜಿಲ್ಲಾ ತೋಟಗಾರಿಕಾ ಉಪನಿರ್ದೇಶಕ

click me!