ಬಸವರಾಜ ಹಿರೇಮಠ
ಧಾರವಾಡ (ಅ.15) : ಬಿಆರ್‌ಟಿಎಸ್ ರಸ್ತೆ ನಿರ್ಮಾಣ ಆದಾಗಿನಿಂದಲೂ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನರಿಗೆ ಒಂದಲ್ಲ ಒಂದು ತೊಂದರೆಗಳು ತಪ್ಪಿಲ್ಲ. ಈ ರಸ್ತೆಯಲ್ಲಿ ಅಪಘಾತಗಳು ತುಸು ಕಡಿಮೆ ಆಗಿವೆ ಎನ್ನುವಷ್ಟರಲ್ಲಿ ಅವೈಜ್ಞಾನಿಕ ರಸ್ತೆ ನಿರ್ಮಾಣ ಹಾಗೂ ನಿರ್ವಹಣೆ ಕೊರತೆಯಿಂದ ರಸ್ತೆಯಲ್ಲಿ ನೀರು ನಿಲ್ಲುತ್ತಿದೆ. ಇದರಿಂದ ಸವಾರರು ಸಂಚರಿಸಲು ಪ್ರಹಸನ ಪಡುವಂತೆ ಆಗಿದೆ.
undefined
ಹನಿಟ್ರ್ಯಾಪ್‌ಗೆ ಕೆಡವಿ ನಿವೃತ್ತ ಪ್ರಾಧ್ಯಾಪಕನಿಂದ 21 ಲಕ್ಷರೂ. ಪೀಕಿದ ಚೆಂದುಳ್ಳಿ ಚೆಲುವೆ
ಮಳೆಯಾದರೆ ಸಾಕು ಹುಬ್ಬಳ್ಳಿಯಿಂದ ಧಾರವಾಡ, ಧಾರವಾಡದಿಂದ ಹುಬ್ಬಳ್ಳಿಗೆ ಕಡೆಗೆ ಹೋಗದ ಸ್ಥಿತಿ ಉಂಟಾಗಿದೆ. ರಸ್ತೆಯ ಪಶ್ಚಿಮ ಭಾಗ ಎತ್ತರ ಪ್ರದೇಶವಿರುವ ಕಾರಣ ಆ ಪ್ರದೇಶದಿಂದ ಹರಿದು ಬರುವ ನೀರು ರಸ್ತೆ ದಾಟಿ ಹೋಗಲು ಪರಾರಯಯ ಮಾರ್ಗ ಇಲ್ಲದೆ ಗಟಾರು ತುಂಬಿ ರಸ್ತೆ ನದಿಯಂತಾಗುತ್ತಿದೆ. ಆರಂಭದಲ್ಲಿ ಟೋಲ್‌ನಾಕಾ ಬಳಿ ಈ ಸಮಸ್ಯೆ ಉಂಟಾಗಿ ಮನೆ-ಅಂಗಡಿಗಳಿಗೆ ನೀರು ನುಗ್ಗಿ ಕೋಟ್ಯಂತರ ರುಪಾಯಿ ಹಾನಿಯಾಗಿತ್ತು. ತೀವ್ರ ಹೋರಾಟದ ಆನಂತರ ಈ ಸಮಸ್ಯೆ ಸರಿಪಡಿಸಲಾಗಿತ್ತು. ಕೆಲವೇ ದಿನಗಳಲ್ಲಿ ಜ್ಯೂಬಿಲಿ ವೃತ್ತ, ಕೋರ್ಚ್ ವೃತ್ತ, ಕೆಎಂಎಫ್, ಸನಾ ಕಾಲೇಜು, ಉಣಕಲ್, ವಿದ್ಯಾನಗರ ಕಡೆಗಳಲ್ಲಿ ಮಳೆ ನೀರು ಸಮಸ್ಯೆಯಾಗುತ್ತಿದೆ.
ಸೀಸ್ ಆದ ವಾಹನಗಳು:
ಇತ್ತೀಚೆಗೆ ಸುರಿದ ಮಳೆಗೆ ಕೆಎಂಎಫ್ ಬಳಿ ನೀರಿನಲ್ಲಿ ಕಾರುಗಳು ಹೋಗುವಾಗ ನೀರು ನುಗ್ಗಿ ಎಂಜಿನ್ ಸೀಸ್ ಆಗಿವೆ. ಹತ್ತಕ್ಕೂ ಹೆಚ್ಚು ಕಾರುಗಳು ಸೀಸ್ ಆಗಿದ್ದು ಸವಾರರು ವಾಹನ ಅಲ್ಲಿಯೇ ಬಿಟ್ಟು ಬರುವಂತಾಗಿತ್ತು. ಬಳಿಕ ಬಿಆರ್‌ಟಿಸ್ ಸಿಬ್ಬಂದಿ ಆಗಮಿಸಿ ಗಟಾರುಗಳಲ್ಲಿ ಸಿಲುಕಿದ ಕಸ ಹೊರತೆಗೆದು ನೀರು ಹರಿದು ಹೋಗುವಂತೆ ಮಾಡಿದರು. ಬಳಿಕ ಸವಾರರು ತಮ್ಮ ವಾಹನ ಒಯ್ಯಬೇಕಾಯಿತು. ಅದೇ ರೀತಿ ಬೈಕ್ ಸವಾರರು ಸಹ ಪ್ರವಾಹ ರೀತಿಯಲ್ಲಿ ಬರುತ್ತಿದ್ದ ನೀರಿನಲ್ಲಿ ಸಿಲುಕಿ ಪರದಾಡಿದ ಉದಾಹರಣೆಗಳಿವೆ. ಈ ಮೊದಲು ಮೇಲಿನ ಪ್ರದೇಶದಿಂದ ಬಂದ ನೀರು ಗಟಾರು ಅಥವಾ ರಸ್ತೆ ಮೂಲಕ ಹರಿದು ಕೋಳಿಕೆರೆ, ನವಲೂರು ಕೆರೆಗೆ ಹೋಗುತ್ತಿತ್ತು. ಬಿಆರ್‌ಟಿಎಸ್ ರಸ್ತೆಯಾದ ನಂತರ ಡಿವೈಡರ್ ಹಾಕಿದ ಫಲವಾಗಿ ನೀರು ನಿಲ್ಲುವಂತಾಗಿದೆ. ಅದು ಸರಾಗವಾಗಿ ಹರಿದು ಹೋಗುವಂತೆ ಯಾವುದೇ ಯೋಜನೆ ರೂಪಿಸದ ಕಾರಣ ಬರೀ ಬಿಆರ್‌ಟಿಎಸ್ ವಾಹನ ಮಾತ್ರವಲ್ಲದೇ ಪಕ್ಕದ ರಸ್ತೆಯಲ್ಲಿ ಸಂಚರಿಸುವವರಿಗೂ ತೀವ್ರ ತೊಂದರೆಯಾಗಿದೆ.
ಬಿಆರ್‌ಟಿಎಸ್ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಎಲ್ಲೆಲ್ಲಿ ನೀರು ನಿಂತು ಅವಾಂತರ ಸೃಷ್ಟಿಸುತ್ತದೆಯೋ ಅಲ್ಲಿ ಹೋಗಿ ನೀರು ಸರಾಗವಾಗಿ ಹರಿದು ಹೋಗುವಂತೆ ಯೋಜನೆ ರೂಪಿಸಬೇಕು. ಇಲ್ಲದೆ ಇದ್ದಲ್ಲಿ ಅವಳಿ ನಗರದ ಜನತೆಗೆ ಸಂಕಷ್ಟಮಾತ್ರ ತಪ್ಪಿದ್ದಲ್ಲ. ಈ ಬಗ್ಗೆ ಜನರು ಸಹ ಸಂಸ್ಥೆ ವಿರುದ್ಧ ಪ್ರತಿಭಟಿಸುವ ಕಾಲವೂ ದೂರವಿಲ್ಲ.
ಹುಬ್ಬಳ್ಳಿಯಲ್ಲಿ ಖೋಟಾ ನೋಟು ದಂಧೆ; ಮೂವರನ್ನು ಬಂಧಿಸಿದ ಪೊಲೀಸರು
ಬಿಆರ್‌ಟಿಎಸ್ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ಕೋಟಿಗಟ್ಟಲೇ ಅವ್ಯವಹಾರವಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ ಅವರು ಪತ್ರ ಬರೆದು ಪ್ರಚಾರ ಪಡೆದಿದ್ದರು. . 1200 ಕೋಟಿ ವೆಚ್ಚ ಮಾಡಿದ ಯೋಜನೆಯಲ್ಲಿ ನೀರು ಹರಿದು ಹೋಗುವ ಯೋಚನೆ ಬಂದಿಲ್ಲವೇ? ಅವಳಿ ನಗರ ಅಭಿವೃದ್ಧಿಯತ್ತ ಹೊರಟಿದೆಯೋ ಅಥವಾ ಹಾಳಾಗುತ್ತಿದೆಯೋ ಗೊತ್ತಾಗುತ್ತಿಲ್ಲ. ಪ್ರತಿ ಮಳೆಗೆ ಜನರು ರಸ್ತೆ ದಾಟಲು ಪ್ರಹಸನ ಪಡುತ್ತಿದ್ದಾರೆ. ಕೂಡಲೇ ಈ ಸಮಸ್ಯೆಗೆ ಪರಿಹಾರ ಒದಗಿಸಬೇಕು.
ಗುರುರಾಜ ಹುಣಸೀಮರದ ಜೆಡಿಎಸ್ ಮುಖಂಡರು