ಪ್ರೀತಿಯ ಶ್ವಾನ ಸಾವು; ಅನ್ನ, ನೀರು ಬಿಟ್ಟು ಅಳುತ್ತಾ ಕುಳಿತ ಕುಟುಂಬಸ್ಥರು

By Ravi Janekal  |  First Published Oct 15, 2022, 11:10 AM IST

ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ. ಹಾಗಾಗಿಯೇ ನಾಯಿ ಮನುಷ್ಯನೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಇಂತಹ ಪ್ರೀತಿಯ ಶ್ವಾನ ಹೃದಯಾಘಾತದಿಂದ ಸಾವಿಗೀಡಾದ ಕಾರಣ ಕುಟುಂಬದವರು ಬಿಕ್ಕಿ ಬಿಕ್ಕಿ ಅತ್ತ ಪ್ರಸಂಗ ಬಿಸಿಲೂರು ಕಲಬುರಗಿಯಲ್ಲಿ ನಡೆದಿದೆ.


ಕಲಬುರಗಿ (ಅ.15) : ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ. ಹಾಗಾಗಿಯೇ ನಾಯಿ ಮನುಷ್ಯನೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಇಂತಹ ಪ್ರೀತಿಯ ಶ್ವಾನ ಹೃದಯಾಘಾತದಿಂದ ಸಾವಿಗೀಡಾದ ಕಾರಣ ಕುಟುಂಬದವರು ಬಿಕ್ಕಿ ಬಿಕ್ಕಿ ಅತ್ತ ಪ್ರಸಂಗ ಬಿಸಿಲೂರು ಕಲಬುರಗಿಯಲ್ಲಿ ನಡೆದಿದೆ.

ಪ್ರೀತಿಯ ಶ್ವಾನದ ಅಗಲಿಕೆಯಿಂದ ಹೊರಬರಲು ಚಿರತೆ ದತ್ತು ಪಡೆದ ಯುವತಿ

Latest Videos

undefined

ಹೌದು, ಕಳೆದ ಆರು ವರ್ಷಗಳಿಂದ ಮನೆಯಲ್ಲಿ ಕುಟುಂಬ ಸದಸ್ಯನಂತೆ ಜೀವಿಸುತ್ತಿದ್ದ, ,ಎಲ್ಲದರಲ್ಲೂ ಭಾಗಿಯಾಗುತ್ತಿದ್ದ ಮುದ್ದು ಶ್ವಾನ ಕ್ಯಾಂಡಿ(Candy) ಇನ್ನಿಲ್ಲ. ಈ ಕ್ಯಾಂಡಿ ಅಗಲಿಕೆ ಕಲಬುರಗಿ(Kalaburagi)ಯ ಈ ಕುಟುಂಬದವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂದು ಬೆಳಗ್ಗೆ ನೋಡಿದಾಗ ಕ್ಯಾಂಡಿ ಹೃದಯಾಘಾತ(Heart attack)ದಿಂದ ಕೊನೆಯುಸಿರೆಳೆದಿದೆ. ಮನೆಯಲ್ಲಿ ಊಟ ತಿಂಡಿಯೂ ಮಾಡದೇ, ಮೃತ ಕ್ಯಾಂಡಿಯ ಸುತ್ತ ಕುಳಿತು ಶೋಕಿಸುತ್ತಿರುವ ದೃಶ್ಯ ಮನಕಲಕುವಂತಿದೆ. 

ಕಲಬುರಗಿ ‌ನಗರದ ನ್ಯೂ ರಾಘವೇಂದ್ರ ಕಾಲೋನಿ(New Raghavendra colony)ಯಲ್ಲಿರುವ ಮೋಹನ‌ ಕುಲಕರ್ಣಿ(Mohan Kulkarni) ಎಂಬುವರಿಗೆ ಸೇರಿದ ನಾಯಿ, ಕ್ಯಾಂಡಿಯ ಅಗಲಿಕೆಯಿಂದ ಕುಲ್ಕರ್ಣಿ ಕುಟುಂಬ ಭಾವುಕವಾಗಿದೆ. ಕುಲ್ಕರ್ಣಿ ಕುಟುಂಬದ ಮಹಿಳೆಯರು, ಮಕ್ಕಳಂತೂ ಕ್ಯಾಂಡಿ ಅಗಲಿಕೆಯಿಂದ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಕ್ಯಾಂಡಿಯ ಹಳೆಯ ನೆನಪುಗಳನ್ನು ಮೆಲಕು ಹಾಕುತ್ತಾ ಹಾಕುತ್ತಾ ಕಣ್ಣಿರು ಸುರಿಸುತ್ತಿದ್ದಾರೆ. 

ಕಳೆದ ಆರು ವರ್ಷಗಳಿಂದ ಮನೆಯ ಸದಸ್ಯನಾಗಿ ಬೆಳೆದಿತ್ತು ಕ್ಯಾಂಡಿ. ಕುಲ್ಕರ್ಣಿ ಕುಟುಂಬದವರ ಪಾಲಿಗೆ ಇದು ಮನೆಯ ಮಗಳಾಗಿತ್ತು. ಮನೆಯಲ್ಲಿನ ಪುಟ್ಟ ಮಕ್ಕಳೊಂದಿಗೆ ಮಗುವಾಗಿ, ಹಿರಿಯರೊಂದಿಗೆ ಪ್ರೀತಿ ಗೌರವದಿಂದ ವರ್ತಿಸುತ್ತಾ ಮನೆ ಕಾಯುತ್ತಿದ್ದ ಕ್ಯಾಂಡಿ. ಕುಲ್ಕರ್ಣಿ ಕುಟುಂಬದವರಿಗೆ ಮಾತ್ರವಲ್ಲ; ಇಡೀ ಬಡಾವಣೆಯ ಜನತೆಯ ಮೆಚ್ಚಿನ ಶ್ವಾನವಾಗಿತ್ತು. 

ಚಿಕಿತ್ಸೆ ಕೊಡಿಸಿದ್ರೂ ಫಲ ನೀಡಲಿಲ್ಲ:

ಕಳೆದ ನಾಲ್ಕೈದು ದಿನಗಳಿಂದ ಕ್ಯಾಂಡಿ ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದಿತ್ತು. ಇದನ್ನು ಗುರುತಿಸಿದ ಕುಟುಂಬದವರು ಪಶು ವೈದ್ಯರ ಬಳಿಗೆ ಹೋಗಿ ಚಿಕಿತ್ಸೆ ಸಹ ಕೊಡಿಸಿದ್ದರು. ಆದ್ರೆ ಕಳೆದ ರಾತ್ರಿ ಏಕಾಏಕಿ ಕೊನೆಯುಸಿರೆಳೆದಿದೆ.

ಮಾಲೀಕನ ಸಾವಿನಿಂದ ಆಘಾತಕ್ಕೀಡಾದ ಶ್ವಾನ: ಆಹಾರ ತಿನ್ನದ ಸಿಧು ಮೂಸೆವಾಲಾ ನಾಯಿ
 
ವಿಧಿ-ವಿಧಾನದೊಂದಿಗೆ ಅಂತ್ಯಸಂಸ್ಕಾರ:

ಪ್ರೀತಿಯ ಶ್ವಾನ ಕ್ಯಾಂಡಿಯ ಅಂತ್ಯಕ್ರಿಯೆಯನ್ನು ಕುಲ್ಕರ್ಣಿ ಕುಟುಂಬದವರು ವಿಧಿ ವಿಧಾನಗಳ ಮೂಲಕ ಗೌರವಯುತವಾಗಿ ನೆರವೇರಿಸಿದ್ದಾರೆ. ಆ ಮೂಲಕ ಆ ಶ್ವಾನದೊಂದಿಗೆ ತಮಗಿರುವ ಭಾವನಾತ್ಮಕ ಸಂಬಂಧವನ್ನು ಚಿರಸ್ಥಾಯಿಯಾಗಿಸಿದ್ದಾರೆ.

click me!