ಬೆಂಗಳೂರು (ನ.17) : ನಿರಂತರ ಮಳೆಯಿಂದಾಗಿ (Rain) ನಗರದ ಮಾರುಕಟ್ಟೆಗಳಿಗೆ (Market) ತರಕಾರಿ (Vegitable) ಸಮರ್ಪಕವಾಗಿ ಪೂರೈಕೆಯಾಗದ ಹಿನ್ನೆಲೆಯಲ್ಲಿ ತರಕಾರಿಗಳ ದರದಲ್ಲಿ ಭಾರಿ ಏರಿಕೆಯಾಗಿದೆ (Price Hikes). ದರ ಏರಿಕೆ ಬಿಸಿಗೆ ಜನರು ತುತ್ತಾದರೆ, ತಂದ ತರಕಾರಿ ಮಾರಾಟವಾಗದೇ ಚಿಲ್ಲರೆ ವ್ಯಾಪಾರಿಗಳು ಸಂಕಷ್ಟ ಅನುಭವಿಸುವಂತಾಗಿದೆ.
ಬೀನ್ಸ್, ಬದನೆ, ದಪ್ಪ ಮೆಣಸಿನಕಾಯಿ, ಕ್ಯಾರೆಟ್, ಕ್ಯಾಪ್ಸಿಕಂ, ಬಟಾಣಿ, ಈರುಳ್ಳಿ (onion) ಸೇರಿದಂತೆ ತರಕಾರಿಗಳ ಸಗಟು ದರ ಏರಿಕೆ ಕಂಡಿದೆ. ಇದರ ಪರಿಣಾಮ ವಿವಿಧ ಪ್ರದೇಶಗಳಲ್ಲಿ ಮಾರಾಟವಾಗುವ ತರಕಾರಿಗಳ ದರಗಳ ಚಿಲ್ಲರೆ ದರ ಹೆಚ್ಚಾಗಿದೆ.
ನಿರಂತರ ಮಳೆಯಿಂದ ರೈತರ (Farmers) ಜಮೀನಲ್ಲೆ (Farm land) ತರಕಾರಿಗಳು ಹಾಳಾಗಿವೆ. ಹೀಗಾಗಿ ದೇವನಹಳ್ಳಿ, ಮಾಗಡಿ, ಕೋಲಾರ (Kolar), ಮೈಸೂರು, ರಾಮನಗರ (Ramanagara), ತುಮಕೂರು, ನಾಗ ಮಂಗಲದಿಂದ ನಗರದ ಮಾರುಕಟ್ಟೆಗಳಿಗೆ ತರಕಾರಿ ಉತ್ಪನ್ನ ಮೊದಲಿನಷ್ಟು ಬರುತ್ತಿಲ್ಲ. ಇದರ ಜತೆಗೆ ಆಂಧ್ರಪ್ರದೇಶ (Andhra pradesh), ತಮಿಳುನಾಡಿನಿಂದ (Tamilnadu) ತರಕಾರಿ ಪೂರೈಕೆ ಅಷ್ಟಾಗಿ ಆಗಿಲ್ಲ. ಮಳೆ (Rain) ಕಡಿಮೆ ಇರುವ ಮಹಾರಾಷ್ಟ್ರದಿಂದ ಕೊತ್ತಂಬರಿ ಮತ್ತಿತರ ತರಕಾರಿ ಉತ್ಪನ್ನ ತಕ್ಕ ಮಟ್ಟಿಗೆ ಬಂದಿದೆ ಎಂದು ಸಗಟು ವ್ಯಾಪಾರಿಗಳು ಹೇಳುತ್ತಾರೆ.
ಹೆಚ್ಚಾದ ಸಗಟು ದರ: ತರಕಾರಿಗಳು ಸಗಟು ಬೆಲೆಯ ಕಳೆದ ವಾರಕ್ಕೆ ಹೋಲಿಸಿದರೆ .5-15 ರವರೆಗೆ ಹೆಚ್ಚಾಗಿದೆ. .35-40ಕ್ಕೆ ಸಿಗುತ್ತಿದ್ದ ಟೊಮಟೋ .50-60ಕ್ಕೆ ಏರಿದೆ. ಹಸಿ ಮೆಣಸಿನಕಾಯಿ .35 ತಲುಪಿದ್ದರೆ, ಕೇಜಿ ಬಟಾಣಿ .210 ನಷ್ಟಾಗಿದೆ. ಕೇಜಿ ಬದನೆ 50, ಹುರಳಿಕಾಯಿ 50, ಈರುಳ್ಳಿ 35-40, ಕ್ಯಾರೆಟ್ 50ಕ್ಕೆ ಜಿಗಿದಿದೆ. ಹಿರೇಕಾಯಿ .30, ಆಲೂಗಡ್ಡೆ .26ಕ್ಕೆ ಸಿಗುತ್ತಿದೆ.
ಬೆಂಡೆಕಾಯಿ .40, ಕ್ಯಾಪ್ಸಿಕಂ ಕೇಜಿಗೆ .50-60, ಅಲಸಂದೆ 40, ಅವರೆಕಾಯಿ 35, ಬೀಟ್‌ರೂಟ್ 30 ಹಾಗೂ ನವಿಲ್‌ಕೋಸು ಕೆಜಿ 70ಕ್ಕೆ ತಲುಪಿದೆ. ಕರಿಬೇವು ಕೆಜಿಗೆ .30 ಇದ್ದರೆ, ಒಂದು ಕಟ್ಟು ಕೊತ್ತಂಬರಿ .20-30, ಕಟ್ಟು ಪಾಲಕ್ ಮತ್ತು ದಂಟಿನ ಸೊಪ್ಪು .10-20ಕ್ಕೆ ಖರೀದಿಸುತ್ತಿದ್ದಾರೆ. ಸಗಟು ಬೆಲೆ ಏರಿದ ನಂತರ ಸಹಜವಾಗಿ ಚಿಲ್ಲರೆ ದರ ದುಪ್ಪಟ್ಟಾಗುತ್ತದೆ. ನಿತ್ಯ ಈ ಬೆಲೆಗಳಲ್ಲಿ ವ್ಯತ್ಯಾಸವಾಗಲಿದ್ದು, ಸದ್ಯಕ್ಕೆ ಮಳೆ ಕಡಿಮೆಯಾದರೂ ಕೂಡಲೇ ಬೆಲೆ ಇಳಿಕೆಯಾಗುವ ಸಾಧ್ಯತೆ ಕಡಿಮೆ. ಮಳೆ ಹೀಗೆ ಮುಂದುವರಿದರೆ ಇನ್ನಷ್ಟುಬೆಲೆ ಏರಿಕೆಯಾಗಲೂಬಹುದೆಂದು ದಾಸನಪುರ ಕೆಂಪೇಗೌಡ ಮಾರುಕಟ್ಟೆಯ ತರಕಾರಿ ವರ್ತಕರ ಸಂಘದ ಅಧ್ಯಕ್ಷ ಗೋವಿಂದಪ್ಪ ಮಾಹಿತಿ ನೀಡಿದರು.
ಚಿಲ್ಲರೆ ವ್ಯಾಪಾರಿಗಳ ಸಂಕಷ್ಟ
ದರ ಏರಿಕೆಯಾದರೂ ಮಾಲು ತಂದು ಮಾರಾಟ ಮಾಡಲೇಬೇಕಾದ ಅನಿವಾರ್ಯತೆ ಇದೆ. ಸಾಲು ಸಾಲು ಹಬ್ಬ ಆಚರಿಸಿರುವ ಜನರು ಕಾರ್ತಿಕ ಮಾಸದಲ್ಲೂ ಮಾರುಕಟ್ಟೆಗಳತ್ತ ಸುಳಿಯುತ್ತಿಲ್ಲ. ಇತ್ತೀಚೆಗೆ ಸಭೆ, ಸಮಾರಂಭಗಳಿಗೆ ಅವಕಾಶ ದೊರೆತಿದ್ದು, ಸಾವಿರಾರು ಜನ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಚಿಲ್ಲರೆ ದರ ತುಟ್ಟಿಎಂಬ ಕಾರಣಕ್ಕೆ ಕಾರ್ಯಕ್ರಮಗಳ ಆಯೋಜಕರು ಸಗಟು ಮಳಿಗೆಗಳಲ್ಲೇ ಅಗತ್ಯ ತರಕಾರಿ ಖರೀದಿಸುತ್ತಾರೆ. ಚಿಲ್ಲರೆ ಅಂಗಡಿಗಳಲ್ಲಿ 500 ಗ್ರಾಂ ತರಕಾರಿ ಕೊಳ್ಳುವ ಗ್ರಾಹಕರು ಹೆಚ್ಚುವರಿ 10-20 ಗ್ರಾಂಗೆ ಪೀಡಿಸುತ್ತಾರೆ. ಮಾರುಕಟ್ಟೆಯಿಂದ 20 ಸಾವಿರ ಮೌಲ್ಯದ ಸಗಟು ಮಳಿಗೆಯಿಂದ ತರಕಾರಿ ತರಲು .1,500 ಖರ್ಚು ಬರುತ್ತದೆ. ಮಾರಾಟದಿಂದ ನಂತರ ಮಾಲಿಕರು/ಸಿಬ್ಬಂದಿ ಕೂಲಿ ನೀಡಿ ಪುನಃ ಸಗಟು ಖರೀದಿಗೆ ಹಣ ಉಳಿಯುವುದಿಲ್ಲ. ಕೊರೋನಾ ಮುನ್ನ .100-300 ರವರೆಗೆ ಮಾರಾಟವಾಗಿದ್ದ ಕೆಜಿ ಬೂದುಗುಂಬಳವನ್ನು ಕಳೆದ ದೀಪಾವಳಿಯಲ್ಲಿ ಕೇಳುವವರಿಲ್ಲದೇ ರಾಶಿಗಟ್ಟಲೆ ಹಾಳಾಯಿತು ಎಂದು ವಿಜಯನಗರದ ತರಕಾರಿ ಚಿಲ್ಲರೆ ವ್ಯಾಪಾರಿ ಅಳಲು ತೋಡಿಕೊಂಡರು.
ತರಕಾರಿ ದರ ಪಟ್ಟಿ(ಕೆಜಿಗೆ)
ತರಕಾರಿ ಚಿಲ್ಲರೆ ಹಾಪ್‌ಕಾಮ್ಸ್
ಹಿರೇಕಾಯಿ 80-100 80
ಈರುಳ್ಳಿ 45-55 57
ಟೊಮೆಟೊ 60-80 65
ಬದನೆ 50-60 56
ಆಲೂಗಡ್ಡೆ 40-50 46
ಸೌತೆಕಾಯಿ 25 23
ಕ್ಯಾರೆಟ್‌ನಾಟಿ 70-100 80
ಕ್ಯಾಪ್ಸಿಕಂ 120 135
ಬೆಂಡೆಕಾಯಿ 50-65 83
ಬೀನ್ಸ್ 60-75 47
ಕ್ಯಾಬೀಜ್ 30-40 32
ದಪ್ಪ ಮೆಣಸಿನಕಾಯಿ 80-110 66
ಬೂದುಗುಂಬಳ 15-20 20
ಕಟ್ಟು ನಾಟಿ ಕೊತ್ತಂಬರಿ 20-35 96(ಕೆಜಿ)
ಕಟ್ಟು ಪಾಲಕ್ 15-20 95(ಕೆಜಿ)
ಕಟ್ಟು ದಂಟಿನಸೊಪ್ಪು 15-20 65(ಕೆಜಿ)
ಮೆಂತ್ಯ ಕಟ್ಟು 15-30 147(ಕೆಜಿ)