ಬೆಂಗ್ಳೂರಲ್ಲಿ ವರುಣನ ಆರ್ಭಟಕ್ಕೆ ವಾಹನ ಸವಾರರ ಪರದಾಟ: ಇಂದೂ ಕೂಡ ಭಾರೀ ಮಳೆ..!

By Kannadaprabha News  |  First Published Jun 30, 2022, 5:45 AM IST

*  ಮಳೆಯಿಂದಾಗಿ ರಸ್ತೆಯಲ್ಲಿ ನೀರು ನಿಂತು ಟ್ರಾಫಿಕ್‌ ದಟ್ಟಣೆ
*  ಹಗಲು ಬಿಸಿಲಿನ ವಾತಾವರಣ, ಸಂಜೆ 6 ಸುಮಾರಿಗೆ ದಿಢೀರ್‌ ಮಳೆ 
*  ಗುರುವಾರ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ 
 


ಬೆಂಗಳೂರು(ಜೂ.30):  ನಗರದ ಹಲವೆಡೆ ಬುಧವಾರ ಸಂಜೆ ಧಾರಾಕಾರ ಮಳೆಯಾಗಿದೆ. ಇದರಿಂದ ಕೆಲಸ ಮುಗಿಸಿ ಮನೆಗೆ ತೆರಳುವವರು ಸಾಕಷ್ಟು ಪರದಾಡಿದರು. ಮಳೆಯಿಂದಾಗಿ ರಸ್ತೆಯಲ್ಲಿ ನೀರು ನಿಂತು ಟ್ರಾಫಿಕ್‌ ದಟ್ಟಣೆ ಹೆಚ್ಚಿದ್ದರಿಂದ ಜನರು ತೊಂದರೆ ಅನುಭವಿಸಿದರು.

ಹಗಲು ಬಿಸಿಲಿನ ವಾತಾವರಣ ಇತ್ತು. ಆದರೆ ಸಂಜೆ 6 ಸುಮಾರಿಗೆ ದಿಢೀರ್‌ ಮಳೆ ಸುರಿಯಲು ಆರಂಭಿಸಿತು. ಮೆಜೆಸ್ಟಿಕ್‌, ಶಿವಾನಂದ ಸರ್ಕಲ್‌, ಶೇಷಾದ್ರಿಪುರ, ಮಲ್ಲೇಶ್ವರ, ವಿವಿ ಪುರ, ಗಾಯತ್ರಿನಗರ, ಶಿವಾಜಿ ನಗರ, ವಿಧಾನ ಸೌಧ, ಎಂಜಿ ರಸ್ತೆ, ಲಕ್ಕಸಂದ್ರ, ಜಯನಗರ, ಜೆಪಿ ನಗರ, ಆರ್‌ಟಿ ನಗರ, ಕೆಆರ್‌ ವೃತ್ತ, ಹಂಪಿನಗರ, ವಿಜಯನಗರ, ಪ್ರಕಾಶನಗರ, ಸಾರಕ್ಕಿ, ಮಾರತ್ತಹಳ್ಳಿ, ಬಿಟಿಎಂ. ಬಡಾವಣೆ, ದಾಸರಹಳ್ಳಿ, ಚಾಮರಾಜಪೇಟೆ, ಎನ್‌ಆರ್‌ ಕಾಲೋನಿ, ಬಸವನಗುಡಿ, ಗಿರಿನಗರ, ದೊಡ್ಡನೆಕ್ಕುಂದಿ ಭಾಗದಲ್ಲಿ ಮಳೆ ಹೆಚ್ಚಾಗಿತ್ತು.

Tap to resize

Latest Videos

Raichur ಬಾರೋ...ಬಾರೋ ಮಳೆರಾಯ...ನಿತ್ಯ ಮಳೆಗಾಗಿ ಜಪಿಸುತ್ತಿರುವ ಅನ್ನದಾತರು!

ಉಳಿದಂತೆ ವಿದ್ಯಾಪೀಠ 1.6 ಸೆಂ.ಮೀ., ಕೋರಮಂಗಲ 1.55, ಕೊಟ್ಟಿಗೆಪಾಳ್ಯ, ರಾಜಾಜಿನಗರ ತಲಾ 1.3, ಪಟ್ಟಾಭಿರಾಮನಗರ 1.2, ಹೆರೋಹಳ್ಳಿ, ದಯಾನಂದನಗರ ತಲಾ 1.1, ವನ್ನಾರ್‌ ಪೇಟೆ, ನಾಯಂಡಹಳ್ಳಿ, ರಾಜಮಹಲ್‌ ಗುಟ್ಟಹಳ್ಳಿ, ನಾಗರಬಾವಿ, ನಾಗಪುರದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ಇಂದೂ ಮಳೆ

ಗುರುವಾರವೂ ನಗರದಲ್ಲಿ ಗುಡುಗು ಮಿಂಚು ಸಹಿತ ಒಂದೆರಡು ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು ಸಂಜೆ ಅಥವಾ ರಾತ್ರಿ ಮಳೆಯಾಗಲಿದೆ. ನಗರದ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 29 ಮತ್ತು 20 ಡಿಗ್ರಿ ಸೆಲ್ಸಿಯಸ್‌ ದಾಖಲಾಗುವ ಸಾಧ್ಯತೆಯಿದೆ.
 

click me!