ಶಿವಮೊಗ್ಗದ ಶಿರಾಳಕೊಪ್ಪಪಟ್ಟಣದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಲವು ಕಡೆ ಮನೆಗಳಿಗೆ ಕೊಳಚೆ ನೀರು ನುಗ್ಗಿದೆ. ಹಲವು ಮನೆಗಳ ಮುಂದೆ ಚರಂಡಿ ಕಸ, ಕೊಳಚೆ ನೀರು ನಿಂತು ದುರ್ವಾಸನೆ ಉಂಟಾಗಿದೆ. ಮಳೆಯಿಂದಾಗಿ ಕೊಳಚೆ ನೀರು ತುಂಬಿ ನಿಂತಿದ್ದು ರೋಗಭೀತಿ ಎದುರಾಗಿದೆ.
ಶಿವಮೊಗ್ಗ(ಆ.24): ಶಿರಾಳಕೊಪ್ಪಪಟ್ಟಣದಲ್ಲಿ ಶುಕ್ರವಾರ ಕೆಲ ಸಮಯದವರೆಗೆ ಬಿದ್ದ ಭಾರಿ ಮಳೆಯಿಂದ ಕಾಲುವೆಯ ಮೂಲಕ ಕೊಳಚೆ ನೀರು ಮನೆಗಳಿಗೆ ನುಗ್ಗಿ, ಹಲವಾರು ಮನೆಗಳ ಮುಂದೆ ಕೊಳಕು, ಕಸ ನಿಂತು ದುರ್ವಾಸನೆ ಉಂಟಾಗಿ ಸ್ಥಳೀಯ ನಿವಾಸಿಗಳ ನೆಮ್ಮದಿ ಹಾಳಾಗಿದೆ.
ಪಟ್ಟಣದ ಕೆಳಗಿನಕೇರಿಯಲ್ಲಿ ಶುಕ್ರವಾರ ಮಧ್ಯಾಹ್ನ ಘಟನೆ ನಡೆದಿದ್ದು, ರಸ್ತೆ ಮೇಲೆ ಬಿದ್ದ ಕೊಳಕು, ಕಸದಿಂದ ಮಹಿಳೆಯರು ಶ್ರಾವಣ ಶುಕ್ರವಾರ ಗಲೀಜಲ್ಲಿ ಮನೆಮನೆಗೆ ತೆರಳುವಂತಾಯಿತು.
ಶಿವಮೊಗ್ಗ: 'ಸಚಿವ ಸ್ಥಾನ ನೀಡದಿರುವುದು ತೀವ್ರ ನೋವಾಗಿದೆ'
ತಕ್ಷಣ ಇಲ್ಲಿಯ ನಿವಾಸಿಗಳು ಪಟ್ಟಣ ಪಂಚಾಯಿತಿ ಕಚೇರಿಗೆ ದೂರವಾಣಿ ಮುಖಾಂತರ ತಿಳಿಸಿದಾಗ ಸ್ಥಳಕ್ಕೆ ಆಗಮಿಸಿದ ಪಟ್ಟಣ ಪಂಚಾಯಿತಿ ಹೆಲ್ತ್ ಇನ್‌ಸ್ಪೆಕ್ಟರ್ ನವಾಜ್ ಸ್ಥಳ ಪರಶೀಲಿಸಿ ಕಾಲುವೆ ಕಿರಿದಾಗಿರುವುದರಿಂದ ಪಟ್ಟಣದ ಕೊಚ್ಚೆ ನೀರು ರಸ್ತೆ ಮೇಲೆ ಬಂದಿದೆ. ತಕ್ಷಣ ನೀರಿನ ಟ್ಯಾಂಕರ್ ಮತ್ತು ಕೆಲಸಗಾರರನ್ನು ಕಳಿಸುವುದಾಗಿ ಹೇಳಿ, ಕಳಿಸಿ ಕೊಟ್ಟು, ಶೌಚಾಲಯದ ಕೊಳಕನ್ನು ತೆಗೆಸಿದರು.
ಅಲ್ಲಿಯ ನಿವಾಸಿಗಳು ಹೆಲ್ತ್‌ಇನ್‌ಸ್ಪೆಕ್ಟರ್ ಎದುರು ತಮ್ಮ ಆಕ್ರೋಶ ವ್ಯಕ್ತಪಡಿಸಿ, ಜೋರಾಗಿ ಮಳೆ ಬಂದಾಗ ಪ್ರತಿ ಬಾರಿ ಇದೇ ರೀತಿ ಆಗುತ್ತದೆ. ನಿಮ್ಮ ಕಚೇರಿಗೆ ಕಳೆದ ಮೂರು ವಷÜರ್‍ಗಳಿಂದ ತಿಳಿಸುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಏಕೆ ಎಂದು ಪ್ರಶ್ನಿಸಿದರು. ಆಗ ಇಂದು ಕಚೇರಿಯಲ್ಲಿ ಮುಖ್ಯಾಧಿಕಾರಿ ಇಲ್ಲ. ಬಂದ ತಕ್ಷಣವೇ ಅವರಿಗೆ ವಿಷಯ ತಿಳಿಸುವುದಾಗಿ ಭರವಸೆ ನೀಡಿದರು.
ಶಿವಮೊಗ್ಗ: ಬಿಟ್ಟು ಹೋಗಿದ್ದ ಮಗು ಹುಡುಕಿ ಬಂದ ತಾಯಿ..!
ಈ ಹಿಂದೆ ಸಾಕಷ್ಟುಬಾರಿ ಹಲವಾರು ಪತ್ರಿಕೆಯಲ್ಲಿ ಬಂದರೂ ಪಪಂ ಯಾವುದಕ್ಕೂ ಸ್ಪಂದಿಸುತ್ತಿಲ್ಲ. ಕಾಲುವೆ ನೀರು ಸರಾಗವಾಗಿ ಹೋಗುವಂತೆ ಮಾಡದಿದ್ದರೆ ಶೀಘ್ರದಲ್ಲಿ ಕಾಲುವೆ ಒಡೆದು ಹಾಕುವುದಾಗಿ ಸ್ಥಳಿಯ ನಿವಾಸಿಗಳು ಎಚ್ಚರಿಸಿದರು.
ಈ ಹಿಂದೆ ಬಿ.ವೈ.ರಾಘವೇಂದ್ರ ಅವರು, ಶಾಸಕರಾದಾಗ ಅವರ ಗಮನಕ್ಕೆ ತರಲಾಗಿತ್ತು. ಆದರೂ ಪಪಂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ನಿವಾಸಿಗಳು ಇಂತಹ ಸಣ್ಣ ವಿಷಯಕ್ಕೆ ಪ್ರತಿಭಟನೆ ಮಾಡಿ, ಮುಖ್ಯಮಂತ್ರಿಗಳು ಮುಜುಗರ ಪಟ್ಟುಕೊಳ್ಳುವ ಮೊದಲೇ ನೋಡಿಕೊಳ್ಳುವುದು ಅಧಿಕಾರಿಗಳ ಕರ್ತವ್ಯ ಎಂದು ನಿವಾಸಿಗಳು ಎಚ್ಚರಿಸಿದರು.