ಮಂತ್ರಿಗಿರಿ ಕೊಟ್ಟಿದ್ದೇ ದೊಡ್ಡ ಭಾಗ್ಯ ಎಂದ ಬಿಜೆಪಿಗ

By Kannadaprabha News  |  First Published Aug 24, 2019, 8:40 AM IST

ಪಕ್ಷದ ಸಾಮಾನ್ಯ ಕಾರ್ಯಕರ್ತನಂತಿದ್ದ ನನ್ನನ್ನು ಮಂತ್ರಿಯನ್ನಾಗಿ ಮಾಡಿದರು ಎಂದು ಸಚಿವರೋರ್ವರು ಹರ್ಷ ವ್ಯಕ್ತಪಡಿಸಿದ್ದಾರೆ. 


ಬಳ್ಳಾರಿ [ಆ.24]: ನಾನು ಮಂತ್ರಿಗಿರಿ ಕೇಳಿರಲಿಲ್ಲ. ಪಕ್ಷದ ಸಾಮಾನ್ಯ ಕಾರ್ಯಕರ್ತನಂತಿದ್ದ ನನ್ನನ್ನು ಮಂತ್ರಿಯನ್ನಾಗಿ ಮಾಡಿದರು ಎಂದು ಸಚಿವ ಪ್ರಭು ಚೌಹಾಣ್‌ ಹೇಳಿದರು. 

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಂತ್ರಿ ಸ್ಥಾನ ಸಿಕ್ಕಿದ್ದು ನನ್ನ ಭಾಗ್ಯ. ಇಂತಹದ್ದೇ ಖಾತೆ ನೀಡಲಿ ಎಂದು ಕೇಳುವುದಿಲ್ಲ. ನಮ್ಮಂತಹವರಿಗೆ ಮಂತ್ರಿ ಭಾಗ್ಯವೇ ದೊಡ್ಡದು ಎಂದರು. 

Tap to resize

Latest Videos

ರಾಜ್ಯ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅವರು ಯಾವ ಖಾತೆ ಕೊಟ್ಟರೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತೇನೆ. ಪಕ್ಷದ ಹಿರಿಯ ನಾಯಕರ ನಿರೀಕ್ಷೆಯಂತೆ ಜನಪರವಾದ ಕೆಲಸಗಳನ್ನು ಮಾಡಿಕೊಂಡು ಹೋಗುತ್ತೇನೆ ಎಂದು ತಿಳಿಸಿದರು. ಸಚಿವರ ಖಾತೆ ಹಂಚಿಕೆ ಇನ್ನೆರೆಡು ದಿನದಲ್ಲಿ ಆಗುತ್ತದೆ. ಪಕ್ಷದ ಹಿರಿಯ ನಾಯಕರು ದೆಹಲಿಗೆ ಹೋಗಿದ್ದಾರೆ ಎಂದು ತಿಳಿಸಿದರು.

click me!