ಬೀದರ್‌ ಮುಂದು​ವ​ರಿದ ಭಾರಿ ಮಳೆ: ಸಿಡಿಲಿಗೆ 6 ಜಾನುವಾರು ಬಲಿ

By Kannadaprabha News  |  First Published Apr 29, 2023, 12:01 PM IST

ಜಿಲ್ಲೆ​ಯಲ್ಲಿ ಕಳೆದ ಎರ​ಡ್ಮೂರು ದಿನ​ಗ​ಳಿಂದ ಸುರಿ​ಯು​ತ್ತಿ​ರುವ ಭಾರಿ ಮಳೆಗೆ ಅಪಾರ ಬೆಳೆ ಹಾನಿ​ಯಾ​ಗಿದ್ದು ನಾಲ್ಕು ಎಮ್ಮೆ, 5 ಎತ್ತು​ಗಳು ಸಾವೀ​ಗಿ​ಡಾ​ಗಿ​ವೆ. ಶುಕ್ರ​ವಾರ ಬೆಳಗ್ಗೆ​ಯಿಂದ ಸಣ್ಣ ಪ್ರಮಾ​ಣ​ದಲ್ಲಿ ಜಿನು​ಗು​ತ್ತಿದ್ದ ಮಳೆ ರಾತ್ರಿ 8ರ ನಂತ​ರ ಔರಾ​ದ್‌​ನಲ್ಲಿ ​ಭೋರ್ಗ​ರೆ​ದರೆ ಹುಮ​ನಾ​ಬಾದ್‌, ಭಾಲ್ಕಿ, ಬಸ​ವ​ಕ​ಲ್ಯಾಣ ಹಾಗೂ ಬೀದ​ರ್‌​ನಲ್ಲಿ ಗುಡುಗು ಮಿಂಚಿನ ಸದ್ದು ತಡ​ರಾತ್ರಿ ಭಾರಿ ಮಳೆ​ಯಾ​ಗುವ ಸಾಧ್ಯ​ತೆ​ಗ​ಳನ್ನು ಮುಂದಿ​ಟ್ಟಿ​ದೆ.


ಬೀದರ್‌ (ಏ.29): ಜಿಲ್ಲೆ​ಯಲ್ಲಿ ಕಳೆದ ಎರ​ಡ್ಮೂರು ದಿನ​ಗ​ಳಿಂದ ಸುರಿ​ಯು​ತ್ತಿ​ರುವ ಭಾರಿ ಮಳೆಗೆ ಅಪಾರ ಬೆಳೆ ಹಾನಿ​ಯಾ​ಗಿದ್ದು ನಾಲ್ಕು ಎಮ್ಮೆ, 5 ಎತ್ತು​ಗಳು ಸಾವೀ​ಗಿ​ಡಾ​ಗಿ​ವೆ.

ಶುಕ್ರ​ವಾರ ಬೆಳಗ್ಗೆ​ಯಿಂದ ಸಣ್ಣ ಪ್ರಮಾ​ಣ​ದಲ್ಲಿ ಜಿನು​ಗು​ತ್ತಿದ್ದ ಮಳೆ ರಾತ್ರಿ 8ರ ನಂತ​ರ ಔರಾ​ದ್‌​ನಲ್ಲಿ ​ಭೋರ್ಗ​ರೆ​ದರೆ ಹುಮ​ನಾ​ಬಾದ್‌, ಭಾಲ್ಕಿ, ಬಸ​ವ​ಕ​ಲ್ಯಾಣ ಹಾಗೂ ಬೀದ​ರ್‌​ನಲ್ಲಿ ಗುಡುಗು ಮಿಂಚಿನ ಸದ್ದು ತಡ​ರಾತ್ರಿ ಭಾರಿ ಮಳೆ​ಯಾ​ಗುವ ಸಾಧ್ಯ​ತೆ​ಗ​ಳನ್ನು ಮುಂದಿ​ಟ್ಟಿ​ದೆ.

Tap to resize

Latest Videos

undefined

ರಾಯಚೂರು ಜಿಲ್ಲಾದ್ಯಂತ ಗುಡುಗು-ಮಿಂಚಿನ ಭಾರೀ ಮಳೆ

ಆಲಿ​ಕಲ್ಲು ಸಹಿತ ಮಳೆ ರೈತರಿಗೆ ಕಣ್ಣೀರು ತರಿ​ಸು​ವಂತೆ ಮಾಡಿವೆ. ಹೊಲ​ಗದ್ದೆ ತೋಟ​ಗ​ಳಲ್ಲಿ ಬೆಳೆ​ಗಳು ಮಳೆ​ಯಿಂದಾಗಿ ನೆಲ​ಕ​ಚ್ಚಿವೆ. ಕಳೆದ ಒಂದೆ​ರಡು ತಿಂಗ​ಳು​ಗಳ ಹಿಂದಷ್ಟೇ ಭಾರಿ ಆಲಿ​ಕಲ್ಲು ಮಳೆ​ಯಿಂದ ಅಪಾರ ಹಾನಿ ಅನು​ಭ​ವಿ​ಸಿದ್ದ ರೈತ​ನಿಗೆ ಮತ್ತೊಂದು ಬರೆ ಬಿದ್ದಂತಾ​ಗಿದೆ. ಆ ಹಾನಿಯ ಪರಿ​ಹಾ​ರದ ಕುರಿತು ಸರ್ಕಾ​ರದ ಮಟ್ಟ​ದಲ್ಲಿ ಇನ್ನೂ ಪರಿ​ಹಾರ ಬಿಡು​ಗ​ಡೆಯ ಕ್ರಮ​ಗ​ಳಾ​ಗಿಲ್ಲ ಅದಾ​ಗಲೇ ಮತ್ತೊಂದು ಹಾನಿ ರೈತ​ನನ್ನು ಕಂಗೆ​ಡೆ​ಸಿ​ದೆ.

ಜಿಲ್ಲೆ​ಯಲ್ಲಿ 52.16ಮಿಮೀ ಮಳೆ​ಯಾ​ಗಿದ್ದು ಕಮ​ಠಾಣಾ ಹೋಬ​ಳಿ​ಯಲ್ಲಿ ದಾಖ​ಲೆಯ 123.2ಮಿಮೀ ಮಳೆಯಾಗಿದೆ. ಔರಾದ್‌ ತಾಲೂ​ಕಿ​ನಲ್ಲಿ 35.37ಮಿಮೀ, ಬೀದರ್‌ ತಾಲೂ​ಕಿ​ನಲ್ಲಿ 58.02ಮಿಮೀ, ಭಾಲ್ಕಿ 72.97ಮಿಮೀ, ಬಸ​ವ​ಕ​ಲ್ಯಾಣ 13.92ಮಿಮೀ, ಹುಮ​ನಾ​ಬಾದ್‌ 48.4ಮಿಮೀ, ಕಮ​ಲ​ನ​ಗರ 59.1ಮಿಮೀ ಹಾಗೂ ಹುಲ​ಸೂರು ತಾಲೂ​ಕಿ​ನಲ್ಲಿ 72.2ಮಿಮೀ ಮಳೆ​ಯಾ​ಗಿದೆ.

ಮಳೆ​ಯಿಂದಾಗಿ ಬೆಳೆ ಹಾನಿಯ ಸರ್ವೆಗೆ ಅಧಿ​ಕಾ​ರಿ​ಗ​ಳಿಗೆ ಸೂಚಿ​ಸಿದ್ದು ಶೀಘ್ರ​ದಲ್ಲಿ ಸರ್ಕಾ​ರಕ್ಕೆ ಪ್ರಸ್ತಾ​ವನೆ ಸಲ್ಲಿ​ಸು​ತ್ತೇವೆ ಎಂದು ಜಿಲ್ಲಾ​ಧಿ​ಕಾರಿ ಗೋವಿಂದ​ರೆಡ್ಡಿ ತಿಳಿ​ಸಿ​ದರು.

 

ಹುಲಸೂರ: ಸಿಡಿಲಿಗೆ 6 ಜಾನುವಾರುಗಳು ಬಲಿ

ಬಸವಕಲ್ಯಾಣ: ಗುರುವಾರ ಮಧ್ಯಾಹ್ನ ಗುಡುಗು ಮಿಂಚಿನಿಂದ ಬಿದ್ದ ಮಳೆಯ ಮಧ್ಯದಲ್ಲಿ ಸಿಡಿಲು ಬಡಿತದಿಂದ ಹುಲಸೂರ ತಾಲೂಕಿನಲ್ಲಿ ಸುಮಾರು 6 ಜಾನುವಾರುಗಳು ಸಾವನಪ್ಪಿವೆ.

ಶುಕ್ರವಾರ ಬೆಳಿಗ್ಗೆ ವರೆಗೆ ಬಿದ್ದ ಆಲಿಕಲ್ಲು ಮಳೆ ಬಿರುಗಾಳಿಯಿಂದ ಅನೇಕ ಮರಗಳು ನೆಲಕ್ಕುರುಳಿವೆ ಭಾರಿ ಮಳೆಯಿಂದ ಶಂಕರ ಮಾಧರಾವ ಬಡ ರೈತನ 1 ಎಕರೆ ಉಳ್ಳಾಗಡ್ಡೆ ನೀರಿನಲ್ಲಿ ಮುಳುಗಿದರೆ ಹುಲಸೂರಿನ ಬಾಬುರಾವ ಖುರೇಷಿ ಎಮ್ಮೆ, ಮೀರಖಲ ಗ್ರಾಮದ ನವನಾಥ ಶಿಂದೆ ಅವರ ಹಸು, ಮೇಹಕರ ಗ್ರಾಮದಲ್ಲಿ 1 ಮೇಕೆ, ಹಲಸಿತುಗಾಂವನಲ್ಲಿ 2 ಎತ್ತು, ಅಳವಾಯಿ ಗ್ರಾಮದಲ್ಲಿ 1 ಎಮ್ಮೆ ಬಲಿಯಾಗಿದ್ದು ರೈತರು ಸಂಕಟಕ್ಕೆ ಸಿಲುಕಿದ್ದಾರೆ.

ರಾಜ್ಯದಲ್ಲಿ ಮಳೆ: ಚಿಕ್ಕಮಗಳೂರಲ್ಲಿ ಉಷ್ಣಾಂಶ ದಿಢೀರ್‌ 10 ಡಿಗ್ರಿ ಕುಸಿತ..!

ತಾಲೂಕು ಆಡಳಿತ ಸಂಕಷ್ಟಕ್ಕಿಡಾದ ರೈತರ ಮನೆಗೆ ಭೇಟಿ ನೀಡಿ ಆದ ಹಾನಿಯನ್ನು ಅಂದಾಜಿಸಬೇಕಾಗಿದೆ ಇದೇ ರೀತಿ ಜಿಲ್ಲೆಯಾದ್ಯಂತ ಮಳೆಯಾದರೆ, ಹುಲಸೂರ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ ರೈತರ ಹೊಲಗಳಿಗೆ ಆದ ಹಾನಿ ಸಹ ಸಮೀಕ್ಷೆ ಮಾಡಿ ವರದಿ ನೀಡಬೇಕಾಗಿದೆ ಎಂದು ಜನರ ಅನಿಸಿಕೆಯಾಗಿದೆ.

click me!