ಒಬ್ಬ ಶಾಸಕರ ಮಗ ಶಾಸಕರಾಗಬಹುದು. ಆದರೆ ಒಬ್ಬ ರೈತನ ಮಗ ಶಾಸಕರಾಗಲು ತುಂಬಾ ಕಷ್ಟವಿದೆ. ಮತದಾರರು ಮನಸ್ಸು ಮಾಡಿದರೆ ನನ್ನಂತಹ ಒಬ್ಬ ಸಾಮಾನ್ಯ ರೈತನ ಮಗನೂ ಶಾಸಕನಾಗಬಹುದು ಎಂದು ಜೆಡಿಎಸ್ ಅಭ್ಯರ್ಥಿ ಆರ್.ಉಗ್ರೇಶ್ ಹೇಳಿದರು.
ಶಿರಾ : ಒಬ್ಬ ಶಾಸಕರ ಮಗ ಶಾಸಕರಾಗಬಹುದು. ಆದರೆ ಒಬ್ಬ ರೈತನ ಮಗ ಶಾಸಕರಾಗಲು ತುಂಬಾ ಕಷ್ಟವಿದೆ. ಮತದಾರರು ಮನಸ್ಸು ಮಾಡಿದರೆ ನನ್ನಂತಹ ಒಬ್ಬ ಸಾಮಾನ್ಯ ರೈತನ ಮಗನೂ ಶಾಸಕನಾಗಬಹುದು ಎಂದು ಜೆಡಿಎಸ್ ಅಭ್ಯರ್ಥಿ ಆರ್.ಉಗ್ರೇಶ್ ಹೇಳಿದರು.
ಅವರು ತಾಲೂಕಿನ ಹುಲಿಕುಂಟೆ ಹೋಬಳಿಯ ಕೊಟ್ಟಿ, ಚಿರತಹಳ್ಳಿ, ದ್ವಾರನಕುಂಟೆ, ಲಕ್ಕನಹಳ್ಳಿ, ಬರಗೂರು, ಹುಲಿಕುಂಟೆ ಗ್ರಾಮಗಳಲ್ಲಿ ಮತನಾಚನೆ ಮಾಡಿ ಮಾತನಾಡಿದರು. ಕರ್ನಾಟಕ ರಾಜ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದರೆ ನಮ್ಮ ರಾಜ್ಯ ರಾಮರಾಜ್ಯವಾಗುತ್ತದೆ. ಆದ್ದರಿಂದ ಮತದಾರರು ಜೆಡಿಎಸ್ ಪಕ್ಷಕ್ಕೆ ಹೆಚ್ಚಿನ ಬಹುಮತ ನೀಡಿ ಹೆಚ್.ಡಿ.ಕುಮಾರಸ್ವಾಮಿಯವರು ಸಾಮಾನ್ಯ ರೈತನ ಮಗನಾದ ನನಗೆ ನಂಬಿಕೆ ಇಟ್ಟು ಜೆಡಿಎಸ್ ಟಿಕೆಟ್ ನೀಡಿದ್ದಾರೆ. ಮತದಾರರು ನನ್ನ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದರು.
ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಎಸ್.ಆರ್.ಗೌಡ ಮಾತನಾಡಿ, ರಾಜ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರ ಮಹತ್ವಾಕಾಂಕ್ಷೆಯ ಪಂಚರತ್ನ ಯೋಜನೆಗಳು ಅನುಷ್ಠಾನಗೊಳ್ಳಲು ಮತದಾರರು ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕು. ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದರೆ ಸ್ತ್ರೀಶಕ್ತಿ ಸಂಘಗಳ ಎಲ್ಲಾ ಸಾಲ ಮನ್ನಾ ಮಾಡಲಿದ್ದಾರೆ. ರೈತರ ಪ್ರತಿ ಎಕರೆಗೆ 10 ಸಾವಿರ ರೂ. ಸಹಾಯಧನ, ವೃದ್ಧರಿಗೆ, ವಿಕಲಚೇತನರಿಗೆ 5000 ಪ್ರತಿ ತಿಂಗಳು ಮಾಶಾಸನ, ಕುಟುಂಬಕ್ಕೆ ಒಂದು ವರ್ಷಕ್ಕೆ 5 ಗ್ಯಾಸ್ ಸಿಲಿಂಡರ್ ಉಚಿತ ನೀಡುವುದಾಗಿ ಘೋಷಿಸಿದ್ದಾರೆ. ಆದ್ದರಿಂದ ಶಿರಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಆರ್.ಉಗ್ರೇಶ್ ಅವರನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಕುಮಾರಣ್ಣ ಅವರನ್ನು ಮುಖ್ಯಮಂತ್ರಿ ಮಾಡಿ ಎಂದರು.
ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಸತ್ಯಪ್ರಕಾಶ್, ಮಾಜಿ ಜಿ.ಪಂ. ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ, ಮಾಜಿ ಸದಸ್ಯ ರಾಮಕೃಷ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ನರಸಿಂಹೇಗೌಡ, ಮುಖಂಡರಾದ ಕಲ್ಕೆರೆ ರವಿಕುಮಾರ್, ನಿಡಗಟ್ಟೆಚಂದ್ರಶೇಖರ್, ಲಿಂಗದಹಳ್ಳಿ ಚೇತನ್‌ಕುಮಾರ್, ಈರಣ್ಣ, ಸೋಮಶೇಖರ್, ಕೊಲ್ಲಾರಪ್ಪ ಸೇರಿದಂತೆ ಹಲವರು ಹಾಜರಿದ್ದರು.
ಒಬ್ಬ ಶಾಸಕರ ಮಗ ಶಾಸಕರಾಗಬಹುದು. ಆದರೆ ಒಬ್ಬ ರೈತನ ಮಗ ಶಾಸಕರಾಗಲು ತುಂಬಾ ಕಷ್ಟವಿದೆ. ಮತದಾರರು ಮನಸ್ಸು ಮಾಡಿದರೆ ನನ್ನಂತಹ ಒಬ್ಬ ಸಾಮಾನ್ಯ ರೈತನ ಮಗನೂ ಶಾಸಕನಾಗಬಹುದು. ಆದರೆ ಎಲ್ಲವೂ ಮತದಾರನ ಕೈಯಲ್ಲಿದ್ದು, ಅವರೇ ಈ ಕುರಿತು ನಿರ್ಧರಿಸಬೇಕು
ಆರ್. ಉಗ್ರೇಶ್, ಜೆಡಿಎಸ್ ಅಭ್ಯರ್ಥಿ