ರಾಯಚೂರು ಜಿಲ್ಲಾದ್ಯಂತ ಗುಡುಗು-ಮಿಂಚಿನ ಭಾರೀ ಮಳೆ

By Kannadaprabha NewsFirst Published Apr 29, 2023, 4:39 AM IST
Highlights

ನಗರ ಸೇರಿ​ದಂತೆ ಜಿಲ್ಲೆ ಹಲವು ಪ್ರದೇ​ಶ​ಗ​ಳಲ್ಲಿ ಗುಡು ಮಿಂಚಿನ ಓಟ​ದಡಿ ಗಾಳಿ ಮಳೆ ಆರ್ಭ​ಟಕ್ಕೆ ಜನ​ಜೀ​ವನ ಅಸ್ತ​ವ್ಯ​ವ​ಸ್ತ​ಗೊಂಡಿದೆ. ಇಷ್ಟುದಿನ ಬೇಸಿ​ಗೆಯ ಬಿರು​ಬಿ​ಸಿ​ಲಿಗೆ ಬಸ​ವ​ಳಿದ ಜನ​ಸಾ​ಮಾ​ನ್ಯರು ಅಕಾ​ಲಿಕ ಮಳೆಯ ತಂಪಿ​ನ ಅನು​ಭ​ವದ ಸಿಹಿಯ ಜೊತೆಗೆ ಅನಾ​ಹು​ತದ ಕಹಿ​ಯನ್ನು ಸವಿ​ದಿದ್ದಾರೆ.

ರಾಯ​ಚೂ​ರು (ಏ.29) : ನಗರ ಸೇರಿ​ದಂತೆ ಜಿಲ್ಲೆ ಹಲವು ಪ್ರದೇ​ಶ​ಗ​ಳಲ್ಲಿ ಗುಡು ಮಿಂಚಿನ ಓಟ​ದಡಿ ಗಾಳಿ ಮಳೆ ಆರ್ಭ​ಟಕ್ಕೆ ಜನ​ಜೀ​ವನ ಅಸ್ತ​ವ್ಯ​ವ​ಸ್ತ​ಗೊಂಡಿದೆ. ಇಷ್ಟುದಿನ ಬೇಸಿ​ಗೆಯ ಬಿರು​ಬಿ​ಸಿ​ಲಿಗೆ ಬಸ​ವ​ಳಿದ ಜನ​ಸಾ​ಮಾ​ನ್ಯರು ಅಕಾ​ಲಿಕ ಮಳೆಯ ತಂಪಿ​ನ ಅನು​ಭ​ವದ ಸಿಹಿಯ ಜೊತೆಗೆ ಅನಾ​ಹು​ತದ ಕಹಿ​ಯನ್ನು ಸವಿ​ದಿದ್ದಾರೆ.

ಶುಕ್ರ​ವಾರ ಮಧ್ಯಾ​ಹ್ನ ಇದ್ದ​ಕ್ಕಿ​ದ್ದಂತೆ ದಟ್ಟ​ವಾಗಿ ಕವಿದ ಮೋಡದ ವಾತಾ​ವ​ರ​ಣ​ದಲ್ಲಿ ಭಾರಿ ಪ್ರಮಾ​ಣದ ಗುಡು​ಗು, ​ಮಿಂಚಿ​ನಿಂದ ಕೂಡಿದ ಬಿರು​ಗಾಳಿ ಮಳೆ ಸುರಿ​ದಿದ್ದು ಇದರ ಪರಿ​ಣಾ​ಮ​ವಾಗಿ ವಿವಿ​ಧ​ ಕಡೆ ಮರ-ಗಿಡ​ಗಳು, ವಿದ್ಯುತ್‌ ಕಂಬ​ಗಳು ನೆಲ​ಕ್ಕು​ರು​ಳಿವೆ. ತಗ್ಗು ಪ್ರದೇ​ಶ​ಗ​ಳ ಮನೆಗಳು, ಕಚೇರಿಗಳಲ್ಲಿ ನೀರು ನುಗ್ಗಿ​ದೆ. ಮುಖ್ಯ​ರ​ಸ್ತೆ​ಗ​ಳಲ್ಲಿ ಚರಂಡಿ ತುಂಬಿ ರಸ್ತೆ ಮೇಲೆ ಹರಿದ ಪರಿ​ಣಾಮ ವಾಹ​ನ​ಗಳ ಸಂಚಾ​ರಕ್ಕೆ ತೀತ್ರ ಸಮಸ್ಯೆ ಉಂಟಾ​ಯಿತು. ಭಾರಿ ಗಾಳಿ-ಮಳೆ ಆರಂಭ​ವಾ​ಗು​ತ್ತಿ​ದ್ದಂತೆಯೇ ವಿದ್ಯುತ್‌ ಸರ​ಬ​ರಾಜು ಸ್ಥಗಿ​ತ​ಗೊಂಡು ಸುಮಾರು ಐದಾರು ತಾಸು ಕರೆಂಟಿ​ಲ್ಲದೇ ಜನರು ಪರ​ದಾ​ಡಿ​ದರು.

ಮಳೆಯ ನಡುವೆಯೇ ಪ್ರಧಾನಿಯ ಕಟೌಟ್‌ ಒರೆಸುತ್ತಾ ನಿಂತ ಅಭಿಮಾನಿ, ಮೋದಿನೇ ನಮ್ಮ ದೇವರೆಂದ!

ನಗ​ರ​ದಲ್ಲಿ ಸುರಿದ ಮಳೆ​ಯಿಂದಾಗಿ ರಾಜೇಂದ್ರ ಗಂಜ್‌ ಕೃಷಿ ಉತ್ಪನ್ನ ಮಾರು​ಕ​ಟ್ಟೆ​ಯಲ್ಲಿ ರೈತರು ತಂದಿದ್ದ ಭತ್ತ ಸೇರಿ ಇತರೆ ಬೆಳೆ​ಗಳು ಮಳೆ ನೀರಿ​ಯಲ್ಲಿ ತೊಯ್ದವು, ಸ್ಥಳೀಯ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗ​ಣದ ಆವ​ರ​ಣ​ದಲ್ಲಿ ಕಳೆದ 351 ದಿನಗಳಿಂದ ಏಮ್ಸ್‌ ಹೋರಾಟ ಸಮಿತಿ ಧರಣಿ ನಡೆಸುತ್ತಿ ಪೆಂಡಾಲ್‌ ಸಂಪೂರ್ಣ ಕುಸಿದು ಬಿದ್ದಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿಗಳು ಸಂಭವಿಸಿಲ್ಲ. ರಾಯ​ಚೂರು ಕೃಷಿ ವಿಜ್ಞಾ​ನ​ಗಳ ವಿಶ್ವ​ವಿ​ದ್ಯಾ​ಲಯ ಆವ​ರಣದಲ್ಲಿ ಸುಮಾರು ನಾಲ್ಕೈದು ಮರಗಳು ನೆಲಕ್ಕುರುಳಿದರೆ, ಕೃಷಿ ವಿವಿ ಆಡಳಿತ ಭವನದಲ್ಲಿ ಗಾಳಿಯ ರಭಸಕ್ಕೆ ಗಾಜಿನ ಬಾಗಿಲು ತೆರೆದುಕೊಂಡು ಮಳೆ ನೀರು ಒಳ ನುಗ್ಗಿದೆ. ಜಿಲ್ಲಾ ನ್ಯಾಯಾಧೀಶರ ಮನೆ ಆವರಣದಲ್ಲಿ ಮರ ಉರುಳಿದರೆ, ಡ್ಯಾಡಿ ಕಾಲನಿಯ ಹಳೆಯ ಆರ್‌ಡಿಎ ಕಚೇರಿ ಎದುರಿನ ಮರ ಉರುಳಿದ್ದು, ಸಮೀ​ಪದ ರಾಂಪುರದಲ್ಲಿ ಜೋರಾದ ಗಾಳಿಗೆ ಗಿಡಗಳು ನೆಲಕ್ಕುರುಳಿವೆ.

ಮಳೆ​ಯಿಂದಾಗಿ ನಗರದ ವåಹಾವೀರ ವೃತ್ತದಿಂದ ಗಾಂಧಿವೃತ್ತದವರೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲೆಲ್ಲ ಮಳೆ ನೀರು ಸಂಗ್ರಹಗೊಂಡ ಪರಿಣಾಮ ವಾಹನ ಸವಾರರು ಪರದಾಡಿರುವುದು ಕಂಡು ಬಂದಿತು.

ಚರಂಡಿ ನೀರು ರಸ್ತೆಗಳ ಮೇಲೆಲ್ಲ ಹರಿದು ಬಂದು ಸಮಸ್ಯೆ ಎದುರಿಸುವಂತಾಯಿತು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು. ದಟ್ಟಕಾರ್ಮೋಡ ಆವರಿಸಿ ಗುಡುಗು ಸಿಡಿಲಾರ್ಭಟ ಜೋರಾಗಿತ್ತು. ಗ್ರಾಮೀಣ ಭಾಗದಲ್ಲೂ ಸಾಕಷ್ಟುಕಡೆ ಮರಗಳು ಉರುಳಿದ್ದು, ವಿದ್ಯುತ್‌ ವೈರ್‌ಗಳು ಹಾನಿಗೀಡಾಗಿವೆ. ಇದರಿಂದ ವಿದ್ಯುತ್‌ ಕಡಿತಗೊಂಡಿತ್ತು.

ಬೆಂಗಳೂರಿನಲ್ಲಿ ನಿನ್ನೆ ವರ್ಷದ ಅತಿ ಹೆಚ್ಚು ಬಿಸಿಲು: 36.5ಕ್ಕೆ ತಲುಪಿದ ಉಷ್ಣಾಂಶ

ಆದರೆ, ಕೆಲವು ಕಡೆಗಳಲ್ಲಿ ಚುನಾವಣೆ ಪ್ರಚಾರ ಕಾರ್ಯಕ್ರಮಗಳಿಗೆ ವರುಣ ಅಡ್ಡಿಯಾಗಿದ್ದು, ಮಸ್ಕಿ​ಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾ​ರ​ದಲ್ಲಿ ಭಾಗ​ವ​ಹಿ​ಸಿದ್ದ ಮಾಜಿ ಸಿಎಂ ಸಿದ್ದ​ರಾ​ಮಯ್ಯ ಅವರು ಮಳೆ​ಯ​ಲ್ಲಿಯೇ ಭಾಷಣೆ ಮಾಡಿ​ದರು. ನೆಚ್ಚಿನ ನಾಯ​ಕನ ಭಾಷ​ಣ​ವನ್ನು ಪಕ್ಷದ ಕಾರ್ಯ​ಕ​ರ್ತರು, ಬೆಂಬ​ಲಿ​ಗರು, ಜನರು ಮಳೆ​ಯ​ಲ್ಲಿಯೇ ನಿಂತು ಕೇಳಿ​ದರು. ಇನ್ನು ಬೇರೆ​ಕಡೆ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಮಳೆ​ಯಿಂದಾಗಿ ಪ್ರಚಾ​ರಕ್ಕೆ ಅಡ್ಡಿಯುಂಟಾ​ಗಿ​ದ್ದ​ರಿಂದ ಪೇಚಾಡಿದ​ರು. ಗುರುವಾರ ಸಂಜೆ ಕೂಡ ಕೆಲ ಕಾಲ ಮಳೆ ಸುರಿದಿದ್ದರಿಂದ ಪ್ರಚಾರಕ್ಕೆ ಅಡ್ಡಿಯಾಗಿತ್ತು. ಆದರೆ, ಹೆಚ್ಚು ಕಾಲ ಸಮಸ್ಯೆಯಾಗಲಿಲ್ಲ. ಶುಕ್ರವಾರ ಮಾತ್ರ ಮಧ್ಯಾಹ್ನದಿಂದ ಸಂಜೆವರೆಗೂ ಜೋರು ಮಳೆ ಸುರಿದಿದ್ದು, ನಂತರ ಜಿಟಿ ಜಿಟಿ ಸುರಿದ ಪರಿಣಾಮ ಪ್ರಚಾರ ಕಾರ್ಯಗಳಿಗೆ ಅಡ್ಡಿಯಾಗಿತ್ತು.

ಅಕಾಲಿಕ ಮಳೆ; ಸಂಕಷ್ಟದಲ್ಲಿ ರೈತ:

ಸಿರವಾರ: ಶುಕ್ರವಾರ ಸಂಜೆ ಸುರಿದ ಅಕಾಲಿಕ ಮಳೆಗೆ ತಾಲ್ಲೂಕಿನಾದ್ಯಂತ ಕಟಾವು ಮಾಡಿದ್ದ ಭತ್ತವು ಮಳೆ ನೀರು ಪಾಲಾಗಿದ್ದು, ರೈತರು ಸಂಕಷ್ಟಅನುಭವಿಸುವಂತಾಗಿದೆ.

ತುಂಗಾಭದ್ರ ಎಡದಂಡೆ ನಾಲೆಯ ಅಚ್ಚುಕಟ್ಟು ಪ್ರದೇಶದಲ್ಲಿ ನೂರಾರು ಎಕರೆಯಲ್ಲಿ ಬೆಳದ ಭತ್ತದ ಬೆಳೆಯು ಉತ್ತಮ ಇಳುವರಿಯೊಂದಿಗೆ ಕಟಾವು ಮಾಡಲಾಗಿದ್ದು, ಸದ್ಯದ ಸಮಯದಲ್ಲಿ ಭತ್ತದ ದರವೂ ಉತ್ತಮವಿದೆ. ಆದರೆ ಕಟಾವು ಮಾಡಿ ಇನ್ನೇನು ಚೀಲದಲ್ಲಿ ತುಂಬಿ ಮಾರಾಟ ಮಾಡಬೇಕಾಗಿದ್ದ ರೈತನಿಗೆ ಮಳೆಯು ಸಂಕಷ್ಟತಂದೊಡ್ಡಿದೆ. ಭತ್ತ ನಾಟಿ ಮಾಡಿದಾಗಿನಿಂದ ಕಟಾವಿನವರೆಗೂ ಯಾವುದೇ ತೊಂದರೆ ಅನುಭವಿಸದ ರೈತ ಕೊನೆಗೆ ಅಕಾಲಿಕ ಮಳೆಯು ಸಂಕಷ್ಟಕೀಡು ಮಾಡಿದೆ.

click me!