Kodagu: ಚೆಟ್ಟಳ್ಳಿ ಕೇಂದ್ರೀಯ ತೋಟದಲ್ಲಿ ಬಾಯಿ ನೀರೂರಿಸುವ ಕೆಂಪು, ಹಸಿರು, ಚೈನೀಸ್ ಲಿಚ್ಚಿ!

By Govindaraj S  |  First Published Dec 7, 2023, 8:35 PM IST

ಹಣ್ಣುಗಳು ಅಂದರೆ ಯಾರಿಗೆ ತಾನೆ ಇಷ್ಟವಾಗಲ್ಲ ಹೇಳಿ. ಹಣ್ಣುಗಳ ಅಂಗಡಿ ಮುಂದೆ ನಿಂತು ಅಬ್ಬಬ್ಬಾ ಎಷ್ಟೊಂದು ತರಾವರಿ ಹಣ್ಣುಗಳಿವೆ ಅಂತ ಅಂದುಕೊಳ್ತೀರಿ ಅಲ್ವಾ. ಹೀಗಿರುವಾಗ ಕಣ್ಣು ಕೋರೈಸುವಂತೆ ಮರದಲ್ಲಿ ರಾಶಿ, ರಾಶಿ ಹಣ್ಣುಗಳು ನಿಮ್ಮ ಮುಂದಿದ್ದರೆ ಒಮ್ಮೆ ರುಚಿ ನೋಡ್ಲೇಬೇಕು ಎಂದೆನಿಸದೆ ಇರುವುದಕ್ಕೆ ಸಾಧ್ಯವೇ ಇಲ್ಲಾ ಅಲ್ವಾ. 
 


ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಡಿ.07): ಹಣ್ಣುಗಳು ಅಂದರೆ ಯಾರಿಗೆ ತಾನೆ ಇಷ್ಟವಾಗಲ್ಲ ಹೇಳಿ. ಹಣ್ಣುಗಳ ಅಂಗಡಿ ಮುಂದೆ ನಿಂತು ಅಬ್ಬಬ್ಬಾ ಎಷ್ಟೊಂದು ತರಾವರಿ ಹಣ್ಣುಗಳಿವೆ ಅಂತ ಅಂದುಕೊಳ್ತೀರಿ ಅಲ್ವಾ. ಹೀಗಿರುವಾಗ ಕಣ್ಣು ಕೋರೈಸುವಂತೆ ಮರದಲ್ಲಿ ರಾಶಿ, ರಾಶಿ ಹಣ್ಣುಗಳು ನಿಮ್ಮ ಮುಂದಿದ್ದರೆ ಒಮ್ಮೆ ರುಚಿ ನೋಡ್ಲೇಬೇಕು ಎಂದೆನಿಸದೆ ಇರುವುದಕ್ಕೆ ಸಾಧ್ಯವೇ ಇಲ್ಲಾ ಅಲ್ವಾ. ಈಗ ನಾವು ತೋರಿಸುತ್ತಿರುವ ಸ್ಟೋರಿಯಲ್ಲೂ ಹಣ್ಣುಗಳ ರಾಶಿ ನಿಮ್ಮ ಬಾಯಿಯಲ್ಲಿ ನೀರೂರಿಸುತ್ತದೆ ನೋಡಿ. ಮರದ ಯಾವ ಕಡೆಗೆ ನೋಡಿದರೂ ಹಣ್ಣುಗಳ ರಾಶಿ, ಇಡೀ ತೋಟದಲ್ಲಿ ಯಾವ ಮರದತ್ತ ಕಣ್ಣಾಯಿಸಿದರೂ ಕೆಂಪಾಗಿ ಕಣ್ಣು ಕೋರೈಸುವ ಹಣ್ಣು. 

Tap to resize

Latest Videos

undefined

ಗೊನೆ, ಗೊನೆಯಾಗಿ ಕೆಂಪಾಗಿ ತೂಗುತ್ತಿರುವ ಹಣ್ಣಗಳು, ಹಣ್ಣುಗಳ ಭಾರಕ್ಕೆ ಮರದ ಕೊಂಬೆಗಳೇ ಬಾಗಿ ತೂಗುತ್ತಿರುವ ಚಂದವೇನು.? ಹಣ್ಣುಗಳ ಕಂಡು ಖುಷಿಯಿಂದಲೇ ಹಿಡಿದು ಫೋಟೋ ಕ್ಲಿಕ್ಕಿಸಿಕೊಳ್ಳುವ ಜನರು. ಹೌದು ಇಂತಹ ಅಪರೂಪದ ದೃಶ್ಯ ಕಂಡು ಬರುತ್ತಿರುವುದು ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿಯಲ್ಲಿ ಇರುವ ಕೇಂದ್ರೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಲಿಚ್ಚಿ ತೋಟದಲ್ಲಿ. ಲಿಚ್ಚಿ ತೋಟದಲ್ಲಿರುವ ಎಲ್ಲಾ 64 ಮರಗಳು ಈ ಬಾರಿ ಅಪಾರ ಪ್ರಮಾಣದ ಹಣ್ಣು ಬಿಟ್ಟಿದ್ದು, ಹಣ್ಣಿನ ಭಾರಕ್ಕೆ ಬಾಳೆ ಗೊನೆ ಬಾಗುವಂತೆ ಎಲ್ಲಾ ಮರಗಳ ಕೊಂಬೆಗಳು ಭಾಗಿವೆ. ಎತ್ತ ತಿರುಗಿ ನೋಡಿದರೂ ಲಿಚ್ಚಿ ಹಣ್ಣು. 

Kodagu: 40 ವರ್ಷದ ಹಿಂದೆ ಜಲಾಶಯದೊಳಗೆ ಮುಳುಗಿದ್ದ ಶಿವನ ದೇವಾಲಯ ಪತ್ತೆ!

ನೀವೊಮ್ಮೆ ಅಲ್ಲಿ ಹೋದಿರೆಂದರೆ ರುಚಿಗಾದರೂ ಎರಡು ಹಣ್ಣು ಕಿತ್ತು ತಿನ್ನದೆ ಇರುವುದಿಲ್ಲ. ಆಗಂತ ನೀವು ಟ್ರೈ ಮಾಡಲು ಹೋಗಬೇಡಿ. ಯಾಕೆಂದರೆ ಸಾರ್ವಜನಿಕರಿಗೆ ಈ ತೋಟದೊಳಗೆ ಹೋಗುವುದನ್ನು ನಿರ್ಭಂಧಿಸಲಾಗಿದೆ. ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ ವಿಶೇಷ ಉಪನ್ಯಾಸವೊಂದು ಇದ್ದಿದ್ದರಿಂದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಲಿ ಎಂಬುವರು ಹಣ್ಣುಗಳನ್ನು ನೋಡಿ ಖುಷಿಪಟ್ಟರು. ಇನ್ನು ಕೆಲವು ಒಂದೆರಡು ಹಣ್ಣುಗಳನ್ನು ಕಿತ್ತು ತಿಂದು ಆಹಾ ಎಂತಹ ರುಚಿ ಅಂತ ಬಾಯಿ ಚಪ್ಪರಿಸಿದರು. ಪ್ರತೀ ವರ್ಷ ಲಿಚ್ಚಿ ಹಣ್ಣು ಬಿಡುತಿದ್ದು ಅದರಲ್ಲೂ ಈ ಬಾರಿ ಎಲ್ಲಾ 64 ಮರಗಳು ಅಪಾರ ಪ್ರಮಾಣದಲ್ಲಿ ಫಸಲು ಬಿಟ್ಟಿವೆ. 

ಕೆಂಪು, ಹಸಿರು ಮತ್ತು ಚೈನೀಸ್ ಸೇರಿದಂತೆ ಮೂರು ವಿಧದ ಲಿಚ್ಚಿ ಹಣ್ಣುಗಳು ಇಲ್ಲಿವೆ. ಕೆಂಪು ಬಣ್ಣದ್ದು ಸಾಮಾನ್ಯ ಲಿಚ್ಚಿಯಾಗಿದ್ದರೆ, ಹಸಿರು ಲಿಚ್ಚಿ ತುಂಬಾ ರುಚಿಕರ ಎನ್ನುತ್ತಾರೆ ಸ್ಥಳೀಯರು. ಉತ್ತಮ ಗುಣಮಟ್ಟದಲ್ಲಿ ಹಣ್ಣುಗಳು ಇದ್ದು ಸದ್ಯ ಇದನ್ನು ಖಾಸಗಿ ವ್ಯಾಪಾರಿಯೊಬ್ಬರಿಗೆ 5 ಲಕ್ಷ ರೂಪಾಯಿಗೆ ಟೆಂಡರ್ ನೀಡಲಾಗಿದೆ. ಉತ್ತಮ ಗುಣಮಟ್ಟದ ಫಸಲು ಬಂದಿರುವುದರಿಂದ ಇವರು ಹಣ್ಣನ್ನು ಕೊಯ್ಲು ಮಾಡಿ ಬಾಂಬೆ, ಕಲ್ಕತ್ತಾ ಮತ್ತು ಬೆಂಗಳೂರು ಸೇರಿದಂತೆ ಹಲವು ನಗರಗಳಿಗೆ ಕಳುಹಿಸುತ್ತಿದ್ದಾರೆ. ಅಲ್ಲದೆ ಸ್ಥಳೀಯ ವ್ಯಾಪಾರಿಗಳಿಗೂ ಮಾರಾಟ ಮಾಡುತ್ತಿದ್ದಾರೆ. ಇನ್ನು ಸ್ಥಳದಲ್ಲಿಯೇ ಹಣ್ಣನ್ನು ಒಂದು ಕೆಜಿಗೆ ಕೇವಲ 250 ರೂಪಾಯಿಯಂತೆ ಮಾರಾಟ ಮಾಡುತ್ತಿದ್ದಾರೆ. 

Kodagu ವೃದ್ಧ ದಂಪತಿಯಿಂದ ಮನೆಯಂಗಳದಲ್ಲೇ ಬೆಳೆಯುತ್ತವೆ ತರಕಾರಿಗಳು: ಮಡಹಾಗಲಕ್ಕೆ ಕೃತಕ ಪರಾಗಸ್ಪರ್ಶ

ಇದೇ ಹಣ್ಣನ್ನು ಹೊರಗಡೆ 350 ರೂಪಾಯಿಯಿಂದ 400 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಯಾವುದೇ ರಾಸಾಯನಿಕವಿಲ್ಲದೆ ಸ್ವಾಭಾವಿಕವಾಗಿ ಮರದಲ್ಲೇ ಹಣ್ಣಾಗುವ ಲಿಚ್ಚಿಯ ಸವಿಯನ್ನು ನೀವು ಒಮ್ಮೆ ಸವಿಯಬಹುದು. ವಿಶಾಲವಾದ ಜಾಗಗಳಿದ್ದರೆ ರೈತರು ತಾವು ಕೂಡ ಲಿಚ್ಚಿಯನ್ನು ಬೆಳೆದು ಉತ್ತಮ ಲಾಭ ಪಡೆಯಬಹುದು ಎನ್ನುತ್ತಾರೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯ ಚೆಟ್ಟಳ್ಳಿಯಲ್ಲಿ ಇರುವ ಕೇಂದ್ರೀಯ ತೋಟಗಾರಿಕೆ ಸಂಶೋಧನಾ ಕೇಂದ್ರ ಲಿಚ್ಚಿ ತೋಟ ಈಗ ಹಣ್ಣುಗಳಿಂದ ಎಲ್ಲರ ಗಮನ ಸೆಳೆಯುತ್ತಿದ್ದು, ಹಣ್ಣಿನ ಗಮನಲು ಎಲ್ಲರ ಕಣ್ಮನಗಳನ್ನು ಸೆಳೆಯುತ್ತಿರುವುದಂತು ಸತ್ಯ.

click me!