ಇವರು ನವೆಂಬರ್ 1 ಕನ್ನಡಿಗ ಅಲ್ಲ; ನಂಬರ್ ಒನ್ ಕನ್ನಡಿಗ!

By Ravi JanekalFirst Published Nov 1, 2022, 9:36 PM IST
Highlights

ಇವರು ನವೆಂಬರ್ 1 ಕನ್ನಡಿಗ ಅಲ್ಲ; ನಂಬರ್ ಒನ್ ಕನ್ನಡಿಗ- ಹಾವೇರಿ ಜಿಲ್ಲೆಯೊಬ್ಬ ಕನ್ಮಡಾಭಿಮಾನಿ ಬಸ್ ಡ್ರೈವರ್. 35 ಸಾವಿರ ರೂ. ಸ್ವಂತ ಖರ್ಚಿನಲ್ಲಿ ಸಾರಿಗೆ ಬಸ್‌ ಅನ್ನು ‘ಕನ್ನಡ ರಥ’ವಾಗಿ ಮಾರ್ಪಡಿಸಿದ್ದಾರೆ ಶಶಿಕುಮಾರ್ ಭೋಸ್ಲೆ. ನಿರ್ವಾಹಕ ಶಶಿ ಭೋಸ್ಲೆ ಕನ್ನಡಾಭಿಮಾನವೂ ಜಿಲ್ಲೆಯಾದ್ಯಂತ ಮೆಚ್ಚುಗೆ ಗಳಿಸಿದೆ.. ನಿರ್ವಾಹಕ ಶಶಿಕುಮಾರ್‌ ಬೋಸ್ಲೆ ಮತ್ತು ಚಾಲಕ ಹರೀಶ್‌.ಕನ್ನಡಾಭಿಮಾನಿಗಳು

ವರದಿ- ಪವನ್ ಕುಮಾರ್ , ಏಷ್ಯಾನೆಟ್ ಸುವರ್ಣ ನ್ಯೂಸ್ ಹಾವೇರಿ

ಹಾವೇರಿ( ನ. 1) : ವರ್ಷಕ್ಕೊಮ್ಮೆ ಡಾ.ರಾಜ್ ಕುಮಾರ್ ಹಾಡಿರುವ 'ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು' ಹಾಡು ಕೇಳಿ, ಕುಣಿದು ಕುಪ್ಪಳಿಸಿ ರಾಜ್ಯೋತ್ಸವ ಮಾಡಿ ಮನೆ ಕಡೆ ಹೊರಡೋ  ಕನ್ನಡಾಭಿಮಾನ ಒಂದು ಕಡೆ ಆದರೆ, ಕನ್ನಡವೇ ಉಸಿರು ಎಂಬ ಕನ್ನಡಾಭಿಮಾನ ಕೆಲವರದ್ದು.

ಪುನೀತ್ ರಾಜ್‌ಕುಮಾರ್‌ಗೆ ಕರ್ನಾಟಕ ರತ್ನ, ಸಮಾರಂಭಕ್ಕೆ ರಜನಿಕಾಂತ್ ಸೇರಿ ಹಲವು ಗಣ್ಯರು!

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಾವೇರಿ ವಿಭಾಗದ, ಹಿರೇಕೆರೂರು ಘಟಕದ ‘ಶ್ರೀ ದುರ್ಗಾ ಎಕ್ಸ್‌ಪ್ರೆಸ್‌’ ಎಂಬ ಹೆಸರಿನ ಬಸ್‌  ಕನ್ನಡ ರಾಜ್ಯೋತ್ಸವಕ್ಕಾಗಿ ವಿಶಿಷ್ಟವಾಗಿ ಅಲಂಕೃತಗೊಂಡಿತ್ತು. ಈ ಬಸ್ ತುಂಬಾ ಕನ್ನಡದ ಕಲರವ.  'ಕನ್ನಡ ರಥ' ಎಂದೇ ಖ್ಯಾತಿ ಗಳಿಸಿರುವ ಈ ಬಸ್ ಪ್ರಯಾಣಿಕರಲ್ಲಿ ಕನ್ನಡಾಭಿಮಾನವನ್ನು ಜಾಗೃತಗೊಳಿಸುತ್ತಿದೆ. 

ಅಂದ ಹಾಗೆ ಸ್ವಂತ ದುಡ್ಡು ಖರ್ಚು ಮಾಡಿ‌ ಹೀಗೆ ಬಸ್ ಅಲಂಕಾರ ಮಾಡಿದ್ದು ನಿರ್ವಾಹಕ ಶಶಿಕುಮಾರ್ ಬೋಸ್ಲೆ.‘ನವೆಂಬರ್‌ ತಿಂಗಳಲ್ಲಿ ಈ ಕನ್ನಡ ರಥವು ಬೆಂಗಳೂರು, ಮೈಸೂರು, ವಿಜಯಪುರ, ಭಟ್ಕಳ, ಬೆಳಗಾವಿ, ಶಿರಸಿ ಮುಂತಾದ ಮಾರ್ಗಗಳಲ್ಲಿ ಸಂಚರಿಸಲಿದೆ. ಕನ್ನಡದ ಹಾಡುಗಳನ್ನು ಕೇಳಲಿ ಎಂದು ಸ್ಪೀಕರ್‌ಗಳನ್ನು ಅಳವಡಿಸಿದ್ದೇನೆ. 500 ಪ್ರಯಾಣಿಕರಿಗೆ ಸಿಹಿ ವಿತರಿಸುತ್ತೇನೆ. ಮಾತೃಭಾಷೆ ಕನ್ನಡವನ್ನು ಉಳಿಸಿ–ಬೆಳೆಸುವ ದೃಢ ನಿರ್ಧಾರವನ್ನು ಪ್ರತಿಯೊಬ್ಬ ಕನ್ನಡಿಗನೂ ಕೈಗೊಳ್ಳಬೇಕು’ ಎನ್ನುತ್ತಾರೆ ನಿರ್ವಾಹಕ ಶಶಿಕುಮಾರ್‌ ಬೋಸ್ಲೆ ಮತ್ತು ಚಾಲಕ ಹರೀಶ್‌.

35 ಸಾವಿರ ರೂ. ಸ್ವಂತ ಖರ್ಚಿನಲ್ಲಿ ಸಾರಿಗೆ ಬಸ್‌ ಅನ್ನು ‘ಕನ್ನಡ ರಥ’ವಾಗಿ ಮಾರ್ಪಡಿಸಿದ್ದಾರೆ ಶಶಿಕುಮಾರ್ ಭೋಸ್ಲೆ. ನಿರ್ವಾಹಕ ಶಶಿ ಭೋಸ್ಲೆ ಕನ್ನಡಾಭಿಮಾನವೂ ಜಿಲ್ಲೆಯಾದ್ಯಂತ ಮೆಚ್ಚುಗೆ ಗಳಿಸಿದೆ..

ಬಸ್‌ ಮುಂಭಾಗದಲ್ಲಿ ಕನ್ನಡಮ್ಮನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಹಿಂಭಾಗದಲ್ಲಿ ‘ಕರುನಾಡ ಕನ್ನಡಿಗ’ ಎಂಬ ನಾಮಫಲಕ ಹಾಗೂ ಭುವನೇಶ್ವರಿ, ಶಿವಾಜಿ ಮತ್ತು ಭಗತ್‌ಸಿಂಗ್‌ರ ಭಾವಚಿತ್ರಗಳು ರಾರಾಜಿಸುತ್ತಿವೆ.ಬಲಬದಿಯಲ್ಲಿ ‘ಕನ್ನಡವೇ ಸತ್ಯ ಕನ್ನಡವೇ ನಿತ್ಯ’ ಹಾಗೂ ಮತ್ತೊಂದು ಬದಿಯಲ್ಲಿ ‘ಸರ್ವಜ್ಞನ ನಾಡು ಹಿರೇಕೆರೂರಿನಿಂದ ಚನ್ನಮ್ಮನ ನಾಡು ಬೆಳಗಾವಿ' ಎಂಬ ಅಕ್ಷರಗಳು ಗಮನ ಸೆಳೆಯುತ್ತವೆ. 

ಜಿಲ್ಲೆಯ ಪ್ರಮುಖ ಪ್ರೇಕ್ಷಣಿಯ ಸ್ಥಳಗಳು, ಪ್ರಮುಖ ನದಿಗಳು, ದೊರೆಯುವ ಖನಿಜಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರು, ಕನ್ನಡ ನುಡಿಮುತ್ತುಗಳು, ಸ್ವಾತಂತ್ರ್ಯ ಹೋರಾಟಗಾರರು, ಕವಿಗಳು, ಸಂತರು, ದಾರ್ಶನಿಕರ‌ ಭಾವಚಿತ್ರಗಳು ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನಗಳ ವಿವರಗಳನ್ನು ಬಸ್‌ ಹೊರಗಡೆ ಮತ್ತು ಒಳಗಡೆ ಅಂಟಿಸಲಾಗಿದೆ. ಪವರ್‌ ಸ್ಟಾರ್‌ ಡಾ.ಪುನೀತ್‌ ರಾಜಕುಮಾರ ಭಾವಚಿತ್ರ ಎಲ್ಲರ ಗಮನ ಸೆಳೆಯುತ್ತದೆ.

Kannada Rajyotsava awrds: ಯಾವುದೇ ಪ್ರಶಸ್ತಿಯ ಹಿಂದೆ ದೊಡ್ಡ ಸಾಧನೆ, ಪ್ರಯತ್ನ ಇರುತ್ತದೆ: ಸಿಎಂ

ಪ್ರಯಾಣಿಕರ ಸೀಟುಗಳ ತುದಿಗೆ ಕೆಂಪು ಮತ್ತು ಹಳದಿ ಬಣ್ಣದ ಹೊದಿಕೆಗಳನ್ನು ತೊಡಿಸಲಾಗಿದೆ. ಪ್ರಯಾಣ ಮಾಡುವ ವೇಳೆ ಜನರಿಗೆ ಓದಲು ಅನುಕೂಲವಾಗಲಿ ಎಂದು ಸೀಟಿಗೊಂದು ಕನ್ನಡ ಪುಸ್ತಕ ಮತ್ತು ಕನ್ನಡ ದಿನಪತ್ರಿಕೆಯನ್ನು ಇಡಲಾಗಿದೆ. ಜಿಲ್ಲೆಯ ನಕ್ಷೆ ಮತ್ತು ಪ್ರಮುಖ ಮಾಹಿತಿಯನ್ನು ಡ್ರಾಯಿಂಗ್‌ ಶೀಟಿನಲ್ಲಿ ಬರೆದು ತೂಗು ಹಾಕಲಾಗಿದೆ.

click me!