ಮದುವೆ ಹಿನ್ನೆಲೆ ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್; ಟ್ರಾಫಿಕ್‌ನಲ್ಲಿ ಸಿಲುಕಿ ಪರದಾಡಿದ ಅಂಬುಲೆನ್ಸ್

Published : Nov 01, 2022, 09:10 PM ISTUpdated : Nov 01, 2022, 09:11 PM IST
ಮದುವೆ ಹಿನ್ನೆಲೆ ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್; ಟ್ರಾಫಿಕ್‌ನಲ್ಲಿ ಸಿಲುಕಿ ಪರದಾಡಿದ ಅಂಬುಲೆನ್ಸ್

ಸಾರಾಂಶ

ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಪರದಾಡಿದ ಅಂಬುಲೆನ್ಸ್  ಮದುವೆ ಹಿನ್ನೆಲೆ ರಸ್ತೆಯ ಪಕ್ಕ ಅಡ್ಡಾದಿಡ್ಡಿ ಪಾರ್ಕಿಂಗ್ ಸುಮಾರು 2 ಕಿಲೋಮೀಟರ್ ದೂರ ಫುಲ್ ಟ್ರಾಫಿಕ್ ಜಾಮ್ ಸಂಚಾರ ದಟ್ಟಣೆಯಲ್ಲಿ ಸಿಲುಕಿ ವಾಹನ ಸವಾರರ ಪರದಾಟ

ಚಿಕ್ಕಮಗಳೂರು (ನ.1): ಮದುವೆಗೆ ಬಂದವರು ವಾಹನಗಳನ್ನ ರಸ್ತೆ ಬದಿ ಅಡ್ಡಾದಿಡ್ಡಿ ನಿಲ್ಲಿಸಿದ ಪರಿಣಾಮ ಸುಮಾರು ಎರಡು ಕಿ.ಮೀ. ಟ್ರಾಫಿಕ್ ಜಾಮ್ ಆಗಿ ಆಂಬುಲೆನ್ಸ್ ವಾಹನ ಕೂಡ ಪರದಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ. 

ಡೀಸೆಲ್ ಖಾಲಿಯಾಗಿ ಮಾರ್ಗ ಮಧ್ಯೆ ನಿಂತ ಆಂಬುಲೆನ್ಸ್‌: ರಸ್ತೆ ಬದಿ ಮಗುವಿಗೆ ಜನ್ಮ ನೀಡಿದ ತಾಯಿ

ಮೂಡಿಗೆರೆ ಪಟ್ಟಣದ ಹೊರವಲಯದ ರೈತ ಭವನದಲ್ಲಿ ನಡೆಯುತ್ತಿದ್ದ ಮದುವೆಗೆ ಬಂದವರು ಕಿರಿದಾದ ರಸ್ತೆಯಲ್ಲಿ ಎಲ್ಲೆಂದರಲ್ಲಿ ಅಡ್ಡದಿಡ್ಡಿ ಕಾರ್ ಪಾರ್ಕಿಂಗ್ ಮಾಡಿ ಹೋಗಿದ್ದರು. ರಾಷ್ಟ್ರೀಯ ಹೆದ್ದಾರಿ, ರಸ್ತೆ ಅಗಲೀಕರಣವೂ ನಡೆದಿಲ್ಲ. ವಾಹನಗಳು ಓಡಾಟವೂ ಹೆಚ್ಚಿರುತ್ತೆ. ಇಂಥ ಜಾಗದಲ್ಲಿ ರಸ್ತೆ ಬದಿ ಗಾಡಿಗಳನ್ನ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್ ಆಗಿ ಸುಮಾರು ಎರಡು ಕಿ.ಮೀ.ನಷ್ಟು ದೂರ ವಾಹನಗಳು ಸಾಲುಗಟ್ಟಿ ನಿಂತಲ್ಲೇ ನಿಲ್ಲುವಂಥ ಪರಿಸ್ಥಿತಿ ನಿಮಾರ್ಣವಾಗಿತ್ತು.

ಇದೇ ವೇಳೆ ರೋಗಿಯನ್ನ ಕರೆದುಕೊಂಡು ತುರ್ತು ಮಂಗಳೂರಿಗೆ ಹೊರಟಿದ್ದ ಆಂಬುಲೆನ್ಸ್ ಕೂಡ ಟ್ರಾಫಿಕ್‌ ಜಾಮ್‌ ನಲ್ಲಿ ಸಿಲುಕಿಕೊಂಡು ಮುಂದೆ ಸಾಗಲು ದಾರಿ ಇಲ್ಲದೆ ಪರದಾಡಿದೆ. ಸೈರನ್ ಹಾಕಿಕೊಂಡರು ಕೂಡ ರಸ್ತೆ ಬದಿ ಗಾಡಿ ನಿಂತ ಪರಿಣಾಮ ಇತರೆ ವಾಹನಗಳು ದಾರಿ ಬಿಡೋದಕ್ಕೆ ಪ್ರಯತ್ನಸಿದರೂ ಕೂಡ ಇಕ್ಕಟ್ಟಾದ ಸ್ಥಳದಲ್ಲಿ ಸಾಧ್ಯವಾಗಿಲ್ಲ. 

ಆಂಬುಲೆನ್ಸ್‌ ಇಲ್ಲದೆ 2 ವರ್ಷದ ಮಗುವಿನ ಶವ ಹೊತ್ತೊಯ್ದ 10 ವರ್ಷದ ಸಹೋದರ

ಮೂಡಿಗೆರೆಯಲ್ಲಿ ಈ ಸಮಸ್ಯೆ ಇಂದು-ನಿನ್ನೆಯದ್ದಲ್ಲ. ಪ್ರತಿ ಬಾರಿ ಮದುವೆ ನಡೆಯುವಾಗಲು ಈ ಸಮಸ್ಯೆ ಇದ್ದದ್ದೆ. ಇದಕ್ಕೆ ರೈತ ಭವನದ ಸಿಬ್ಬಂದಿ ಹಾಗೂ ಪೊಲೀಸರು ಕೂಡ ಯಾವುದೇ ಕ್ರಮ ಕೈಗೊಳ್ಳದಿರುವುದು ನಿಜಕ್ಕೂ ದುರಂತ. ಈ ಸಮಸ್ಯೆ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದೂ ಇಲ್ಲ. ಮೂಡಿಗೆರೆ ಠಾಣಾ ವ್ಯಾಪ್ತಿಯಲ್ಲಿ ಇಂಥ ಸಮಸ್ಯೆಗೆ ಮುಕ್ತಿ ಸಿಗೋದು ಯಾವಾಗ? 

PREV
Read more Articles on
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ