Hassan: ಪ್ರಾಣಸ್ನೇಹಿತನ ಕಾಪಾಡಲು ನದಿಗೆ ಹಾರಿದ, ಕೆರೆಗೆ ಹಾರವಾದ ಇಬ್ಬರು ಯುವಕರು!

Published : Feb 03, 2025, 09:49 AM IST
Hassan: ಪ್ರಾಣಸ್ನೇಹಿತನ ಕಾಪಾಡಲು ನದಿಗೆ ಹಾರಿದ, ಕೆರೆಗೆ ಹಾರವಾದ ಇಬ್ಬರು ಯುವಕರು!

ಸಾರಾಂಶ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಜಿನ್ನಾಪುರ ಗ್ರಾಮದ ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲಾಗಿದ್ದಾರೆ. ಕೆರೆಯಲ್ಲಿ ಬೆಳೆದಿದ್ದ ಗಿಡಗೆಂಟೆಗಳು ಕಾಲಿಗೆ ಸುತ್ತಿಕೊಂಡು ಮೇಲೆ ಬರಲಾಗದೆ ಮೃತಪಟ್ಟಿದ್ದಾರೆ.

ಹಾಸನ : ಕೆರೆಗೆ ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ನಡೆದಿದೆ. 29 ವರ್ಷದ ಯಶ್ವಂತ್‌ ಸಿಂಗ್‌ ಹಾಗೂ 28 ವ್ಷದ ರೋಹಿತ್‌ ಮೃತಪಟ್ಟ ಯುವಕರು. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಜಿನ್ನಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಇಬ್ಬರು ಸ್ನೇಹಿತರು, ಭಾನುವಾರ ಕೆಲಸ ಮುಗಿಸಿ ಸಂಜೆ ಕೆರೆಗೆ ಈಜಲು ತೆರಳಿದ್ದರು. ಇಬ್ಬರಿಗೂ ಕೂಡ ಈಜು ತಿಳಿದಿತ್ತು. ಮೊದಲು ರೋಹಿತ್ ಕೆರೆಗೆ ಧುಮುಕಿದ್ದ. ಕೆರೆಯಲ್ಲಿ ಬೆಳೆದಿದ್ದ ಮುಳ್ಳು, ಗಿಡಗೆಂಟೆಗಳು ಹಾಗೂ ಬಳ್ಳಿಗಳು ರೋಹಿತ್‌ ಕಾಲಿಗೆ ಸುತ್ತಿಕೊಂಡಿತ್ತು. ಕೆರೆಯಿಂದ ಮೇಲೆ ಬರಲಾರದೆ ಕಾಪಾಡಿ‌ ಎಂದು ರೋಹಿತ್‌ ಕಿರುಚಾಡಿದ್ದ. ಈ ವೇಳೆ ಗೆಳೆಯನನ್ನು ರಕ್ಷಿಸಲು ಯಶ್ವಂತ್‌ ಸಿಂಗ್‌ ಕೆರೆಗೆ ಇಳಿದಿದ್ದ. ಈ ವೇಳೆ ಬಳ್ಳಿ, ಗಿಡಗೆಂಟೆಗಳು ನಡುವೆ  ಯಶ್ವಂತ್‌ಸಿಂಗ್ ಕೂಡ ಸಿಲುಕಿಕೊಂಡಿದ್ದ.

97 ಎಕರೆ ಭೂಮಿ ಕಬಳಿಕೆ ಯತ್ನ, ಪ್ರಭಾವಿ ರಾಜಕಾರಣಿಗಳ ಕೈವಾಡ: ಎಚ್. ಡಿ. ರೇವಣ್ಣ

ಕೆರೆಯಿಂದ ಮೇಲೆ ಬರಲಾರದೆ ಇಬ್ಬರು ಗೆಳೆಯರು ನೀರಲ್ಲಿ ಮುಳುಗಿ ಸಾವು ಕಂಡಿದ್ದಾರೆ. ಶವಕ್ಕಾಗಿ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಶೋಧಕಾರ್ಯ ನಡೆಸಿದ್ದು, ತಡರಾತ್ರಿಯ ವೇಳೆಗೆ ತಡರಾತ್ರಿ ಇಬ್ಬರು ಯುವಕರು ಶವಗಳನ್ನು ಕೆರೆಯಿಂದ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು. ಶ್ರವಣಬೆಳಗೊಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹೊಳೆನರಸೀಪುರ ಚರಂಡಿಯಲ್ಲಿ ಹತ್ತಾರು ಹಾವುಗಳ ಚರ್ಮ ಪತ್ತೆ: ಆತಂಕದಲ್ಲಿ ಸ್ಥಳೀಯರು

PREV
Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಮಾಂಸದ ಮುದ್ದೆಯಂಥಾದ ಮೃತದೇಹದ ಮುಂದೆ ಮಗನ ಕಣ್ಣೀರು, ಪಂಚಭೂತದಲ್ಲಿ ಲೀನರಾದ ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ!