ಬೆಂಗಳೂರಿನಲ್ಲಿ ಪುಂಡನ ಅಟ್ಟಹಾಸ: ಸಿಗರೇಟ್ ಫ್ರೀಯಾಗಿ ಕೊಟ್ಟಿಲ್ಲವೆಂದು ಕಾಂಡಿಮೆಂಟ್ಸ್ ಮಾಲೀಕನಿಗೆ ಥಳಿತ!

Published : Feb 03, 2025, 08:11 AM IST
ಬೆಂಗಳೂರಿನಲ್ಲಿ ಪುಂಡನ ಅಟ್ಟಹಾಸ: ಸಿಗರೇಟ್ ಫ್ರೀಯಾಗಿ ಕೊಟ್ಟಿಲ್ಲವೆಂದು ಕಾಂಡಿಮೆಂಟ್ಸ್ ಮಾಲೀಕನಿಗೆ ಥಳಿತ!

ಸಾರಾಂಶ

ಬೆಂಗಳೂರಿನಲ್ಲಿ ಪುಂಡನೊಬ್ಬ ಕಾಂಡಿಮೆಂಟ್ಸ್ ವ್ಯಾಪಾರಿಗೆ ಉಚಿತವಾಗಿ ಸಿಗರೇಟ್ ಕೊಡದ್ದಕ್ಕೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಘಟನೆಯ ವಿಡಿಯೋ ವೈರಲ್ ಆಗಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ.

ಬೆಂಗಳೂರು (ಫೆ.03): ಉದ್ಯಾನನಗರಿ ಬೆಂಗಳೂರಿನಲ್ಲಿ ಪುಂಡರ ಅಟ್ಟಹಾಸ ಮಾತ್ರ ನಿಲ್ಲುತ್ತಿಲ್ಲ. ಬೇರೆ ಊರುಗಳಿಂದ ಕೆಲವರು ದುಡಿಮೆಗೆಂದೇ ಬಂದು ಜೀವನ ಕಟ್ಟಿಕೊಳ್ಳಲು ವ್ಯಾಪಾರ, ವ್ಯವಹಾರ ಹಾಗೂ ದುಡಿಮೆಯಲ್ಲಿ ತೊಡಗಿರುತ್ತಾರೆ. ಆದರೆ, ಅಂಥವರ ಮೇಲೆ ಕೆಲವು ಪೋಲಿ ಪುಡಾರಿಗಳು ಅಟ್ಟಹಾಸ ಮೆರೆದು ಹಣ ವಸೂಲಿ ಹಾಗೂ ಉಚಿತವಾಗಿ ವಸ್ತುಗಳನ್ನು ಬಳಕೆ ಮಾಡುವುದು ಶೋಕಿಯಾಗಿದೆ. ಇಂಥವರಿಗೆ ಪೊಲೀಸರು ಸರಿಯಾಗಿ ಬುದ್ಧಿ ಕಲಿಸದಿದ್ದರೆ, ಸಾಮಾನ್ಯರ ಜೀವನ ಇನ್ನಷ್ಟು ಕಷ್ಟವಾಗಲಿದೆ.

ಇದಕ್ಕೆ ಸಾಕ್ಷಿ ಎಂಬಂತೆ, ಬೆಂಗಳೂರಿನಲ್ಲಿ ಪುಂಡನೊಬ್ಬ ಕಾಂಡಿಮೆಂಟ್ಸ್ ವ್ಯಾಪಾರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಆತನ ಮೇಲೆ ಹಲ್ಲೆ ನಡೆಸಿದ ವೀಡಿಯೋ ವೈರಲ್ ಆಗಿದೆ. ಇಲ್ಲಿ ಅವಾಜ್ ಹಾಕುವ ಪುಂಡನೊಬ್ಬ ಬೇಕರಿ ಕಂ ಕಾಂಡಿಮೆಂಟ್ಸ್ ಅಂಗಡಿಯಲ್ಲಿ ಫ್ರೀಯಾಗಿ ಸಿಗರೇಟ್ ಕೊಡಬೇಕಂತೆ. ನಾನು ಎಣ್ಣೆ ಹಾಕೊಂಡು ಬಂದು ಅಂಗಡಿಮುಂದೆ ಬಂದು ನಿಂತುಕೊಂಡು ಸಿಗರೇಟ್ ಕೇಳಿದ್ದಾನೆ. ಅದಕ್ಕೆ ಹಣ ಕೊಡಿ ಎಂದು ಎಂದು ಕೇಳಿದ್ದಕ್ಕೆ ವ್ಯಾಪಾರಿಯ ಮೇಲೆ ಹಲ್ಲೆ ಮಾಡಿದ್ದಾನೆ.

ಕೂಡಲೇ ಎಚ್ಚೆತ್ತುಕೊಂಡ ಯುವಕ ಬೇಕರಿಯಲ್ಲಿ ತನ್ನ ಮೊಬೈಲ್‌ನಲ್ಲಿ ವಿಡಿಯೋ ಆನ್ ಮಾಡಿ ಇಟ್ಟಿದ್ದಾನೆ. ಅದರಲ್ಲಿ ವ್ಯಾಪಾರಿಯ ಮೇಲೆ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕುತ್ತಿರುವ ಆರೋಪಿ ಎಲ್ಲ ವಿಡಿಯೋ ಸೆರೆಯಾಗಿದೆ. ಈ ಘಟನೆ ಚಿಕ್ಕಬಿದರಕಲ್ಲು ಮುಖ್ಯರಸ್ತೆಯಲ್ಲಿ ರಾತ್ರಿ 9.30 ರ ಸುಮಾರಿಗೆ ನಡೆದಿದೆ. ಆನಂದ್ ಎಂಬ ಅಜಾನುಬಾಹು ಆರೋಪಿ, ಮದ್ಯದ ನಶೆಯಲ್ಲಿ ಬೇಕರಿ ಕಂ ಕಾಂಡಿಮೆಂಟ್ಸ್ ನಡೆಸುವ ವ್ಯಕ್ತಿ ಮಂಜಯ್ಯಶೆಟ್ಟಿ ಎನ್ನುವ ವ್ಯಾಪಾರಿ ಮೇಲೆ ಹಲ್ಲೆ ಮಾಡಿದ್ದಾನೆ. ಬಾಯಿಗೆ ಬಂದಂತೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸುವುದು ಹಾಗೂ ಪ್ರಾಣ ಬೆದರಿಕೆ ಹಾಕುವ ಎಲ್ಲ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ನಿಲ್ದಾಣದಲ್ಲಿ ಸೈಕಲ್‌ಗೆ ಉಚಿತ ಪಾರ್ಕಿಂಗ್ ಸೌಲಭ್ಯ?: ಹೊಸ ನಿಯಮದಲ್ಲೇನಿದೆ?

ಇನ್ನು ತನಗೆ ಫ್ರೀಯಾಗಿ ಸಿಗರೇಟ್ ಕೊಡದಿದ್ದಕ್ಕೆ ಮಂಜಯ್ಯನ ಅಂಗಡಿಗೆ ಬರುತ್ತಿದ್ದ ಗ್ರಾಹಕರನ್ನು ಅಡ್ಡಗಟ್ಟಿ ಈ ಅಂಗಡಿಗೆ ನವು ಬರಬೇಡಿ ಎಂದು ಧಮ್ಕಿ ಹಾಕಿದ್ದಾನೆ. ಇದನ್ನು ಪ್ರಶ್ನೆ ಮಾಡಿದಾಗ ಕಾಂಡಿಮೆಂಟ್ಸ್ ಬೇಕರಿಯಲ್ಲಿರುವ ವಸ್ತುಗಳನ್ನ ಚೆಲ್ಲಾಪಿಲ್ಲಿ ಮಾಡಿ ಧಾಂಧಲೆ ಮಾಡಿದ್ದಾನೆ. ನಿನ್ನ ಅಂಗಡಿಯನ್ನ ಮುಚ್ಚಿಸ್ತೀನಿ, ನೀನೇ ಇಲ್ಲದಂತೆ ಮಾಡ್ತೀನಿ ಎಂದು ಕುಡಿದ ನಶೆಯಲ್ಲಿ ಅವಾಜ್ ಹಾಕಿದ್ದಾನೆ. ಎಲ್ಲವನ್ನೂ ವಿಡಿಯೋ ಮಾಡಿಕೊಂಡ ವ್ಯಾಪಾರಿ ಮಂಜಯ್ಯಶೆಟ್ಟಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕಾರಿಗೆ ಅಡ್ಡ ಬಿದ್ದು ಹಣ ವಸೂಲಿ ಮಾಡುವ ಗ್ಯಾಂಗ್ ಸಕ್ರಿಯ!

PREV
Read more Articles on
click me!

Recommended Stories

ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌