ಶೀಘ್ರವೇ ನೇರವೇರಲಿದೆ ಬೃಹತ್ ಕಾಮಗಾರಿ : ಸಂಸದ ಪ್ರಜ್ವಲ್ ರೇವಣ್ಣ

By Kannadaprabha NewsFirst Published Feb 20, 2021, 1:50 PM IST
Highlights

ಹಾಸನ ಯುವ ಸಂಸದ ಪ್ರಜ್ವಲ್ ರೇವಣ್ಣ  ಅಭಿವೃದ್ಧಿ ಪರವಾದ ಯೋಜನೆಯ ಬಗ್ಗೆ ತಿಳಿಸಿದ್ದು ಶೀಘ್ರವೇ ಈ ಕೆಲಸಗಳಾಗಲಿದೆ ಎಂದು ಭರವಸೆ ನೀಡಿದ್ದಾರೆ. ಹಾಸನ ಜನತೆಗೆ ವಿವಿಧ ಯೋಜನೆಗಳ ಶೀಘ್ರ ಆರಂಭದ ಬಗ್ಗೆ ಮಾಹಿತಿ ನೀಡಿದ್ದಾರೆ. 

ಬೇಲೂರು (ಫೆ.20): ಎತ್ತಿನಹೊಳೆ ಯೋಜನೆಯಡಿ 20 ಕೋಟಿ ವೆಚ್ಚದಲ್ಲಿ 110 ಗ್ರಾಮಗಳಿಗೆ ಕಾಂಕ್ರಿಟ್‌ ರಸ್ತೆ ಮತ್ತು ಚರಂಡಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಸಂಸದ ಪ್ರಜ್ವಲ್‌ ರೇವಣ್ಣ ಹೇಳಿದರು.

ತಾಲೂಕಿನ ಹಗರೆ ಗ್ರಾಮದಲ್ಲಿ ಶುಕ್ರವಾರ 110 ಗ್ರಾಮಗಳಿಗೆ ಕಾಂಕ್ರಿಟ್‌ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ಹಳೆಬೀಡು ಜಾವಗಲ್‌ ಮತ್ತು ಮಾದೀಹಳ್ಳಿ ಹೋಬಳಿ ಭಾಗದ ರಸ್ತೆ ಚರಂಡಿ ಅಭಿವೃದ್ಧಿ ಪಡಿಸುವ ಭರವಸೆ ನೀಡಲಾಗಿತ್ತು. ಅದರಂತೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಗ್ರಾಮೀಣ ಅಭಿವೃದ್ಧಿಗೆ ಎತ್ತಿನಹೊಳೆ ಮತ್ತು ಯಗಚಿ ನೀರಾವರಿ ಸೇರಿ 65 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿತ್ತು. ಅದರೆ ಬಿಜೆಪಿ ಸರ್ಕಾರ ಬಂದಮೇಲೆ ಅನುದಾನ ಹಿಂದೆ ಪಡೆದಿತ್ತು ಎಂದರು.

ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರು, ಎಚ್‌.ಡಿ ರೇವಣ್ಣ ಹಾಗೂ ಜಿಲ್ಲೆಯ ಶಾಸಕರು ಮುಖ್ಯಮಂತ್ರಿ ಮನೆಮುಂದೆ ಧರಣಿ ಕೂರುವ ಬೆದರಿಕೆ ಹಾಕಿದ್ದರು. ನಮ್ಮ ಬೆದರಿಕೆಗೆ ಮಣಿದ ಮುಖ್ಯಮಂತ್ರಿ ಯಡಿಯೂರಪ್ಪನವರು ಹಂತಹಂತವಾಗಿ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಈಗ ಆರಂಭಿಕವಾಗಿ 20 ಕೋಟಿ ಬಿಡುಗಡೆ ಮಾಡಿದ್ದಾರೆ. ಇನ್ನು ಯಗಚಿಯಿಂದ 45 ಕೋಟಿ ಅನುದಾನ ಬಿಡುಗಡೆ ಆಗಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಕಾಮಗಾರಿಯ ಗುಣಮಟ್ಟದ ಬಗ್ಗೆ ಗಮನಹರಿಸಬೇಕು ಎಂದರು.

ಶಾಸಕ ಕೆ.ಎಸ್‌. ಲಿಂಗೇಶ್‌ ಮಾತನಾಡಿ, ಎತ್ತಿನಹೊಳೆ ಬಾ​ತಪ್ರದೇಶದಡಿ ಈ ಭಾಗಕ್ಕೆ 20 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರ ಜೊತೆಗೆ ರಣಘಟ್ಟಏತನೀರಾವರಿ ಯೋಜನೆಗೆ ಆರಂಭಿಕವಾಗಿ 134 ಕೋಟಿ ಹಣವನು ಬಜೆಟ್‌ ನಲ್ಲಿ ತೆಗೆದಿರಸಾಲಗಿದೆ. ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರು ರಣಘಟ್ಟಒಡ್ಡಿಗೆ ಭೇಟಿ ನೀಡಿ ಕಾಮಗಾರಿಗೆ ಒತ್ತಾಯ ಮಾಡಿದ್ದರು. ಈಗಾಗಲೇ ಮಣ್ಣು ಪರೀಕ್ಷೆ ಹಾಗೂ ಇತರೆ ತಾಂತ್ರಿಕ ಕೆಲಸಗಳು ಮುಗಿದಿದ್ದು ಮುಂದಿನ ತಿಂಗಳು ಶಂಕುಸ್ಥಾಪನೆ ನೆರವೇರಲಿದೆ ಎಂದರು.

ಮೊದಲ ಬಾರಿ ತಮ್ಮ ಮದುವೆ ಬಗ್ಗೆ ಮಾತಾಡಿದ್ರು ಪ್ರಜ್ವಲ್ ರೇವಣ್ಣ ...

ಜಿ.ಪಂ ಸದಸ್ಯೆ ಲತಾ ದಿಲೀಪ್‌ ಮಾತನಾಡಿ ಬರಗಾಲದ ಸಂದರ್ಭದಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ಅವರು ಹಳೇಬೀಡು ಮಾದಿಹಳ್ಳಿ ಹಗರೆ ಹೋಬಳಿಯ 68 ಗ್ರಾಮಗಳಿಗೆ 190 ಕೊಳವೆಬಾವಿ ಕೊರೆಸುವುದರ ಮೂಲಕ ಈ ಭಾಗದ ಜನರ ನೀರಿನ ಬವಣೆ ನೀಗಿಸಿದ್ದರು. ಮಾಜಿ ಪ್ರಧಾನಿ ದೇವೇಗೌಡರು, ಎಚ್‌.ಡಿ ರೇವಣ್ಣ , ಪ್ರಜ್ವಲ್‌ ಮತ್ತು ಶಾಸಕರ ಪರಿಶ್ರಮದಿಂದ ಈಭಾಗದಲ್ಲಿ ನೂರಾರು ಕೋಟಿ ಅಭಿವೃದ್ಧಿ ಕೆಲಸಗಳು ಆಗಿವೆ ಎಂದರು.

ಎಚ್‌.ಡಿ.ಸಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಎಂ.ಎ ನಾಗರಾಜ್‌, ಮಾಜಿ ತಾ.ಪಂ ಅಧ್ಯಕ್ಷ ಅಶ್ವಥ್‌, ತಾ.ಪಂ ಸದಸ್ಯೆ ಸಂಗೀತಾ, ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ದಿಲೀಪ್‌, ಹಿರಿಯ ಮುಖಂಡ ರಾಜಶೇಖರ್‌ ಯುವ ಜನತಾದಳ ಅಧ್ಯಕ್ಷ ಬಿ.ಡಿ ಉಮೇಶ್‌, ಈಶ್ವರಪ್ರಸಾದ್‌, ಕಾಂತರಾಜ್‌, ಚಂದ್ರೇಗೌಡ ಇತರರು ಇದ್ದರು.

click me!