ಬಾಬರ್‌ ಅನುಯಾಯಿಗಳಾದ PFI ಸಂಘಟನೆಯವರು ರಾಕ್ಷಸ ಕುಲದವರು: ಮುತಾಲಿಕ್‌

By Kannadaprabha News  |  First Published Feb 20, 2021, 1:23 PM IST

ಪಿಎ​ಫ್‌ಐ ವಿರುದ್ಧ ಮುತಾ​ಲಿಕ್‌ ಆಕ್ರೋ​ಶ| ಹಿಂದೂ ಸಮಾಜ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುತ್ತಿದೆ| ಆರ್‌ಎಸ್‌ಎಸ್‌ ಬಗ್ಗೆ ಮಾತನಾಡೋರು ನಾಲಾಯಕ್‌| 


ಧಾರವಾಡ(ಫೆ.20): ಅಯೋಧ್ಯೆಯಲ್ಲಿ ನಿರ್ಮಾಣ ಆಗುತ್ತಿರುವುದು ರಾಮಮಂದಿರವಲ್ಲ. ಅದು ಆರ್‌ಎ​ಸ್‌​ಎಸ್‌ ಮಂದಿರ. ಆದ್ದರಿಂದ ಈ ಮಂದಿರ ನಿರ್ಮಾಣಕ್ಕೆ ಮುಸ್ಲಿಂ ಬಂಧುಗಳು ದೇಣಿಗೆ ನೀಡಬೇಡಿ ಎಂದು ಪಿಎಫ್‌ಐ ಸಂಘಟನೆ ನೀಡಿದ ಹೇಳಿಕೆಯನ್ನು ಶ್ರೀರಾಮ ಸೇನೆ ಮುಖಂಡ ಪ್ರಮೋದ್‌ ಮುತಾಲಿಕ್‌ ಖಂಡಿಸಿದ್ದಾರೆ.

ನಗ​ರ​ದಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ರಾಮ ಮಂದಿರದ ಪರವಾಗಿ ಮಾತನಾಡಲು ಯಾವ ಅರ್ಹತೆ ಇಲ್ಲ. ಬಾಬರ್‌ ಅನುಯಾಯಿಗಳಾದ ನೀವು ರಾಕ್ಷಸ ಕುಲದವರು. ಅಶಾಂತಿಯನ್ನು ಆರ್‌ಎಸ್‌ಎಸ್‌ ಮಾಡುತ್ತಿದೆ ಎಂದು ಹೇಳಿದ್ದು ನೀವು ಕೊಲೆಗಡುಕರು, ನಾಲಾಯಕರು. ರಾಕ್ಷಸನ ಬಾಯಲ್ಲಿ ಭಗವದ್ಗೀತೆ ಬಂದಂಗಾಗಿದೆ ಎಂದು ಕಿಡಿ​ಕಾ​ರಿ​ದ್ದಾ​ರೆ.

Tap to resize

Latest Videos

'ರೈತರ ಸಾಲ ಮರುಪಾವತಿಗೆ ನೋಟಿಸ್‌ ನೀಡಿ​ದ್ರೆ ಬ್ಯಾಂಕ್‌ಗೆ ಬೀಗ'

ಸುಪ್ರೀಂಕೋರ್ಟ್‌ ಈ ಕುರಿತು ತೀರ್ಪು ನೀಡಿದ್ದು ಸರ್ಕಾರದ ವತಿಯಿಂದ ಟ್ರಸ್ಟ್‌ ರಚನೆ ಸಹ ಆಗಿದೆ. ಹಿಂದೂ ಸಮಾಜ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುತ್ತಿದೆ. ಹೀಗಿರುವಾಗ ಆರ್‌ಎಸ್‌ಎಸ್‌ ಬಗ್ಗೆ ಮಾತನಾಡೋರು ನಾಲಾಯಕ್‌ ಎಂದ ಪ್ರಮೋದ್‌ ಮುತಾಲಿಕ್‌ ಕಿಡಿ ಕಾಡಿದರು.
 

click me!