ವಿಶೇಷ ಮಕ್ಕಳಿಗೆ ನೆರವಾದ ಹರ್ಷಿಕಾ ಪೂಣಚ್ಚ-ಭುವನ್

By Suvarna News  |  First Published Jun 2, 2021, 9:31 AM IST
  •  ಜನರ ನೆರವಿಗೆ ನಿಂತು ಸಹಾಯ ಹಸ್ತ ಚಾಚುತ್ತಿರುವ ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ
  • ಗುಂಡ್ಲುಪೇಟೆ ವಿಶೇಷ ಮಕ್ಕಳಿಗೆ ನೆರವು
  • ಗುಂಡ್ಲುಪೇಟೆ ಯಲ್ಲಿರುವ ಪೃಥ್ವಿ ಬುದ್ದಿಮಾಂಧ್ಯ ಮಕ್ಕಳ ವಸತಿ ಶಾಲೆಗೆ ತೆರಳಿ ಸಹಾಯ 

ಚಾಮರಾಜನಗರ (ಜೂ.02):  ಕೋವಿಡ್ ಕಾಲದಲ್ಲಿ ಸದಾ ಜನರ ನೆರವಿಗೆ ನಿಂತು ಸಹಾಯ ಹಸ್ತ ಚಾಚುತ್ತಿರುವ ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ಇದೀಗ  ಗುಂಡ್ಲುಪೇಟೆ ವಿಶೇಷ ಮಕ್ಕಳಿಗೆ ನೆರವಾಗಿದ್ದಾರೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಯಲ್ಲಿರುವ ಪೃಥ್ವಿ ಬುದ್ದಿಮಾಂಧ್ಯ ಮಕ್ಕಳ ವಸತಿ ಶಾಲೆಗೆ ತೆರಳಿ ಸಹಾಯ ಮಾಡಿದ್ದಾರೆ. ಏಷಿಯಾನೆಟ್ ಸುವರ್ಣ ನ್ಯೂಸ್ ವರದಿಗೆ ಸ್ಪಂದಿಸಿದ ಇಬ್ಬರೂ ಕೊಡಗು ಜಿಲ್ಲೆಯಿಂದ 5 ಗಂಟೆ ಪಯಣಿಸಿ ಸಹಾಯ ಹಸ್ತ ಚಾಚಿದ್ದಾರೆ. 

Tap to resize

Latest Videos

undefined

ಸರ್ಕಾರಿ ಆಸ್ಪತ್ರೆಗಳ ಬಳಿ 'ಶ್ವಾಸ' ಸೇವೆ ಲಭ್ಯ; ನಟ ಭುವನ್, ನಟಿ ಹರ್ಷಿಕಾ ಸಮಾಜ ಸೇವೆ! ...

ವಸತಿ ಶಾಲೆಯಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ 30ಕ್ಕು ಹೆಚ್ಚು ಬುದ್ದಿಮಾಂಧ್ಯ ಮಕ್ಕಳಿಗೆ ಭುವನ್-ಹರ್ಷಿಕಾ ನೆರವಾಗಿದ್ದಾರೆ. 

ವಸತಿ ಶಾಲೆಯ ಕಟ್ಟಡವೂ ಶಿಥಿಲಾವಸ್ಥೆಯಲ್ಲಿದ್ದು ಮಳೆ ಬಂದರೆ ಸೋರುವ ಸ್ಥಿತಿಯಲ್ಲಿದ್ದು ಮಕ್ಕಳು ತೀವ್ರ ಸಂಕಷ್ಟ ಎದುರಿಸುತ್ತಿದ್ದರು. ಅಲ್ಲಿಗೆ ತೆರಳಿದ  ಭುವನಂ ಫೌಂಡೇಷನ್ ಸದಸ್ಯರು ಎರಡು ತಿಂಗಳಿಗೆ ಆಗುವಷ್ಟು ಆಹಾರಧಾನ್ಯ, ನಿತ್ಯೋಪಯೋಗಿ ವಸ್ತುಗಳ ವಿತರಣೆ ಮಾಡಿದ್ದಾರೆ. 

ಹುಟ್ಟೂರಿನ ಜನರ ಸಂಕಷ್ಟಕ್ಕೆ ಸ್ಪಂದಿಸಿದ ಭುವನ್‌-ಹರ್ಷಿಕಾ ...

ಬುದ್ದಿಮಾಂಧ್ಯ ಮಕ್ಕಳೊಡನೆ ಕೆಲಕಾಲ ಕಳೆದ  ನಟಿ ಹರ್ಷಿಕಾ, ಭುವನ್  ನೃತ್ಯ ಮಾಡಿ ಮಕ್ಕಳಿಂದಲೂ ನೃತ್ಯ ಮಾಡಿಸಿ ರಂಜಿಸಿದ್ದಾರೆ. 

ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿದ ನಟ ಭುವನ್ ಇಲ್ಲಿನ ಬುದ್ದಿಮಾಂಧ್ಯಮಕ್ಕಳ ಪರಿಸ್ಥಿತಿ ಶೋಚನೀಯವಾಗಿದೆ. ಸದ್ಯಕ್ಕೆ ತಾತ್ಕಾಲಿಕ ನೆರವು ನೀಡಿದ್ದೇವೆ.  ನಮ್ಮ ಸೇವೆ ಗೆ ಉತ್ತಮ ಅವಕಾಶ ಸಿಕ್ಕಿದೆ.  ಮುಂದಿನ ದಿನಗಳಲ್ಲಿ ಶಾಲೆಗೆ ಇನ್ನೂ ಹೆಚ್ಚಿನ ನೆರವು  ನೀಡುವ ಭರವಸೆ ನೀಡಿದರು. 

ರಾಜ್ಯ ದಲ್ಲಿ ಎಲ್ಲೆ ಇಂತಹ ಪರಿಸ್ಥಿತಿ ಇದ್ದರೆ ಕರೆ ಮಾಡಿ 24 ಗಂಟೆಯೊಳಗೆ ಅವರಿಗೆ ಸಹಾಯ ಮಾಡುತ್ತೇವೆ ಎಂದು ನಟ ಭುವನ್ ಹೇಳಿದರು. 

  ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿ ಸಹ ಇಲ್ಲಿನ ಮಕ್ಕಳಿಗೆ ನೆರವು ನೀಡಿದ್ದು, ಬುದ್ದಿಮಾಂಧ್ಯ ಮಕ್ಕಳ ಶಾಲೆಗೆ ಶಾಶ್ವತ ಪರಿಹಾರ ಒದಗಿಸುವ ಭರವಸೆಯನ್ನು ನೀಡಿದ್ದಾರೆ.

click me!