ಕೋವಿಡ್‌ ವೈಫಲ್ಯ: ಸರ್ಕಾರಗಳ ವಿರುದ್ಧ ಆನ್‌ಲೈನ್‌ ಪ್ರತಿಭಟನೆ

By Kannadaprabha NewsFirst Published Jun 2, 2021, 8:12 AM IST
Highlights

* ಏಳು ಎಡ ಪ್ರಜಾಸತ್ತಾತ್ಮಕ ಪಕ್ಷಗಳಿಂದ ಪ್ರತಭಟನೆ
* ಮನೆ ಮನೆಗಳಿಂದಲೇ ಆನ್‌ಲೈನ್‌ ಪ್ರತಿಭಟನೆ 
* ‘ಜೀವ ಉಳಿಸಿ-ಜೀವನ ರಕ್ಷಿಸಿ, ಮೂರನೇ ಅಲೆಗೆ ಸನ್ನದ್ಧರಾಗಿ’ ಎಂಬ ಘೋಷಣೆ

ವಿಜಯಪುರ(ಜೂ.02): ಕೋವಿಡ್‌ ನಿಯಂತ್ರಿಸುವಲ್ಲಿ ವಿಫಲವಾದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಏಳು ಎಡ ಪ್ರಜಾಸತ್ತಾತ್ಮಕ ಪಕ್ಷಗಳಿಂದ ಮನೆ ಮನೆಗಳಿಂದಲೇ ಮಂಗಳವಾರ ಆನ್‌ಲೈನ್‌ ಪ್ರತಿಭಟನೆ ನಡೆಸಲಾಯಿತು.

ರಾಜ್ಯದಲ್ಲಿ ಕೋವಿಡ್‌ ನಿರ್ವಹಣೆಯ ಅವ್ಯವಸ್ಥೆಯಿಂದ ಉಂಟಾಗಿರುವ ಸಮಸ್ಯೆಗಳ ಗಂಭೀರತೆ ಹಿನ್ನೆಲೆಯಲ್ಲಿ ಏಳು ಎಡ ಪ್ರಜಾಸತ್ತಾತ್ಮಕ ಪಕ್ಷಗಳಾದ ಸಿಪಿಐ, ಸಿಪಿಎಂ, ಎಸ್‌ಯುಸಿಐ ಸೇರಿದಂತೆ ಮುಂತಾದವುಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಮೊದಲನೇ ಡೋಸ್ ಲಸಿಕೆ ಮಹತ್ವ ತೆರೆದಿಟ್ಟ ಹಿರಿಯ ಅಧಿಕಾರಿ, ಹೊಸ ಗುರಿ

ಮೇ 28ರಂದು ಆನ್‌ಲೈನ್‌ ಸಭೆಯನ್ನೂ ಹಮ್ಮಿಕೊಂಡು ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಆಗ್ರಹಿಸಲಾಗಿತ್ತು. ಇದರ ಮುಂದುವರಿಕೆಯಾಗಿ ಜೂ.1ರಂದು ರಾಜ್ಯಾದ್ಯಂತ ‘ಜೀವ ಉಳಿಸಿ-ಜೀವನ ರಕ್ಷಿಸಿ, ಮೂರನೇ ಅಲೆಗೆ ಸನ್ನದ್ಧರಾಗಿ’ ಎಂಬ ಘೋಷಣೆಯೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್‌ ಪರಿಸ್ಥಿತಿಯನ್ನು ನಿರ್ವಹಿಸಿದ ಅವೈಜ್ಞಾನಿಕ ವಿಧಾನ ಮತ್ತು ನಿರ್ಲಕ್ಷ್ಯವನ್ನು ಖಂಡಿಸಲಾಯಿತು.

ಆನ್‌ಲೈನ್‌ ಪ್ರತಿಭಟನೆಯಲ್ಲಿ ಸಿಪಿಐ(ಎಂ), ಸಿಪಿಐ, ಕರ್ನಾಟಕ ಪ್ರಾಂತ ರೈತ ಸಂಘ, ಎಸ್‌ಯುಸಿಐ(ಸಿ), ಜನವಾದಿ ಮಹಿಳಾ ಸಂಘಟನೆ, ಎಸ್‌ಯುಸಿಐ(ಸಿ), ಡಿವೈಎಫ್‌ಐ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!