ನಂಜನಗೂಡು ಕ್ಷೇತ್ರವನ್ನು ಮಾದರಿ ಮಾಡುವೆ : ಹರ್ಷವರ್ಧನ್

By Kannadaprabha News  |  First Published Apr 24, 2023, 5:29 AM IST

ರಾಜ್ಯದಲ್ಲಿ ಕೊಟ್ಟಮಾತಿನಂತೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿ ರಾಜ್ಯದ ಅಭಿವೃದ್ಧಿಗೆ ಒತ್ತು ನೀಡಿದೆ ಎಂದು ಶಾಸಕ ಬಿ. ಹರ್ಷವರ್ಧನ್‌ ಹೇಳಿದರು.


 ಮಲ್ಗುಂಡಿ : ರಾಜ್ಯದಲ್ಲಿ ಕೊಟ್ಟಮಾತಿನಂತೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿ ರಾಜ್ಯದ ಅಭಿವೃದ್ಧಿಗೆ ಒತ್ತು ನೀಡಿದೆ ಎಂದು ಶಾಸಕ ಬಿ. ಹರ್ಷವರ್ಧನ್‌ ಹೇಳಿದರು.

ನಂಜನಗೂಡು ವಿಧಾನಸಭಾ ಕ್ಷೇತ್ರದ ಕಸುವಿನಹಳ್ಳಿ ಕೂಗಲೂರು ಗ್ರಾಮದಲ್ಲಿ ಬಿರುಸಿನ ಪ್ರಚಾರ ನಡೆಸಿ ಮಾತನಾಡಿದ ಅವರು, ನಾನು ಶಾಸಕನಾಗಿ ಆಯ್ಕೆಯಾದ ಬಳಿಕ ನನ್ನ 5 ವರ್ಷದ ಅವಧಿಯಲ್ಲಿ ಕ್ಷೇತ್ರಕ್ಕೆ ವಿಶೇಷ ಅನುದಾನ ತಂದು ಕ್ಷೇತ್ರದ ಎಲ್ಲಾ ಜನಾಂಗದ ಬೀದಿಗಳಿಗೆ ಕಾಂಕ್ರಿಟ್‌ ರಸ್ತೆ, ಚರಂಡಿ, ಸಮುದಾಯ ಭವನಗಳನ್ನು ನಿರ್ಮಿಸಿಕೊಟ್ಟಿದ್ದೆನೆ. ಮತದಾರರಿಗೆ ನೀಡಿದ ಮಾತಿನಂತೆ ಕೆಲಸ ಮಾಡಿದ್ದೇನೆ. ಕ್ಷೇತ್ರದಲ್ಲಿ ನಾನು ಮಾಡಿರುವ ಅಭಿವೃದ್ಧಿಗೆ ಕೂಲಿ ನೀಡಿ ಮತ್ತೊಮ್ಮೆ ನಿಮ್ಮಗಳ ಸೇವೆ ಮಾಡಲು ಅವಕಾಶ ಕಲ್ಪಿಸಿ ಕೊಡಿ ಎಂದು ಮನವಿ ಮಾಡಿದರು.

Latest Videos

undefined

ಬಿಜೆಪಿ ತಾಲೂಕು ಅಧ್ಯಕ್ಷ ಪಿ. ಮಹೇಶ…, ಜಿಪಂ ಮಾಜಿ ಸದಸ್ಯ ಎಸ್‌.ಎಂ. ಕೆಂಪಣ್ಣ, ಮುಖಂಡ ಕುಂಬ್ರಳ್ಳಿ ಸುಬ್ಬಣ್ಣ ಇದ್ದರು.

ಈ ಚುನಾವಣೆನನ್ನ ಪ್ರತಿಷ್ಠೆಯಲ್ಲ

ನಂಜನಗೂಡು :  ಈ ಚುನಾವಣೆ ನನಗೆ ಪ್ರತಿಷ್ಠೆಯಲ್ಲ, ನಂಜನಗೂಡಿನ ಸಮಗ್ರ ಅಭಿವೃದ್ದಿಯೇ ನನ್ನ ಮೊದಲ ಆದ್ಯತೆ. ಕ್ಷೇತ್ರದ ಮತದಾರರು ಭಾವನೆಗಳಿಗೆ ಬಲಿಯಾಗದೆ ಕಳೆದ 5 ವರ್ಷಗಳಲ್ಲಿ ನಾನು ಮಾಡಿರುವ ಅಭಿವೃದ್ದಿ ಕೆಲಸವನ್ನು ನೋಡಿ ಯೋಚಿಸಿ ಮತ ನೀಡಿ, ನನ್ನನ್ನು ಮರು ಆಯ್ಕೆಗೊಳಿಸಿ ಎಂದು ಶಾಸಕ ಬಿ. ಹರ್ಷವರ್ಧನ್‌ ಹೇಳಿದರು.

ತಾಲೂಕಿನ ಹೊರಳವಾಡಿ ಗ್ರಾಮದಲ್ಲಿ ಸೋಮವಾರ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು.

ನಾನು ಶಾಸಕನಾಗಿ ಆಯ್ಕೆಯಾದ ನಂತರ ಕ್ಷೇತ್ರದಲ್ಲಿರುವುದಿಲ್ಲ, ಬೆಂಗಳೂರಿನಲ್ಲಿ ಕಾಲ ಕಳೆಯುತ್ತಾರೆಂದು ಪ್ರತಿಪಕ್ಷದವರು ಭಾವಿಸಿದ್ದರು. ಆದರೆ ವಾರದ 4 ದಿನಗಳೂ ಸಹ ಕ್ಷೇತ್ರದ ಜನರ ಸಂಪರ್ಕವಿಟ್ಟುಕೊಂಡು ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಕೊರೋನಾ, ಪ್ರವಾಹದ ನಡುವೆಯೂ ಸಹ ಕ್ಷೇತ್ರಕ್ಕೆ 823 ಕೋಟಿಯಷ್ಟುಅನುದಾನ ತಂದಿದ್ದೇನೆ. ಕಳೆದ 5 ವರ್ಷದಲ್ಲಿ ವಾರದ 4 ದಿನಗಳು ಹೆಚ್ಚಿನ ಕೆಲಸ ಕಲಿತಿದ್ದೇನೆ, ಅನುಭವ ಹೆಚ್ಚಾಗಿದೆ ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ಪಿ.ಮಹೇಶ್‌, ತಾಪಂ ಮಾಜಿ ಸದಸ್ಯರಾದ ಬಿ.ಎಸ್‌.ರಾಮು, ಹೆಮ್ಮರಗಾಲಶಿವಣ್ಣ, ಮುಖಂಡರಾದ ಹೊರಳವಾಡಿ ಸುರೇಶ್‌, ಹೆಮ್ಮರಗಾಲಸೋಮಣ್ಣ, ಗೋವರ್ಧನ್‌, ಜಿ.ಬಸವರಾಜು, ಸೌಭಾಗ್ಯರಾಮಚಂದ್ರು, ಗ್ರಾಪಂ ಸದಸ್ಯರಾದ ಮಹೇಶ್‌, ಹೊರಳವಾಡಿ ಗ್ರಾಪಂ ಅಧ್ಯಕ್ಷ ರಮೇಶ್‌, ಮಂಡ್ಯಮಹದೇವು, ನವೀನ್‌ರಾಜ್‌, ನಾಗಣ್ಣ, ಗಂಗಾಧರ್‌, ಕಾರ್ಯಕರ್ತರು ಇದ್ದರು.

ಕಾಂಗ್ರೆಸ್‌ನಿಂದ ಅಸಮಾಧಾನ ಸ್ಫೋಟ

ಬಾದಾಮಿ(ಏ.07):  ಎಐಸಿಸಿ ವತಿಯಿಂದ ಗುರುವಾರ 42 ಅಭ್ಯರ್ಥಿಗಳ ಪಟ್ಟಿಪ್ರಕಟಿಸಿದ್ದು, ಬಾದಾಮಿ ಮತಕ್ಷೇತ್ರದಿಂದ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಅವರ ಪುತ್ರ ಭೀಮಸೇನ ಚಿಮ್ಮನಕಟ್ಟಿ ಅವರಿಗೆ ಟಿಕೆಟ್‌ ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್‌ನ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಹೇಶ ಹೊಸಗೌಡ್ರ ಅಸಮಾಧಾನಗೊಂಡಿದ್ದಾರೆ. ಇತ್ತ ಟಿಕೆಟ್‌ ಘೋಷಣೆಯಾದರೂ ಸಿದ್ದರಾಮಯ್ಯ ಸ್ಫರ್ಧೆ ಮಾಡಬೇಕು ಎಂದು ಅವರ ಅಭಿಮಾನಿಗಳು ಏ.7ರಂದು ಸಭೆ ಕರೆದಿದ್ದಾರೆ. ಇದು ತೀವ್ರ ಕುತೂಹಲ ಕೆರಳಿಸುವಂತೆ ಮಾಡಿದೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧೆ ಮಾಡಿದ್ದರು. ಆಗ ಶಾಸಕರಾಗಿದ್ದ ಬಿ.ಬಿ.ಚಿಮ್ಮನಕಟ್ಟಿ ಅವರು ತಮ್ಮ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. ಈಗ ಬಿ.ಬಿ.ಚಿಮ್ಮನಕಟ್ಟಿ ಅವರು ತಮ್ಮ ಪುತ್ರನಿಗೆ ಟಿಕೆಟ್‌ ನೀಡಲು ಮನವಿ ಮಾಡಿದ್ದರು. ಆದಕಾರಣ ಪುತ್ರ ಭೀಮಸೇನ ಚಿಮ್ಮನಕಟ್ಟಿ ಅವರಿಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ. ಈಗಾಗಲೇ ಆಪ್ತ ಸಮಾಲೋಚನೆ ಮೂಲಕ ಮತಕ್ಷೇತ್ರದ ಎಲ್ಲ ಗ್ರಾಮಗಳಿಗೆ ತೆರಳಿ, ಜನರ ಸಂಪರ್ಕ ಮಾಡಿದ್ದಾರೆ. 40 ವರ್ಷದ ಭೀಮಸೇನ ಚಿಮ್ಮನಕಟ್ಟಿಯುವ ಮುಖಂಡರಾಗಿದ್ದು, ಪಕ್ಷದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಬೇಕಾಗಿದೆ. ಈಗಾಗಲೇ ಜೆಡಿಎಸ್‌ ಪಕ್ಷದಿಂದ ಹಣಮಂತ ಮಾವಿನಮರದ ಹೆಸರು ಘೋಷಣೆಯಾಗಿದ್ದು, ಬಿಡುವಿಲ್ಲದೇ ಕ್ಷೇತ್ರದಾದ್ಯಂತ ಪ್ರಚಾರದಲ್ಲಿ ತೊಡಗಿದ್ದಾರೆ. ಬಿಜೆಪಿಯಿಂದ ಇನ್ನೂ ಟಿಕೆಟ್‌ ಅಂತಿಮವಾಗಿಲ್ಲ. ಬಿಜೆಪಿಯಲ್ಲಿಲ್ಲಿ ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿಮತ್ತು ಮಹಾಂತೇಶ ಮಮದಾಪೂರ, ಶಾಂತಗೌಡ ಪಾಟೀಲ ಪ್ರಬಲ ಆಕಾಂಕ್ಷಿಗಳಾಗಿದ್ದು, ಯಾರಿಗೆ ಟಿಕೇಟ್‌ ಸಿಗುತ್ತದೆ ಎಂಬುದನ್ನು ಕಾಯ್ದು ನೋಡಬೇಕಿದೆ.

click me!