ವರುಣದಲ್ಲಿ ಯಾವುದೇ ಒಳ ಒಪ್ಪಂದ ಇಲ್ಲ. ಸೋಲು ಗೆಲುವನ್ನು ಮತದಾರರು ನಿರ್ಧಾರ ಮಾಡುತ್ತಾರೆ ಎಂದು ಸಂಸದ ವಿ. ಶ್ರೀನಿವಾಸಪ್ರಸಾದ್ ಹೇಳಿದರು.
ಮೈಸೂರು : ವರುಣದಲ್ಲಿ ಯಾವುದೇ ಒಳ ಒಪ್ಪಂದ ಇಲ್ಲ. ಸೋಲು ಗೆಲುವನ್ನು ಮತದಾರರು ನಿರ್ಧಾರ ಮಾಡುತ್ತಾರೆ ಎಂದು ಸಂಸದ ವಿ. ಶ್ರೀನಿವಾಸಪ್ರಸಾದ್ ಹೇಳಿದರು.
ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ವೇಳೆ ಮತದಾರರು ಅಭ್ಯರ್ಥಿಗಳನ್ನು ಪ್ರಶ್ನಿಸುವುದು ಸಹಜ. ವಿ.ಸೋಮಣ್ಣ ಅವರ ಹಿಂದೆ ಕಾರ್ಯಕರ್ತರಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ವರುಣ ಕ್ಷೆತ್ರದಿಂದ ನನಗೆ 80 ಸಾವಿರ ಮತಗಳು ಬಂದಿವೆ ಎಂದರು.
ಪ್ರಶ್ನಿಸುವುದು ಸಹಜ: ಕುಪ್ಯ ಗ್ರಾಮದಲ್ಲಿ ವಿ. ಸೋಮಣ್ಣ ಅವರಿಗೆ ಪ್ರಶ್ನೆ ಕೇಳಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ವಿ. ಸೋಮಣ್ಣಗೆ ಮುತ್ತಿಗೆ ಮಾಧ್ಯಮಗಳ ಸೃಷ್ಟಿ. ಸೋಮಣ್ಣ ಮೊದಲ ಬಾರಿ ಸ್ಪರ್ಧೆ ಮಾಡುತ್ತಿರುವುದರಿಂದ ಪ್ರಶ್ನೆ ಕೇಳಿದ್ದಾರೆ ಎಂದರು.
ಕುಪ್ಯ ಗ್ರಾಮಕ್ಕೆ ನಾನು ಭೇಟಿ ನೀಡಿಲ್ಲ ಎಂದು ಜನರು ಹೇಳಿದ್ದಾರೆ. ನನ್ನನ್ನು ಕೆಲವು ಕಡೆ ಪ್ರಶ್ನೆ ಮಾಡಿದ್ದಾರೆ. ಜನರು ನರೇಂದ್ರ ಮೋದಿ ಅವರನ್ನೂ ಪ್ರಶ್ನೆ ಮಾಡುತ್ತಾರೆ ಎಂದು ಅವರು ಹೇಳಿದರು.
ಮೈಸೂರು ಭಾಗದ 8 ಕ್ಷೇತ್ರಗಳಲ್ಲಿ ಪ್ರಚಾರ ಮಾಡುವುದಾಗಿ ಹೇಳಿದ್ದೇನೆ. ಆರೋಗ್ಯದ ದೃಷ್ಟಿಯಿಂದ ವರುಣದಲ್ಲಿ ಹೋಗಲಾಗುತ್ತಿಲ್ಲ. ನಾಮಪತ್ರ ಸಲ್ಲಿಕೆ ವೇಳೆಯೇ ಸೋಮಣ್ಣ ಪರವಾಗಿ ಭಾಷಣ ಮಾಡಿದ್ದೇನೆ. ಮುಂದಿನ ಬಾರಿಯೂ ಲಿಂಗಾಯತ ಸಿಎಂ ಸಂಬಂಧಿದಂತೆ ಅಮಿತ್ ಶಾ ಸ್ಪಷ್ಟನೆ ನೀಡಿದ್ದಾರೆ. ಇಂಥ ಜಾತಿ, ಜನಾಂಗದವರಿಗೆ ಸಿಎಂ ಮಾಡುತ್ತೆವೆ ಎಂದು ಹೇಳಬೇಡಿ ಎಂದು ತಾಕೀತು ಮಾಡಿದ್ದಾರೆ. ಜೆ.ಪಿ. ನಡ್ಡಾ ಅವರ ಹೇಳಿಕೆಗೆ ಅಮಿತ್ ಶಾ ಸ್ಪಷ್ಟಿಕರಣ ಕೊಟ್ಟಿದ್ದಾರೆ. ಫಲಿತಾಂಶದ ಬಳಿಕ ಸಿಎಂ ಅಭ್ಯರ್ಥಿಯನ್ನು ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು.
ನಂಜನಗೂಡಿನಲ್ಲಿ ಗೆಲ್ಲುವು, ಸೋಲು ಕುರಿತು ಕೇಳಿದ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಅವರು, ಜನಪ್ರಿಯತೆ ಇದೆ. ಗೆದ್ದು ಬಂದಿದ್ದೇವೆ. ಹರ್ಷವರ್ಧನ್ . 500 ಕೋಟಿ ಅನುದಾನ ತಂದು ಕೆಲಸ ಮಾಡಿದ್ದಾರೆ. ಅಭಿವೃದ್ದಿ ಕೆಲಸಗಳೊಂದಿಗೆ ಅನುಕಂಪ ತಳುಕು ಹಾಕಬೇಡಿ ಎಂದರು.
ಸಿ. ಬಸವೇಗೌಡ ಅವರು ಕಾಂಗ್ರೆಸ್ ಸೇರ್ಪಡೆ ವೈಯಕ್ತಿಕ ನಿರ್ಧಾರ. ಬಿಜೆಪಿ ಬಗ್ಗೆ ಅಸಮಾಧಾನ ಇತ್ತು. ಲೋಕಸಭಾ ಚುನಾವಣೆಯಲ್ಲಿ ಬಹಳ ಕೆಲಸ ಮಾಡಿದ್ದರು. ಸಿದ್ದರಾಮಯ್ಯ ಅವರೊಂದಿಗೆ ಹಳೇ ಬಾಂಧವ್ಯ ಇತ್ತು. 2-3 ಗಂಟೆ ಚರ್ಚೆ ಮಾಡಿ ತೀರ್ಮಾನ ಮಾಡಿದ್ದಾರೆ. ವೈಯಕ್ತಿಕ ತೀರ್ಮಾನಗಳಿಗೆ ಪ್ರತಿಕ್ರಿಯೆ ಕೊಡಬೇಕೆ? ಎಂದರು.
ಬಿಜೆಪಿ ಮುಖಂಡ ಜಯಪ್ರಕಾಶ್ ಅವರಿಗೆ ಮುಂದಿನ ದಿನಗಳಲ್ಲಿ ಅವಕಾಶ ಕಲ್ಪಿಸುವಂತೆ ವರಿಷ್ಠರೊಂದಿಗೆ ಮಾತಾಡುವುದಾಗಿ ವಿ. ಶ್ರೀವಾಸಪ್ರಸಾದ್ ಭರವಸೆ ನೀಡಿದರು.
ಸಿದ್ದರಾಮಯ್ಯ ವಿರುದ್ಧ ಕಿಡಿ
ಚಾಮರಾಜನಗರ(ಏ.22): ವರುಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಅವನ್ಯಾರು, ಇವನ್ಯಾರು ಅನ್ನೋ ಡೈಲಾಗ್ ಕಡಿಮೆ ಮಾಡಿದರೆ ಒಳ್ಳೇದು. ನಾನು ಅವರನ್ನು ಮುತ್ಸದ್ದಿ ನಾಯಕ ಎಂದು ಭಾವಿಸಿದ್ದಾಗಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಕಿಡಿಕಾರಿದ್ದಾರೆ.
ಶುಕ್ರವಾರ ಸುದ್ದಿಗಾರರ ಜತೆಗೆ ಮಾತನಾಡಿ, ಸಿದ್ದರಾಮಯ್ಯ ಅವರೀಗ ವಿರೋಧ ಪಕ್ಷದ ನಾಯಕರೂ ಅಲ್ಲ, ನಾನು ಮಂತ್ರೀನೂ ಅಲ್ಲ. ನಾನು ಅಭ್ಯರ್ಥಿ, ಅವರೂ ಅಭ್ಯರ್ಥಿ. ನಾನು ಅವರನ್ನು ಮುತ್ಸದ್ದಿ ನಾಯಕ ಎಂದು ಭಾವಿಸಿದ್ದೆ. ಅವನ್ಯಾರು, ಇವನ್ಯಾರು ಅನ್ನೋ ಡೈಲಾಗ್ ಕಡಿಮೆ ಮಾಡಿದ್ರೆ ಒಳ್ಳೇದು. ರಾಜಕೀಯದಲ್ಲಿ ತಾಳ್ಮೆ ಮುಖ್ಯ ಎಂದು ಹೇಳಿದರು.
ರಾಜಕೀಯ ಅಖಾಡಕ್ಕೆ ಸಿದ್ದು ಕುಟುಂಬದ 3ನೇ ತಲೆಮಾರು ಎಂಟ್ರಿ..!
ನಾನು ಕಾಂಗ್ರೆಸ್‌ನಲ್ಲಿದ್ದಾಗ ಇವರಿಗೋಸ್ಕರ ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಬರಿ ಮೈಯಲ್ಲಿ ದೇವಾಲಪುರದಿಂದ ಮೈಸೂರಿಗೆ ಹೋಗಿದ್ದೇನೆ. ನನ್ನ ಕಾರಿನ ಗ್ಲಾಸ್ ಒಡೆದಿದ್ದರು, ಪ್ಯಾಂಟ್ ಹರಿದು ಹಾಕಿದ್ದರು. ಆವತ್ತು ನನ್ನ ಸಮಾಜ ಎದುರು ಹಾಕಿಕೊಂಡು ಅವರಿಗೋಸ್ಕರ ಕೆಲ್ಸ ಮಾಡಿದ್ದೆ. ಇದೆಲ್ಲಾ ಸಿದ್ದರಾಮಯ್ಯ ಸಾಹೇಬರ ತಲೇಲಿ ಇಲ್ಲ. ನಾನು ಸಾಹೇಬ್ರೆ ಅಂತೀನಿ ಅವರು ಏಕ ವಚನದಲ್ಲಿ ಮಾತನಾಡ್ತಾರೆ. ಇದೇ ನನಗೂ ಅವರಿಗು ಇರೋ ವ್ಯತ್ಯಾಸ ಎಂದು ತಿರುಗೇಟು ನೀಡಿದರು.
ಸಿಎಂ ಆಗಲು ಏನ್ ಮಾಡ್ಬೇಕು:
ನಗರದ ಅಂಬೇಡ್ಕರ್ ಕ್ರೀಡಾಂಗಣಕ್ಕೆ ಶುಕ್ರವಾರ ಬೆಳ್ಳಂ ಬೆಳಗ್ಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ಈ ವೇಳೆ ‘ಸಿಎಂ ಆಗೋಕೆ ಏನ್ ಮಾಡ್ಬೇಕು ಅಂತಾ ಸೋಮಣ್ಣ’ ಅವರನ್ನು ಬಾಲಕನೊಬ್ಬ ಪ್ರಶ್ನಿಸಿದ. ‘ನೀನು ಏನು ಮಾಡ್ಬೇಡ ಹೋಗಪ್ಪಾ ತಂದೆ, ಚೆನ್ನಾಗಿ ಓದು. ಸಿಎಂ, ಗಿಎಂ ಎಲ್ಲಾ ಲೆಕ್ಕ ಇಲ್ಲ. ನೀನೆ ದೊಡ್ಡ ಸಿಎಂ. ಚೆನ್ನಾಗಿ ಓದು, ಸ್ಪೋಟ್ಸ್‌ರ್ ಆಕ್ಟಿವಿಟಿಯಲ್ಲಿರು ಬಾಕಿದೆಲ್ಲಾ ಬಿಟ್ಬಿಡು. ನಿನ್ನ ಹಣೆಯಲ್ಲಿದ್ರೆ ಬರ್ತೀಯಾ ಹೋಗು’ ಎಂದು ಹೇಳಿದರು.