'ಕೊಪ್ಪಳ, ಬಾದಾಮಿಗೆ ಸಿದ್ದರಾಮಯ್ಯ ಹೊರಗಿನವರಲ್ಲವೇ'

By Kannadaprabha News  |  First Published Apr 24, 2023, 5:23 AM IST

ವರುಣ ಕ್ಷೇತ್ರಕ್ಕೆ ನಾನು ಹೊರಗಿನವನು ಎನ್ನುವ ಸಿದ್ದರಾಮಯ್ಯ ಅವರೆ ತಾವು ಕೊಪ್ಪಳ ಮತ್ತು ಬಾದಾಮಿ ಕ್ಷೇತ್ರಕ್ಕೆ ಹೊರಗಿನವರಾಗಿರಲಿಲ್ಲವೇ ಎಂದು ವಸತಿ ಸಚಿವ ಹಾಗೂ ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಪ್ರಶ್ನಿಸಿದರು.


  ಮೈಸೂರು : ವರುಣ ಕ್ಷೇತ್ರಕ್ಕೆ ನಾನು ಹೊರಗಿನವನು ಎನ್ನುವ ಸಿದ್ದರಾಮಯ್ಯ ಅವರೆ ತಾವು ಕೊಪ್ಪಳ ಮತ್ತು ಬಾದಾಮಿ ಕ್ಷೇತ್ರಕ್ಕೆ ಹೊರಗಿನವರಾಗಿರಲಿಲ್ಲವೇ ಎಂದು ವಸತಿ ಸಚಿವ ಹಾಗೂ ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಪ್ರಶ್ನಿಸಿದರು.

ನಾನು ಹತ್ತಾರು ಚುನಾವಣೆ ಮಾಡಿದ್ದೇನೆ. ಜನರ ಭಾವನೆ ಮತ್ತು ಉತ್ಸಾಹವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತೀರ್ಮಾನಿಸಿದ್ದೇನೆ. ಬಿಜೆಪಿಗೆ ಈ ಬಾರಿ ಜನರು ಆಶೀರ್ವಾದ ಮಾಡುವ ನಂಬಿಕೆ ಇದೆ. ಸಿದ್ದರಾಮಯ್ಯ ವಾಸ್ತಾಂಶ ಮಾತನಾಡಿದರೆ ಒಳ್ಳೆಯದು. ವರುಣ ಕ್ಷೇತ್ರದಲ್ಲಿ ನನಗೆ 100 ಪಟ್ಟು ಗೆಲ್ಲುವ ವಿಶ್ವಾಸ ಇದೆ. ಜನರ ಪ್ರೀತಿ, ವಿಶ್ವಾಸ, ಮಮಕಾರ ನಮ್ಮ ಮೇಲಿದೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದ ಹಾಗೂ ಮಹದೇಶ್ವರರ ಸಂದೇಶ ಇದೆ ಎಂದರು.

Latest Videos

undefined

ಜನ ಈ ಬಾರಿ ಬಿಜೆಪಿಗೆ ಆಶೀರ್ವಾದ ಮಾಡುವ ನಂಬಿಕೆ ಹೆಚ್ಚಾಗಿದೆ. ಯಾರು ಹೊರಗಿನವರು ಒಳಗಿನವರು ಅನ್ನೊದಕ್ಕಿಂತ ಹೆಚ್ಚಾಗಿ ನಮ್ಮ ಕಾಲದಲ್ಲಿ ಏನು ಅವರ ಕಾಲದಲ್ಲಿ ಏನು ಮಾಡಿದ್ದಾರೆ ಎಂಬುದು ಮುಖ್ಯ ಎಂದು ಅವರು ತಿಳಿಸಿದರು.

ಲಿಂಗಾಯತ ಮುಖ್ಯಮಂತ್ರಿ ವಿಚಾರ ಕುರಿತು ನಾನು ಚರ್ಚಿಸುವುದಿಲ್ಲ. ನಮ್ಮ ವರಿಷ್ಠರು ಅದರ ಬಗ್ಗೆ ಮಾತನಾಡುತ್ತಾರೆ. ಒಂದು ಧರ್ಮವನ್ನು ಮತ್ತೊಂದು ಧರ್ಮಕ್ಕೆ ಹೋಲಿಕೆ ಮಾಡುವುದು ನಮ್ಮ ಕರ್ತವ್ಯ ಅಲ್ಲ. ರಾಜಕಾರಣಿಗಳು ನಮ್ಮ ಇತಿಮಿತಿಯಲ್ಲಿ ಮಾತನಾಡಬೇಕು. ದೇಶಕ್ಕೆ ಗೊತ್ತಿದೆ ನಿಜಲಿಂಗಪ್ಪನವರು, ವೀರೇಂದ್ರ ಪಾಟೀಲ…, ಜೆ.ಎಚ್‌. ಪಟೇಲ…, ಎಸ್‌.ಆರ್‌. ಬೊಮ್ಮಾಯಿ, ಯಡಿಯೂರಪ್ಪನವರು ತಮ್ಮದೆ ಕೊಡುಗೆ ಕೊಟ್ಟಿದ್ದಾರೆ. ನಾನು ಒಂದೊಂದು ಬಾರಿ ಭಾವೋದ್ವೇಗಕ್ಕೆ ಒಳಗಾಗಿ ಮಾತನಾಡಿ, ಎರಡೇ ನಿಮಿಷಕ್ಕೆ ಉಲ್ಟಾಹೊಡೆಯುವ ವ್ಯವಸ್ಥೆಯನ್ನು ನೋಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.

ಸಿದ್ದರಾಮಯ್ಯ ಹೇಳಿಕೆ ಬಗ್ಗೆ ನಾನು ಹೆಚ್ಚು ಚರ್ಚಿಸಲು ಹೋಗುವುದಿಲ್ಲ. ಸಿದ್ದರಾಮಯ್ಯ ಮನವರಿಕೆ ಮಾಡಿಕೊಂಡು ರಾಜ್ಯದ ಎಲ್ಲಾ ವರ್ಗದ ಜನರ ಜೊತೆ ಒಡನಾಟ ಇಟ್ಟುಕೊಂಡು ಕೆಲಸ ಮಾಡಬೇಕು. ಜಾತಿ ನಿಮಿತ್ತ ಮಾತ್ರ. ಇದನ್ನ ವೈಭವೀಕರಿಸಬಾರದು. ಎಲ್ಲಾ ವರ್ಗಾದ ಜನರು ಸೋಮಣ್ಣನಂತಹ ಕೆಲಸಗಾರರು ಬೇಕು ಅಂಥ ಕೇಳುತ್ತಿದ್ದಾರೆ. ಹತ್ತಾರು ಭಾರಿ ಯೋಚನೆ ಮಾಡಿ ನಿರ್ಧಾರ ಮಾಡುತ್ತಾರೆ. ವಸತಿ ಸಚಿವರಾಗಿ ಸೋಮಣ್ಣ ಏನು ಕೆಲಸ ಮಾಡಿದ್ದಾರೆ ಎಂಬುದು ಸಿದ್ದರಾಮಯ್ಯಗೆ ಗೊತ್ತಿದೆ. ನನ್ನ ಬಗ್ಗೆ ಸಿದ್ದರಾಮಯ್ಯನವರೇ ಮೆಚ್ಚುಗೆಯ ಮಾತುಗಳ್ನಾಡಿದ್ದಾರೆ. ಎಲ್ಲವೂ ಅವರಿಗೆ ಗೊತ್ತಿದೆ ಜಾಣ ಕುರುಡುತನ ಅಷ್ಟೇ ಎಂದರು.

ಸೊದ್ದರಾಮಯ್ಯ ವಿರುದ್ಧ ಅಸಮಾಧಾನ

ಮರಾಜನಗರ(ಏ.22):  ವರುಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಿದ್ದರಾಮಯ್ಯ ಅವನ್ಯಾರು, ಇವನ್ಯಾರು ಅನ್ನೋ ಡೈಲಾಗ್‌ ಕಡಿಮೆ ಮಾಡಿದರೆ ಒಳ್ಳೇದು. ನಾನು ಅವರನ್ನು ಮುತ್ಸದ್ದಿ ನಾಯಕ ಎಂದು ಭಾವಿಸಿದ್ದಾಗಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಕಿಡಿಕಾರಿದ್ದಾರೆ.

ಶುಕ್ರವಾರ ಸುದ್ದಿಗಾರರ ಜತೆಗೆ ಮಾತನಾಡಿ, ಸಿದ್ದರಾಮಯ್ಯ ಅವರೀಗ ವಿರೋಧ ಪಕ್ಷದ ನಾಯಕರೂ ಅಲ್ಲ, ನಾನು ಮಂತ್ರೀನೂ ಅಲ್ಲ. ನಾನು ಅಭ್ಯರ್ಥಿ, ಅವರೂ ಅಭ್ಯರ್ಥಿ. ನಾನು ಅವರನ್ನು ಮುತ್ಸದ್ದಿ ನಾಯಕ ಎಂದು ಭಾವಿಸಿದ್ದೆ. ಅವನ್ಯಾರು, ಇವನ್ಯಾರು ಅನ್ನೋ ಡೈಲಾಗ್‌ ಕಡಿಮೆ ಮಾಡಿದ್ರೆ ಒಳ್ಳೇದು. ರಾಜಕೀಯದಲ್ಲಿ ತಾಳ್ಮೆ ಮುಖ್ಯ ಎಂದು ಹೇಳಿದರು.

click me!