ಹಾಲಪ್ಪ ಅವರು ಶಾಸಕರಾದ ನಂತರ ಸಾಗರದಲ್ಲಿ ಬ್ರಾಹ್ಮಣ ಸಮುದಾಯದವರ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದೆ. ಇದಕ್ಕೆ ನಾವು ಪ್ರತಿರೋಧ ಒಡ್ಡಿದ್ದೇವೆ ಎಂದು ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ರವೀಶ್‌ಕುಮಾರ್ ಆರೋಪಿಸಿದರು.
ಸಾಗರ (ಮಾ.1): ಹಾಲಪ್ಪ ಅವರು ಶಾಸಕರಾದ ನಂತರ ಸಾಗರದಲ್ಲಿ ಬ್ರಾಹ್ಮಣ ಸಮುದಾಯದವರ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದೆ. ಇದಕ್ಕೆ ನಾವು ಪ್ರತಿರೋಧ ಒಡ್ಡಿದ್ದೇವೆ ಎಂದು ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ರವೀಶ್‌ಕುಮಾರ್ ಆರೋಪಿಸಿದರು.
ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಾಹ್ಮಣ(Brahmana community)ರ ಮೇಲೆ ಶಾಸಕರ ದಬ್ಬಾಳಿಕೆ ಮಹಾಸಭಾ ಖಂಡಿಸುತ್ತದೆ. ಈ ಹಿಂದೆ ಎಂಡಿಎಫ್‌ನಲ್ಲಿ ನಡೆದ ಗಲಾಟೆಯಲ್ಲಿ ಹಾಲಪ್ಪ ಹಾಗೂ ಸಹಚರರ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ದೂರು ನೀಡಲಾಗಿತ್ತು. ಆದರೆ, ಕೆಲವು ತಿಂಗಳ ನಂತರ ಪ್ರತಿಭಟನೆ ನಡೆಸಿ ಒತ್ತಡ ಹೇರಿದ್ದರಿಂದ ದೂರು ದಾಖಲಾಯಿತು. ಆದರೂ ಪ್ರಥಮ ಆರೋಪಿ ಆಗಿರುವ ಹಾಲಪ್ಪ ಅವರನ್ನು ಕೈ ಬಿಟ್ಟು ಇತರರ ಮೇಲೆ ಎಫ್‌ಐಆರ್ ಹಾಕಲಾಗಿದೆ. ಇದು ನಮ್ಮ ಪೊಲೀಸ್ ವ್ಯವಸ್ಥೆ ಎಂದು ಬೇಸರ ವ್ಯಕ್ತಪಡಿಸಿದರು.
Karnataka election 2023: ಮತದಾರರಿಗೆ ಆಮಿಷ ಶಿಕ್ಷಾರ್ಹ ಅಪರಾಧ: ಡಿಸಿ...
ಈಗಲೂ ಕಾಲ ಮಿಂಚಿಲ್ಲ. ಮೊದಲು ಶ್ರೀಪಾದ ಹೆಗಡೆ(Sripad hegde) ಅವರು ದೂರು ಕೊಟ್ಟಾಗ ಅವರು ಶಾಸಕರಾಗಿದ್ದರು. ಈಗ ಅವರು ಶಾಸಕರಲ್ಲ. ಹಾಗಾಗಿ ಯಾವುದೇ ಅನುಮತಿ ಪಡೆಯುವ ಅಗತ್ಯವಿಲ್ಲ. ಇರುವ ದೂರಿನಲ್ಲೇ ಅವರ ಮೇಲೆ ಎಫ್‌ಐಆರ್‌ನಲ್ಲಿ ಹಾಲಪ್ಪ(Halappa)ನವರ ಹೆಸರನ್ನು ಸೇರಿಸಬಹುದು. ಹಾಗೆಯೇ ಈಚೆಗೆ ಶಾಸಕರು ಪತ್ರಕರ್ತ ಮಹೇಶ್ ಹೆಗಡೆ ಅವರಿಗೆ ಧಮಕಿ ಹಾಕಿದ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಸುಮೊಟೊ ಕೇಸ್ ಹಾಕಬೇಕೆಂದು ತಾಲೂಕು ಬ್ರಾಹ್ಮಣ ಮಹಾಸಭಾ ಒತ್ತಾಯಿಸುತ್ತದೆ ಎಂದು ಹೇಳಿದರು.
ಪ್ರಮುಖರಾದ ಕೆ.ಎನ್. ಶ್ರೀಧರ್, ರಜನೀಶ ಹೆಗಡೆ, ಮಹಾಬಲೇಶ್ವರ ಹೂಗೊಪ್ಪಲು ಹಾಜರಿದ್ದರು.
ಬ್ರಾಹ್ಮಣ, ಲಿಂಗಾಯತ ಮುಖಂಡರ ಮೇಲೆ ಹಲ್ಲೆಯೇ ಹಾಲಪ್ಪ ಸಾಧನೆ
ಮಾತೆತ್ತಿದರೆ ತಾವು ಅಭಿವೃದ್ಧಿ ಹರಿಕಾರ ಎಂದು ಹೇಳಿಕೊಳ್ಳುವ ಹಾಲಿ ಶಾಸಕರು ಕಳೆದ ಐದು ವರ್ಷದಲ್ಲಿ ಏನೇನು ಮಾಡಿದ್ದಾರೆಂದು ನಮ್ಮೊಂದಿಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಸಾಗರ ವಿಧಾನಸಭಾ ಕ್ಷೇತ್ರSagar assembly constituency()ದ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು(Belur Gopalakrishna) ಪಂಥಾಹ್ವಾನ ನೀಡಿದರು.
ಪಟ್ಟಣದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಗೋಡು ತಿಮ್ಮಪ್ಪ ಅವರ ಅವಧಿಯಲ್ಲಿ ತಹಸೀಲ್ದಾರ್ ಕಚೇರಿ ನಿರ್ಮಾಣಕ್ಕೆ ಹಣ ಬಂದು, ಪೂಜೆ ನಡೆದಿದ್ದನ್ನು ನೀವು ಮರೆಯಬೇಡಿ. ಆದರೆ ಈತನಕ ಲೋಕಾರ್ಪಣೆ ಮಾಡಲು ಆಗದ ನೀವು ಮಾವ ಅಳಿಯ ಏನು ಅಭಿವೃದ್ಧಿ ಮಾಡಿಲ್ಲವೆಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.
ಹಾಲಿ ಶಾಸಕರ ಆಡಳಿತದ ಸಾಧನೆ ಬಗ್ಗೆ ವಿರೋಧ ಪಕ್ಷದವರು ಮಾತನಾಡಿದರೆ ಅದು ಟೀಕೆ ಎನಿಸಬಹುದು. ಆದರೆ ನಿಮ್ಮವರೇ ಈಗ ನಿಮ್ಮ ಅವಧಿಯ ದೌರ್ಜನ್ಯಗಳ ಬಗ್ಗೆ ರಸ್ತೆಯಲ್ಲಿ ನಿಂತು ಮಾತನಾಡುತ್ತಿದ್ದಾರೆ. ಅದಕ್ಕೇನು ಹೇಳುತ್ತೀರಿ ಎಂದು ಪ್ರಶ್ನಿಸಿದ ಬೇಳೂರು, ಹಿಂದಿನ ಚುನಾವಣೆಯಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆ ಎನ್ನುವ ಕಾರಣಕ್ಕೆ ಜನರು ಹಾಲಪ್ಪರ ಕೈ ಹಿಡಿದಿದ್ದರು. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಯಡಿಯೂರಪ್ಪನವರಿಗೆ ಕಣ್ಣೀರು ಹಾಕಿಸಿ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ್ದನ್ನು ರಾಜ್ಯದ ಜನ ಯಾವತ್ತೂ ಕ್ಷಮಿಸುವುದಿಲ್ಲ ಎಂದರು.
ಕ್ಷೇತ್ರದಲ್ಲಿ ಬ್ರಾಹ್ಮಣ, ಲಿಂಗಾಯತ ಮುಖಂಡರ ಮೇಲೆ ಹಲ್ಲೆ ನಡೆಸಿದ್ದೆ ಹಾಲಪ್ಪರ ಸಾಧನೆಯಾಗಿದೆ. ಭ್ರಷ್ಟಾಚಾರದ ಹಣ, ಅಹಂಕಾರವನ್ನು ತುಂಬಿಕೊಂಡಿರುವ ಹಾಲಪ್ಪನವರ ದಬ್ಬಾಳಿಕೆ ರಾಜಕಾರಣಕ್ಕೆ ಈ ಬಾರಿ ಕ್ಷೇತ್ರದ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ಮಧು ಚೆಕ್ ಬೌನ್ಸ್ ಪ್ರಕರಣದಲ್ಲಿ ಮುದ್ದೆ ಮುರಿಯಲಿದ್ದಾನೆ: ಶಾಸಕ ಕುಮಾರ್ ಬಂಗಾರಪ್ಪ
ಸಭೆಯನ್ನು ಉದ್ಘಾಟಿಸಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಮಾತ್ರ ಎಲ್ಲ ವರ್ಗದವರನ್ನು ಒಟ್ಟಿಗೆ ಕರೆದೊಯ್ಯುವ, ಸಾಮಾಜಿಕ ನ್ಯಾಯ ಕಲ್ಪಿಸುವ ಪಕ್ಷವಾಗಿದೆ. ನಾವು ಅಧಿಕಾರಕ್ಕೆ ಬಂದರೆ ಏನೆಲ್ಲ ಸೌಲಭ್ಯ ಕೊಡುತ್ತೇವೆಂದು ಗ್ಯಾರಂಟಿ ಕಾರ್ಡ್ ಮೂಲಕ ಭರವಸೆ ನೀಡಿದ್ದೇವೆ. ಈ ಚುನಾವಣೆಯಲ್ಲಿ ಕಾಂಗ್ರೆಸಿಗೆ ಮತ್ತೊಮ್ಮೆ ಅವಕಾಶ ಮಾಡಿಕೊಡಬೇಕು. ಇದಕ್ಕಾಗಿ ಸಾಗರದಲ್ಲಿ ಕಾಂಗ್ರೆಸನ್ನು ಗೆಲ್ಲಿಸ ಬೇಕು ಎಂದು ಮನವಿ ಮಾಡಿದರು.
ಪಕ್ಷದ ಪ್ರಮುಖರಾದ ಎನ್.ರಮೇಶ್, ಪ್ರಫುಲ್ಲಾ ಮಧುಕರ್, ಸುರೇಶಬಾಬು, ಮಧುಮಾಲತಿ, ಸುಮಂಗಲ ರಾಮಕೃಷ್ಣ, ಜ್ಯೋತಿ ಕೋವಿ, ರವಿಕುಮಾರ್, ಕೆ.ಹೊಳೆಯಪ್ಪ, ಮಕ್ಬೂಲ್ ಅಹ್ಮದ್, ಎಲ್.ಟಿ. ತಿಮ್ಮಪ್ಪ ಹೆಗಡೆ, ಗಣಪತಿ ಮಂಡಗಳಲೆ, ಅಶೋಕ ಬೇಳೂರು, ಅಣ್ಣಪ್ಪ ಭೀಮನೇರಿ, ತಸ್ರೀಫ್, ಎಲ್. ಚಂದ್ರಪ್ಪ ಮೊದಲಾದವರು ಇದ್ದರು. ತಾರಾಮೂರ್ತಿ ಸ್ವಾಗತಿಸಿ, ಮೈಕೆಲ್ ಡಿಸೋಜ ವಂದಿಸಿದರು.