
ಬೆಂಗಳೂರು(ಏ.01): ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ರಾತ್ರಿ ಪಂದ್ಯಾಟದ ವೇಳೆ ಕ್ರಿಕೆಟ್ ವೀಕ್ಷಕರ ಅನುಕೂಲಕ್ಕಾಗಿ ಮೆಟ್ರೋ ರೈಲ್ವೆ ಸಂಚಾರವನ್ನು ರಾತ್ರಿ 1.30ರವರೆಗೂ ವಿಸ್ತರಿಸಲಾಗಿದೆ.
ಪಂದ್ಯಾವಳಿಗಳು ಇರುವ ದಿನಗಳಲ್ಲಿ ಮೆಟ್ರೋ ರೈಲುಗಳು ಕೆಂಪೇಗೌಡ ನಿಲ್ದಾಣದಿಂದ (ಮೆಜೆಸ್ಟಿಕ್) ನಾಲ್ಕು ದಿಕ್ಕುಗಳಲ್ಲಿ ರಾತ್ರಿ 1.30ಕ್ಕೆ ಹೊರಡಲಿವೆ. ಇದರಿಂದ ನಗರದ ವಿವಿಧೆಡೆಯಿಂದ ಕ್ರಿಕೆಟ್ ಪ್ರಿಯರಿಗೆ ಪಂದ್ಯ ಮುಗಿದ ಬಳಿಕ ಮನೆಗೆ ತೆರಳಲು ಅನುಕೂಲವಾಗಲಿದೆ. ಬೈಯಪ್ಪನಹಳ್ಳಿ, ಕೆಂಗೇರಿ ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ಕೊನೆಯ ನಿಲ್ದಾಣಗಳಿಂದ ರಾತ್ರಿ 1 ಗಂಟೆಗೆ ಕೊನೆಯ ರೈಲು ಹೊರಡಲಿದೆ. ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ (ಮಜೆಸ್ಟಿಕ್) ಕೊನೆಯ ವಾಣಿಜ್ಯ ರೈಲು ಸೇವೆಯು ಎಲ್ಲಾ ನಾಲ್ಕು ದಿಕ್ಕುಗಳಿಗೆ ರಾತ್ರಿ 1.30 ಹೊರಡಲಿದೆ.
ಬೆಂಗಳೂರು: ಮೆಟ್ರೋದಲ್ಲಿ ಇಂದಿನಿಂದ ಮೊಬಿಲಿಟಿ ಕಾರ್ಡ್ ಲಭ್ಯ
ಪೇಪರ್ ಟಿಕೆಟ್:
ಯಾವುದೇ ಮೆಟ್ರೋ ರೈಲು ನಿಲ್ದಾಣದಿಂದ ಕಬ್ಬನ್ ಪಾರ್ಕ್ ಹಾಗೂ ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳಿಗೆ ಟೋಕನ್, ಕ್ಯೂಆರ್ ಟಿಕೆಟ್ ಮತ್ತು ಸ್ಮಾರ್ಚ್ ಕಾರ್ಡ್‌ಗಳನ್ನು ಉಪಯೋಗಿಸಿ ಪ್ರಯಾಣಿಸಬಹುದು. ನಿಲ್ದಾಣಗಳಿಂದ ಪ್ರಯಾಣಿಕರು ತ್ವರಿತವಾಗಿ ಪ್ರಯಾಣಿಸಲು ಅನುಕೂಲವಾಗುವಂತೆ ರಿಟರ್ನ್ ಜರ್ನಿ ಪೇಪರ್ ಟಿಕೆಟ್‌ಗಳನ್ನು ಮಧ್ಯಾಹ್ನ 3ರಿಂದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ನೀಡಲಾಗುತ್ತಿದೆ.
ಬಿಡದಿಯಲ್ಲಿ ಟೌನ್‌ಶಿಪ್ ನಿರ್ಮಿಸಿ ಬಿಡದಿಗೆ ಮೆಟ್ರೋ ಬಗ್ಗೆ ಚಿಂತನೆ: ಸಿಎಂ ಬೊಮ್ಮಾಯಿ
ಹೊಸ ಮಾರ್ಗದಲ್ಲಿ ಮೆಟ್ರೋ ಓಡಲ್ಲ:
ಹೊಸದಾಗಿ ಆರಂಭವಾದ ವೈಟ್‌ಫೀಲ್ಡ್ (ಕಾಡುಗೋಡಿ) ಮತ್ತು ಕೃಷ್ಣರಾಜಪುರ ನಡುವಿನ ರೈಲು ಸೇವೆಗಳನ್ನು ವಿಸ್ತರಿಸಿಲ್ಲ ಎಂದು ಮೆಟ್ರೋ ರೈಲು ನಿಗಮ ತಿಳಿಸಿದೆ.
ಯಾವ್ಯಾವಾಗ?
ನಗರದಲ್ಲಿ ರಾತ್ರಿ 7.30ಕ್ಕೆ ನಡೆಯಲಿರುವ ಪಂದ್ಯಗಳ ವೇಳೆ ಮೆಟ್ರೋ ರೈಲಿನ ಸಂಚಾರ ಸಮಯ ವಿಸ್ತರಿಸಲಾಗಿದೆ. ಏ.2 (ಆರ್‌ಸಿಬಿ-ಮುಂಬೈ), ಏ.10 (ಆರ್‌ಸಿಬಿ-ಲಖನೌ), ಏ.17 (ಆರ್‌ಸಿಬಿ-ಚೆನ್ನೈ), ಏ.26 (ಆರ್‌ಸಿಬಿ-ಕೆಕೆಆರ್)ರಂದು ಮತ್ತು ಮೇ 21ರಂದು (ಆರ್‌ಸಿಬಿ-ಗುಜರಾತ್) ಪಂದ್ಯಗಳ ವೇಳೆ ವೀಕ್ಷಕರ ನೆರವಿಗಾಗಿ ಮೆಟ್ರೋ ರೈಲುಗಳು ಸಂಚರಿಸಲಿವೆ.