ನರೇಗಾ ಯೋಜನೆಯಲ್ಲಿ ಅವ್ಯವಹಾರ ಮಾಡಲಾಗಿದೆ ಎಂದು ಆರೋಪಿಸಿ ಪಿಡಿಒ ಹಾಗೂ ಸದಸ್ಯರ ನಡೆಗೆ ನರೇಗಾ ಕಾರ್ಮಿಕರು ಆಕ್ರೋಶಗ ವ್ಯಕ್ತಪಡಿಸಿದ್ದಾರೆ.
ಹಾವೇರಿ ( ಸೆಪ್ಟೆಂಬರ್ 13): ಗ್ರಾಮ ಪಂಚಾಯತಿ ಪಿಡಿಒ ಹಾಗೂ ಸದಸ್ಯರ ವಿರುದ್ದ ಗ್ರಾಮಸ್ಥರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿರೋ ಘಟನೆ ನಡೆದಿದೆ. ಹಿರೇಕೇರೂರು ತಾಲೂಕು ಹಂಸಭಾವಿ ಗ್ರಾಮ ಪಂಚಾಯತಿ ಪಿಡಿಒ ಹಾಗೂ ಸದಸ್ಯರ ವಿರುದ್ದ ಕೂಲಿ ಕಾರ್ಮಿಕರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಜಾಬ್ ಕಾರ್ಡ್ ಇದ್ರೂ ನರೇಗಾ ಯೋಜನೆ ಕೂಲಿ ಕೆಲಸ ನೀಡಿಲ್ಲ. ಸುಮಾರು 60 ಜನಕ್ಕೆ ಅರ್ಜಿ ಹಾಕಿದರೂ ಕೆಲಸ ನೀಡದ ಹಿನ್ನೆಲೆ,ಹಂಸಭಾವಿ ಗ್ರಾ.ಪಂ ಪಿಡಿಒ ರವಿ . ಬಿ. ಹಾಗೂ ನಂಬರ್ 6 ಅರ್ಜಿ ಸಲ್ಲಿಸಿ ಕೆಲಸ ಕೊಡಿ ಎಂದು ಕೇಳಿದರೂ ಕೆಲಸ ನೀಡಿಲ್ಲ ಎಂದು ವ್ಯಕ್ತ ಪಡಿಸಿದರು.
undefined
ಹಾವೇರಿ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಗ್ರಾ.ಪಂ ಪಿ.ಡಿ.ಒ ಹಾಗೂ ಗ್ರಾ.ಪಂ ಸದಸ್ಯರ ವಿರುದ್ದ ಮೌನ ಪ್ರತಿಭಟನೆ ನಡೆಸಿ ತಮ್ಮ ನೋವು ಹೊರ ಹಾಕಿದರು. ಜೊತೆಗೆ ನರೇಗಾ ಕಾಮಗಾರಿಗಳಲ್ಲಿ ಅವ್ಯವಹಾರ ಮಾಡಿದ್ದಾರೆ ಎಂದು ಹಂಸಭಾವಿ ಗ್ರಾಮದ ಮಲ್ಲೇಶಪ್ಪ ಆರೋಪಿಸಿದರು.
ಸುಮಾರು ಆರು ತಿಂಗಳುಗಳಿಂದ ಕೆಲಸ ನೀಡದೇ ಸತಾಯಿಸುತ್ತಿದ್ದಾರೆ.ಜೊತೆಗೆ ನಿರುದ್ಯೋಗ ಭತ್ಯ ನೀಡಿಲ್ಲ. ಇದರಿಂದ ಅನ್ಯಾಯ ಆಗಿದೆ ಎಂದು ನರೇಗಾ ಕಾರ್ಮಿಕರು ಅಸಮಾಧಾನ ಹೊರ ಹಾಕಿದರು.ಈ ಕುರಿತು ಸಿ.ಇ.ಒ ಅವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ.ಗ್ರಾಮೀಣಾಭಿವೃದ್ಧಿ ಆಯುಕ್ತಾಲಯಕ್ಕೂ ಪತ್ರ ಬರೆದರೂ ಯಾವುದೇ ಪ್ರಯೋಜನ ಆಗಿಲ್ಲ.ಅಲ್ಲದೇ ಯಂತ್ರಗಳ ಮೂಲಕ ಕಾಮಗಾರಿ ನಡೆಸಿ ಅವ್ಯವಹಾರ ನಡೆಸಿದ್ದಾರೆ. ಹಂಸಭಾವಿ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ರಸ್ತೆಗಳಲ್ಲಿ ಕೆಲಸವನ್ನೇ ಮಾಡದೇ ಲಕ್ಷಾಂತರ ರೂಪಾಯಿ ಬಿಲ್ ತೆಗೆದಿದ್ದಾರೆ ಎಂದು ಕಿಡಿಕಾರಿದರು.