* ವಿಜಯಪುರದ ಸಿದ್ದರಾಮೇಶ್ವರ ದೇಗುಲದಲ್ಲಿ ಯುಗಾದಿ ಸಂಭ್ರಮ
* ದೇಗುಲದ ಆವರಣದಲ್ಲಿ ಕೈಲಾಸ ಲೋಕವನ್ನೇ ಧರೆಗಿಳಿಸಿದ ಅರ್ಚಕರು..!
* ಭಕ್ತರ ಗಮನ ಸೆಳೆದ ಏಕಾದಶ ರುದ್ರ, ನವದುರ್ಗೆಯರ ಪೂಜೆ..!
* ಲೋಕ ಕಂಟಕ ನಿವಾರಣೆಗೆ, ರೈತಾಪಿ ವರ್ಗಕ್ಕೆ ಶುಭವಾಗಲು ಹೋಮ..!
ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್ ವಿಜಯಪುರ
ವಿಜಯಪುರ (ಏಪ್ರೀಲ್ 02) : ಗುಮ್ಮಟನಗರಿ ವಿಜಯಪುರದಲ್ಲಿ ವಿಶೇಷ ರೀತಿಯಲ್ಲಿ ಯುಗಾದಿ ಹಬ್ಬದ ಆಚರಣೆ ನಡೆಯಿತು. ಕೋವಿಡ್ ಹೆಮ್ಮಾರಿ ಆರ್ಭಟದ 2 ವರ್ಷಗಳ ನಂತರ ಸಧ್ಯ ವಿಜೃಂಬನೆಯಿಂದ ಯುಗಾದಿ ಆಚರಿಸಲಾಯಿತು. ಮನೆ-ಮನೆಗಳಲ್ಲು ಬೇವು-ಬೆಲ್ಲ ತಿನ್ನುವ ಮೂಲಕ ನೋವು-ನಲಿವುಗಳನ್ನ ಸರಿಸಮಾನವಾಗಿ ಸ್ವೀಕರಿಸುವೆವು ಎನ್ನುವ ಸಂದೇಶದೊಂದಿಗೆ ಹಬ್ಬ ಆಚರಣೆ ನಡೆಯಿತು. ವಿಶೇಷವಾಗಿ ವಿಜಯಪುರದ ಬಹುತೇಕ ದೇಗುಲದಲ್ಲಿ ವಿಶೇಷ ಪೂಜೆ-ಪುನಸ್ಕಾರಗಳನ್ನ ನೆರವೇರಿಸಲಾಯಿತು. ಅದರಲ್ಲು ವಿಜಯಪುರ ನಗರದ ಆರಾಧ್ಯ ದೈವ ಗ್ರಾಮದೇವರು ಸಿದ್ದರಾಮೇಶ್ವರ ದೇಗುಲದಲ್ಲಿ ವಿನೂತನ-ವಿಶೇಷ ರೀತಿಯಲ್ಲಿ ಮಂಡಲ ಹಾಕಿ ಮಾಡಿದ ಪೂಜೆ ಭಕ್ತರ ಗಮನ ಸೆಳೆಯಿತು..
undefined
ದೇವಲೋಕವನ್ನೆ ಧರೆಗಿಳಿದ ಅರ್ಚಕರು...!
ಯುಗಾದಿ ಹೊಸ ವರ್ಷದ ನಿಮಿತ್ಯ ಸಿದ್ದೇಶ್ವರ ದೇಗುಲದ ಒಳಗೆ ಮಂಡಲ ಹಾಕಿ ಮಾಡಿದ ಪೂಜೆ ಎಲ್ಲರ ಗಮನ ಸೆಳೆಯಿತು.. ಈ ಪೂಜೆ ನೋಡುತ್ತಿದ್ದ ಭಕ್ತರಿಗೆ ಒಂದು ಕ್ಷಣ ಕೈಲಾಸ ಲೋಕವೇ ಧರೆಗಿಳಿಯಿತಾ ಎನ್ನುವ ಭಾವನೆ ಉಂಟಾಯ್ತು.. ಗಣೇಶ ಸಹಿತಿ ಶಿವ-ಪಾರ್ವತಿ, ನವದುರ್ಗೆಯರು, 21 ಪ್ರಮಥಗಣಂಗಳು, ಏಕಾದಶ (ಹನ್ನೊಂದು) ರುದ್ರರು, ನವಗ್ರಹ, ಅಷ್ಟದಿಕ್ಪಾಲರ ಸ್ಥಾಪನೆ ಮಾಡಿ, ಶಿವವನ್ನೆ ಆವಾಹನೆ ಮಾಡಿ ಪೂಜೆ ನೇರವೆರಿಸಿದ್ದರು ವಿಶೇಷವಾಗಿತ್ತು. ಸಿದ್ದೇಶ್ವರ ದೇಗುಲದ ಅರ್ಚಕರಾದ ಈರಯ್ಯ ಮಲ್ಲಯ್ಯ ಗಣಕುಮಾರಮಠ, ಶಿವಾನಂದಯ್ಯ ಹಿರೇಮಠ, ಮಲ್ಲಯ್ಯ ಮಠಪತಿ (ಮನಗೂಳಿ) ಸೇರಿ ಮಾಡಿ ಈ ಪೂಜಾ ಕೈಂಕರ್ಯ ಕಂಡು ಭಕ್ತರು ಮಂತ್ರಮುಗ್ದರಾದ್ರು..!
ಕಹಿಯನ್ನು ಉಂಡು ಸಿಹಿಯನ್ನು ನೀಡಲು ಕಲಿಯಿರಿ : ಯುಗಾದಿ ಹಿನ್ನೆಲೆ ಏನು? ಹೇಗೆ ಆಚರಿಸಬೇಕು?
ಭಕ್ತರನ್ನ ಸೆಳೆದ ದೇವರ ಮೂರ್ತಿಗಳು..!
ಇನ್ನು ಕಳಶಗಳನ್ನೆ ಬಳಸಿಕೊಂಡು ದೇವರ ಮೂರ್ತಿಗಳನ್ನ ಸ್ಥಾಪನೆ ಮಾಡಿದ್ದು ದೇಗುಲಕ್ಕೆ ಭೇಟಿ ನೀಡಿದ ಭಕ್ತರನ್ನ ಸೆಳೆದಿದ್ದು ವಿಶೇಷ. ಪ್ರಥಮದಲ್ಲಿ ಗಣೇಶ ಸಮೇತನಾಗಿ ಶಿವ-ಪಾರ್ವತಿಯರ ಮೂರ್ತಿಗಳನ್ನ ಸ್ಥಾಪನೆ ಮಾಡಲಾಗಿತ್ತು.. ಸ್ವಸ್ತಿಪುಣ್ಯಾ ವಾಚಾನಾ ಪೂಜೆ ನೆರವೇರಿಸಲಾಗಿತ್ತು. 11 ಕಳಶಗಳ ರೂಪದಲ್ಲಿ ಏಕಾದಶ ರುದ್ರರನ್ನ ಆವಾಹನೆ ಮಾಡಿ ಸ್ಥಾಪನೆ ಮಾಡಲಾಗಿತ್ತು.. ಶಿವನ ಅಂಶಗಳಾದ 11ಜನ ರುದ್ರರ ದರ್ಶನ ಯುಗಾದಿಯಂದು ಮಾಡಿದಲ್ಲಿ ವಿಶೇಷ ಪುಣ್ಯಪ್ರಾಪ್ತಿ ಎನ್ನಲಾಗುತ್ತೆ..
ನವದುರ್ಗಿಯರ ಸ್ಥಾಪನೆ..!
ಕೈಲಾಸವೇ ಧರೆಗಿಳಿದಂತಿದ್ದ ಈ ಮಂಡಲ ಪೂಜೆಯಲ್ಲಿ ನವದುರ್ಗಿರನ್ನ ಸ್ಥಾಪಿಸಲಾಗಿತ್ತು. ಕಳಶ ರೂಪದಲ್ಲೆ ನವದುರ್ಗಿಯರಾದ ಶೈಲ ಪುತ್ರಿ, ಬ್ರಹ್ಮಚಾರಿಣಿ, ನಯನಾ ಬಿಡೆ, ಚಂದ್ರಘಂಟಾ, ಕೂಷ್ಮಾಂಡಿಣಿ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ, ಸಿದ್ಧಿರಾತ್ರಿಯರನ್ನ ಒಂದೆಡೆ ಸ್ಥಾಪಿಸಿ ಪೂಜಿಸಲಾಯಿತು. ನವದುರ್ಗಿಯರ ಬಳಿಕ ನವಗ್ರಹಗಳ ಸ್ಥಾಪನೆ ಕೂಡ ಮಾಡಲಾಗಿತ್ತು.. ಸಾಲಾಗಿ ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು, ಕೇತುವಿನ ಸ್ಥಾಪಿಸಿ ವಿಶೇಷ ಪೂಜೆ ನೆರವೇರಿಸಲಾಯಿತು.. ಚತುರ್ಥೋ ಭದ್ರತೋ ಮಂಡಲ ಪೂಜೆ ಜೊತೆಗೆ ಪಂಚಭೂತಗಳ ಸ್ವರೂಪಗಳನ್ನ ಕಳಶ ರೂಪದಲ್ಲಿ ಸ್ಥಾಪನೆ. ವಿಶೇಷವಾಗಿ ಶಿವನ ಪ್ರಥಮಗಣಂಗಳಾದ ನಂದಿ, ಭೃಂಗಿ ಸೇರಿ 21 ಗಣಾಧೀಶ್ವರರನ್ನ ಸ್ಥಾಪಿಸಿ ಪೂಜಿಸಲಾಯಿತು.. ಇಷ್ಟೆಲ್ಲ ದೇವಾನು ದೇವತೆಗಳ ದರ್ಶನ ಪಡೆದ ಭಕ್ತರು ಪುಳಕಿತರಾದರು..
ಕಂಟಕ ನಿವಾರಣೆಗೆ ವಿಶೇಷ ಪೂಜೆ..!
ಯುಗಾದಿ ನಿಮಿತ್ಯವಾಗಿ ಸಿದ್ದೇಶ್ವರ ದೇಗಯಲದಲ್ಲಿ ಗೋಪೂಜೆಯ ಜೊತೆ-ಜೊತೆಗೆ ಲೋಕ ಕಂಟಕ ನಿವಾರಣೆಗೆ ಮೃತ್ಯುಂಜಯ ಪೂಜೆ-ಹೋಮ ನೆರವೇರಿಸಲಾಯಿತು. ರೈತ ವರ್ಗದ ಸಂಕೇತವಾಗಿ ರಾಶಿ ಮಾಡಿದ ಗೋಧಿಯ ಕಾಳಿನ ಮೇಲೆ ಹಣ್ಣ-ಹಂಪಲು ಇಟ್ಟು ಪೂಜೆ ಮಾಡಲುವ ಮೂಲಕ ರೈತಾಪಿ ವರ್ಗಕ್ಕೆ ಒಳತಾಗಲು ವಿಶೇಷ ಪೂಜೆಯನ್ನು ನಡೆಸಲಾಯಿತು.. ಮಹಾರುದ್ರ ಹೋಮ-ಗಣಪತಿ ಹೋಮಗಳನ್ನ ನೆರವೇರಿಸಲಾಯಿತು..!