ಹಜ್‌ ಯಾತ್ರೆಗೆ ಹೋಗಿದ್ದ ಮುಂಡಗೋಡ ಕುಟುಂಬದ ಮೂವರು ಮೆಕ್ಕಾ-ಮದೀನಾ ರಸ್ತೆ ಅಪಘಾತದಲ್ಲಿ ಸಾವು

By Sathish Kumar KH  |  First Published Apr 7, 2024, 4:34 PM IST

ಮುಂಡಗೋಡದಿಂದ ಹಜ್ ಯಾತ್ರೆಗೆ ತೆರಳಿದ್ದ ಒಂದೇ ಕುಟುಂಬದ ಮೂವರು ಮೆಕ್ಕಾ ಮದೀನಾ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ.


ಉತ್ತರಕನ್ನಡ  (ಏ.07): ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಿಂದ ಹಜ್ ಯಾತ್ರೆಗೆ ತೆರಳಿದ್ದ ಒಂದೇ ಕುಟುಂಬದ ಮೂವರು ಮೆಕ್ಕಾ ಮದೀನಾ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ.

ಮುಂಡಗೋಡ ಪಟ್ಟಣದ ರೋಣ ಮೆಡಿಕಲ್ ಮಾಲೀಕರಾದ ಫಯಾಜ್ ರೋಣ ಅವರ ಪತ್ನಿ ಆಫ್ರಿನಾ ಬಾನು ಹಾಗೂ ಅವರ ಅಣ್ಣನ ಮಗ ಆಯಾನ್ ರೋಣ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನು ಒಂದೇ ಕುಟುಂಬದ ಮೂವರು ದೂರದ ದೇಶ ಮದೀನಾದಲ್ಲಿ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಇದೇ ಘಟನೆಯಲ್ಲಿ ಮೃತ ಫಯಾಜ್ ರೋಣ ದಂಪತಿಯ ಇಬ್ಬರು ಮಕ್ಕಳಿಗೂ ಗಂಭೀರ ಗಾಯವಾಗಿದೆ. ಇವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Tap to resize

Latest Videos

undefined

ರಾಯಚೂರಿನಿಂದ ಗಾರೆ ಕೆಲಸಕ್ಕೆ ಬಂದ ಯುವಕ, ನಿರ್ಮಾಣ ಹಂತದ ಕಟ್ಟಡದಲ್ಲೇ ಶವವಾಗಿ ಪತ್ತೆ!

ಫಯಾಜ್ ರೋಣ ಕುಟಂಬದವರು ಮಾ.26ರಂದು ರಾತ್ರಿ ಮಕ್ಕಾ ಮದೀನಾ ದರ್ಶನಕ್ಕೆ ತೆರಳಿದ್ದರು. ಏ.6ರ ರಾತ್ರಿ ವೇಳೆ ಮಕ್ಕಾ ಮದೀನಾ ಹತ್ತಿರ ರಸ್ತೆಯಲ್ಲಿ ಅವರು ಹೋಗುತ್ತಿದ್ದ ವಾಹನ ಅಪಘಾತಕ್ಕೀಡಾಗಿದೆ. ಈ ವೇಳೆ ಮೂವರು ಸ್ಥಳದಲ್ಲಿಯೇ ಮೃತಪಟ್ಟರೆ, ಉಳಿದ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಘಟನೆಯಿಂದ ಆಘಾತಗೊಂಡ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದು, ಸರ್ಕಾರ ಮಧ್ಯಸ್ಥಿಕೆವಹಿಸಿ ತಮ್ಮ ಕುಟುಂಬಸ್ಥರನ್ನು ಹಾಗೂ ಮೃತ ದೇಹಗಳನ್ನು ನಮಗೆ ತಲುಪಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಕಲಬುರಗಿಯಲ್ಲಿ ಕೂಲಿ ಕೆಲಸಕ್ಕೆ ತೆರಳಿದ್ದ ಇಬ್ಬರು ಮಹಿಳೆಯರ ಬರ್ಬರ ಕೊಲೆ: ಕಲಬುರಗಿ ಹೊರವಲಯದ ತಾವರಗೇರಾ ಕ್ರಾಸ್ ಬಳಿ ಕೂಲಿ ಕೆಲಸಕ್ಕೆ ಹೋಗಿದ್ದ ಇಬ್ಬರು ಮಹಿಳೆಯರ ಮೇಲೆ ಹಲ್ಲೆ ನಡೆಸಿ ಬಳಿಕ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರಕವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಶರಣಮ್ಮ(51), ಚಂದಮ್ಮ(53) ಹತ್ಯೆಯಾಗಿರುವ ದುರ್ದೈವಿಗಳು. ಕೊಲೆಯಾದವರಿಬ್ಬರೂ ತಾಜ್ ಸುಲ್ತಾನ್ ಪುರ ನಿವಾಸಿಗಳು. ನಗರದ ಗಂಜ್ ಪ್ರದೇಶದಿಂದ ಬಸ್‌ನಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದರು ಎನ್ನಲಾಗಿದೆ.

 ಉಗ್ರರಿಗೆ ಪಾಕಿಸ್ತಾನವೇ ಕೋಟೆ..ಭಾರತಕ್ಕೆ ತಪ್ಪದು ಬೇಟೆ: ದೇಶದ ವಿರುದ್ಧವೇ ಸ್ಕೆಚ್‌ ಹಾಕಿದ್ದವರು ಖಲ್ಲಾಸ್‌ !

ಕೂಲಿ ಕೆಲಸಕ್ಕೆ ಹೋಗಿದ್ದ ವೇಳೆ ಅಟ್ಯಾಕ್ ಮಾಡಿರುವ ದುಷ್ಕರ್ಮಿಗಳು. ಗಂಭೀರವಾಗಿ ಹಲ್ಲೆ ನಡೆಸಿ ಬಳಿಕ ತಲೆಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನೆ ಬಳಿಕ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಕಲಬುರಗಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

click me!