ಯಾವುದೇ ಆಮಿಷಕ್ಕೊಳಗಾಗಿ ಕಾಂಗ್ರೆಸ್‌ಗೆ ಬೆಂಬಲಿಸುತ್ತಿಲ್ಲ. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಳಸಾ-ಬಂಡೂರಿ ಅನುಷ್ಠಾನಕ್ಕೆ ಕಾರ್ಯೋನ್ಮುಖವಾಗಿದ್ದನ್ನು ಪರಿಗಣಿಸಿ ಬೆಂಬಲಿಸಲಾಗುತ್ತಿದೆ. ಕೇಂದ್ರ ಬಿಜೆಪಿ ಸಹಕರಿಸಿದ್ದರೆ ಈಗ ಕಾಮಗಾರಿ ನಡೆಯಬೇಕಿತ್ತು ಎಂದ ರೈತ ಸೇನಾ ಕರ್ನಾಟಕದ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ
ಧಾರವಾಡ(ಏ.07): ಕಳಸಾ-ಬಂಡೂರಿ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಹಾವೇರಿ ಹಾಗೂ ಬಾಗಲಕೋಟೆ ಲೋಕಸಭಾ ಕ್ಷೇತ್ರ ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ರೈತ ಸೇನಾ ಕರ್ನಾಟಕ ನಿರ್ಧರಿಸಿದೆ. ಶನಿವಾರ ಆಯೋಜಿಸಿದ್ದ ಮಹದಾಯಿ ಹೋರಾಟಗಾರರ ಸಭೆಯಲ್ಲಿ ರೈತ ಸೇನಾ ಕರ್ನಾಟಕದ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ತೀರ್ಮಾನ ಪ್ರಕಟಿಸಿದರು. ಬಿಜೆಪಿ ಸರ್ಕಾರ ಹೋರಾಟಕ್ಕೆ ಸ್ಪಂದಿಸಿದ ಹಿನ್ನೆಲೆ ಬಿಜೆಪಿ ಸೋಲಿಸುವುದು ಹೋರಾಟಗಾರರ ಗುರಿ ಎಂದರು.
ಆಮಿಷ ಏನಿಲ್ಲ:
undefined
ಯಾವುದೇ ಆಮಿಷಕ್ಕೊಳಗಾಗಿ ಕಾಂಗ್ರೆಸ್‌ಗೆ ಬೆಂಬಲಿಸುತ್ತಿಲ್ಲ. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಳಸಾ-ಬಂಡೂರಿ ಅನುಷ್ಠಾನಕ್ಕೆ ಕಾರ್ಯೋನ್ಮುಖವಾಗಿದ್ದನ್ನು ಪರಿಗಣಿಸಿ ಬೆಂಬಲಿಸಲಾಗುತ್ತಿದೆ. ಕೇಂದ್ರ ಬಿಜೆಪಿ ಸಹಕರಿಸಿದ್ದರೆ ಈಗ ಕಾಮಗಾರಿ ನಡೆಯಬೇಕಿತ್ತು ಎಂದರು.
ಪ್ರಧಾನಿ ಮೋದಿ ಮಹದಾಯಿ ಗ್ಯಾರಂಟಿ ಕೊಡಲಿ: ಕಾಂಗ್ರೆಸ್
ಯೋಜನೆ ಜಾರಿ ಮಾಡದೇ ಬಿಜೆಪಿ ಅನ್ಯಾಯ
ನರಗುಂದ: ಮಹದಾಯಿ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ ಯೋಜನೆ ಜಾರಿ ಮಾಡದೇ ಅನ್ಯಾಯ ಮಾಡಿದ ಹಿನ್ನೆಲೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮಹದಾಯಿ ಹೋರಾಟಗಾರರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಲಿದ್ದಾರೆ ಎಂದು ಕರ್ನಾಟಕ ಸಮತಾ ಪಕ್ಷದ ಅಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.
ಅವರು ಗುರುವಾರ ಪಟ್ಟಣದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯ ನಿರಂತರ ಹೋರಾಟ ವೇದಿಕೆಯಲ್ಲಿ ಮಾತನಾಡಿ, ಮಹದಾಯಿ ಯೋಜನೆ ಜಾರಿಗೆ ಸಾಕಷ್ಟು ಹೋರಾಟ ಮಾಡಿದರೂ ಸಹ ಬಿಜೆಪಿ ಸರ್ಕಾರ ಯೋಜನೆ ಜಾರಿ ಮಾಡದ ಹಿನ್ನೆಲೆ ರೈತ ಸೇನಾ ಸಂಘಟನೆ ಸದಸ್ಯರು ಮತ್ತು ಸಮತಾ ಪಕ್ಷದ ಕಾರ್ಯಕರ್ತರು ಲೋಕಸಭೆ ಚುನಾವಣೆಯಲ್ಲಿ ಧಾರವಾಡ, ಬಾಗಲಕೋಟೆ, ಬೆಳಗಾವಿ, ಹಾವೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲಿಸಲು ತೀರ್ಮಾನಿಸಿದ್ದಾರೆ ಎಂದರು.