ಹತ್ತು ವರ್ಷಗಳ ಅವಧಿಯಲ್ಲಿ ಪ್ರಧಾನಿ ಮೋದಿಯವರು ಸುಮ್ಮನೆ ಕುಳಿತಿಲ್ಲ. ದೇಶದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿ ಹಿಂದೆ ಆಗಲಾರದಂತಹ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಮೋದಿಯವರಿಗೆ ಕೊಟ್ಟ ನಮ್ಮ ಒಂದು ಮತ ಯಾವತ್ತೂ ವಿಫಲವಾಗಿಲ್ಲ. ಹತ್ತು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಜಗತ್ತಿಗೆ ಮಾದರಿಯಾಗುವಂತಹ ಹಲವಾರು ಕೆಲಸಗಳಾಗಿವೆ: ಚಕ್ರವರ್ತಿ ಸೂಲಿಬೆಲೆ
ಸವದತ್ತಿ(ಏ.07): ದೇಶಾದ್ಯಂತ ಮೋದಿ ಅಲೆ ಮೊಳಗುತ್ತಿದೆ. ವಿರೋಧ ಪಕ್ಷದವರ ಮಾತಿನಲ್ಲಿಯೂ ಮೋದಿಯವರ ಹೆಸರು ಕೇಳಿ ಬರುತ್ತಿರುವುದರಿಂದ ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗುವುದು ಖಚಿತ ಎಂದು ನಮೋ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಮೋ ಬ್ರಿಗೇಡ್ ವತಿಯಿಂದ ಆಯೋಜಿಸಿದ್ದ ನಮೋ ಭಾರತ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿಯವರು ಪ್ರಧಾನಿಯಾಗಬೇಕೆಂಬ ಉದ್ದೇಶ ಮಾತ್ರ ನಾವು ಹೊಂದಿದ್ದು, ಯಾವುದೇ ಆಸೆ ಆಮಿಷಗಳಿಗೆ ನಮೋ ಬ್ರಿಗೇಡ್ ಯುವಕರು ಕೈಚಾಚುವವರಲ್ಲ ಎಂದು ಹೇಳಿದರು.
ಒಂದೂ ರಜೆ ಪಡೆಯದ ಪ್ರಧಾನ ಸೇವಕ ಮೋದಿ: ಚಕ್ರವರ್ತಿ ಸೂಲಿಬೆಲೆ
ಹತ್ತು ವರ್ಷಗಳ ಅವಧಿಯಲ್ಲಿ ಪ್ರಧಾನಿ ಮೋದಿಯವರು ಸುಮ್ಮನೆ ಕುಳಿತಿಲ್ಲ. ದೇಶದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿ ಹಿಂದೆ ಆಗಲಾರದಂತಹ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಮೋದಿಯವರಿಗೆ ಕೊಟ್ಟ ನಮ್ಮ ಒಂದು ಮತ ಯಾವತ್ತೂ ವಿಫಲವಾಗಿಲ್ಲ. ಹತ್ತು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಜಗತ್ತಿಗೆ ಮಾದರಿಯಾಗುವಂತಹ ಹಲವಾರು ಕೆಲಸಗಳಾಗಿವೆ ಎಂದರು.
ಸವದತ್ತಿಯ ನಮೋ ಬ್ರಿಗೇಡ್ ಸಂಘಟನೆಯಿಂದ ಚಕ್ರವರ್ತಿ ಸೂಲಿಬೆಲೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿರೂಪಾಕ್ಷ ಮಾಮನಿ, ರತ್ನಾ ಮಾಮನಿ, ಈರಣ್ಣ ಚಂದರಗಿ, ಜಗದೀಶ ಕೌಜಗೇರಿ, ಸೌರವ ಚೋಪ್ರಾ, ಜಗದೀಶ ಶಿಂತ್ರಿ, ಬಸವರಾಜ ಕಾರದಗಿ, ಶೇಖರ ಗೋಕಾವಿ, ರಾಜು ನಿಡವಣಿ, ಸಂಜೀವ ನವಲಗುಂದ, ಡಾ.ನಯನಾ ಬಸ್ಮೆ, ಬಿ.ವಿ. ಮಲಗೌಡರ, ಶಂಕರ ವಣ್ಣೂರ, ರಾಜು ಸಾಲಿಮಠ, ಸಂಗಮೇಶ ಕಳ್ಳಿಮಠ, ಪ್ರಶಾಂತ ಬರಗಿ, ಕಲ್ಮೇಶ ನೀಲಿಶೆಟ್ಟಿ, ಗಿರೀಶ ಬೀಳಗಿ, ವೀರು ಗುಡೆನ್ನವರ ಹಾಗೂ ನಮೋ ಬ್ರಿಗೇಡ್ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು. ರಾಜು ಬದಾಮಿ ನಿರೂಪಿಸಿ ವಂದಿಸಿದರು.
ಬಲಿಷ್ಠ ಭಾರತಕ್ಕಾಗಿ 400 ಸೀಟು ಗೆಲ್ಲಿಸಿಕೊಡಿ
ಬೈಲಹೊಂಗಲ: ಜಾತಿ, ಮತ ಲೆಕ್ಕಿಸದೆ ದೇಶವನ್ನು ಸಮೃದ್ಧಿಯತ್ತ ಕೊಂಡೊಯ್ಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲೋಕಸಭೆ ಚುನಾವಣೆಯಲ್ಲಿ 400 ಸೀಟು ಗೆಲ್ಲಿಸಿ ಕೊಡುವುದರ ಮೂಲಕ ಭಾರತವನ್ನು ಇನ್ನಷ್ಟು ಬಲಿಷ್ಠವಾಗಿ ಮಾಡಲು ನಾವೆಲ್ಲ ಕೈಜೋಡಿಸೋಣ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಮುರಗೋಡ ನಮೋ ಬ್ರಿಗೇಡ್ ವತಿಯಿಂದ ಹಮ್ಮಿಕೊಂಡಿದ್ದ ನಮೋ ಭಾರತ ಬಹಿರಂಗ ಸಮಾವೇಶ ಉನ್ನುದ್ದೇಶಿಸಿ ಮಾತನಾಡಿ, ಹತ್ತು ವರ್ಷಗಳಲ್ಲಿ ಭಾರತ ಸಾಕಷ್ಟು ಬದಲಾವಣೆ ಕಂಡಿದೆ. ಹತ್ತು ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರದ ವೇಳೆ ನಮ್ಮ ಸೈನಿಕರ ಜೀವಕ್ಕೆ ಬೆಲೆಯೇ ಇರಲಿಲ್ಲ. ಮೋದಿಜಿಯ 10 ವರ್ಷದ ಆಡಳಿತದಲ್ಲಿ ಸೇನೆಯಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ದೇಶದ ಅನೇಕ ಕಡೆಗಳಲ್ಲಿ ಭಯೋತ್ಪಾದಕರ ಅಟ್ಟಹಾಸ ಹೆಚ್ಚಿತ್ತು. ಆದರೆ, 10 ವರ್ಷದಲ್ಲಿ ಭಯೋತ್ಪಾದಕರ ಹುಟ್ಟಡಗಿಸಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
Chakravarti Sulibele: ಚುನಾವಣೆ ಸ್ಪರ್ಧೆಗೆ ಅವಕಾಶ ಸಿಕ್ಕರೆ ವಿರೋಧ ಇಲ್ಲ: ಚಿಂತಕ ಚಕ್ರವರ್ತಿ ಸೂಲಿಬೆಲೆ
ಜಗತ್ತಿನಲ್ಲಿ ಮೊಟ್ಟಮೊದಲ ಬಾರಿಗೆ ಡಿಜಿಟಲ್ ಇಂಡಿಯಾ ಮೂಲಕ ಸಾಮಾನ್ಯ ಜನರು ಕ್ಯೂ ಆರ್ ಕೋಡ್ ಬಳಸಿ ವ್ಯಾಪಾರ ವಹಿವಾಟು ನಡೆಸುತ್ತಿರುವುದು ಅವರ ಪ್ರಯತ್ನದ ಫಲವೇ ಆಗಿದೆ. ಮತ್ತೊಮ್ಮೆ ನಾವೆಲ್ಲರೂ ಬಲಿಷ್ಠ ಭಾರತ ನಿರ್ಮಾಣಕ್ಕೋಸ್ಕರ ಬಿಜೆಪಿಗೆ ಹಾಕಬೇಕು ಎಂದರು.
ಸಂಕಲ್ಪ ಶೆಟ್ಟರ, ಮಾಜಿ ಶಾಸಕ ಜಗದೀಶ ಮೆಟಗುಡ್ಡ, ವಿಜಯ ಮೆಟಗುಡ್ಡ, ಬಿಜೆಪಿ ಮಂಡಲ ಅಧ್ಯಕ್ಷ ಗುರುಪಾದ ಕಳ್ಳಿ, ತಾಲೂಕು ಪ್ರಧಾನ ಕಾರ್ಯದರ್ಶಿ ಲಕ್ಕಪ್ಪ ಕಾರಗಿ, ಗುರು ಮೆಟಗುಡ್ಡ, ಸುನಿಲ ಮರಕುಂಬಿ, ಮಹಾಂತೇಶ ಆಳಾಜ, ಸುರೇಶ ಮ್ಯಾಕಲ್, ರಾಘವೇಂದ್ರ ಕುಮಚಿ, ಸದಾಶಿವಗೌಡ ಪಾಟೀಲ, ಚಿದಂಬರ ಕುಮುಚಿ, ಬಸವರಾಜ ಆಡಿನ ಹಾಗೂ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.