ಕೋವಿಡ್ ರೋಗಿಗಳಿಗಾಗಿ ಹಜ್ ಭವನವೀಗ ಆಕ್ಸಿಜನ್ ಸೆಂಟರ್

Suvarna News   | Asianet News
Published : May 15, 2021, 02:42 PM ISTUpdated : May 17, 2021, 09:21 AM IST
ಕೋವಿಡ್ ರೋಗಿಗಳಿಗಾಗಿ ಹಜ್ ಭವನವೀಗ ಆಕ್ಸಿಜನ್ ಸೆಂಟರ್

ಸಾರಾಂಶ

ಹಜ್ ಭವನವೀಗ ಆಕ್ಸಿಜನ್ ಸೆಂಟರ್‌ 100 ಬೆಡ್‌ಗಳಿಗೆ ಹಜ್ ಭವನದಲ್ಲಿ ಆಕ್ಸಿಜನ್ ವ್ಯವಸ್ಥೆ  ನಾಳೆಯಿಂದಲೇ ಇದು ಕಾರ್ಯಾರಂಭ -ಸಚಿವ ಆರ್‌ ಅಶೋಕ್ ಮಾಹಿತಿ 

ಬೆಂಗಳೂರು (ಮೇ.15): ಕಳೆದ ಬಾರಿ ಕೋವಿಡ್ ಕೇರ್ ಸೆಂಟರ್ ಮಾಡಲಾಗಿದ್ದ ಹಜ್ ಭವನವನ್ನು ಬದಲಾವಣೆ ಮಾಡಿ ಆಕ್ಸಿಜನ್ ಸೆಂಟರ್ ಮಾಡಲಾಗಿದೆ.   ಈ ಭಾಗದ ಜನಗಳಿಗೆ ನೂರು ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಿದ್ದೇವೆ ಎಂದು ಸಚಿವ ಆರ್‌ ಅಶೋಕ್ ಹೇಳಿದರು. 

ಬೆಂಗಳೂರಿನಲ್ಲಿಂದು ಮಾತನಾಡಿದ ಸಚಿವ ಆರ್‌ ಅಶೋಕ್, ಕೋವಿಡ್ ಕೇರ್ ಸೆಂಟರ್ ಆಗಿದ್ದ ಹಜ್ ಭವನ ಇದೀಗ ಆಕ್ಸಿಜನ್ ಸೆಂಟರ್ ಆಗಿದೆ. ನಾಳೆಯಿಂದಲೇ ಇದು ಕಾರ್ಯಾರಂಭ ಮಾಡಲಿದೆ. ಅಧಿಕಾರಿಗಳು ಕಳೆದ ಹತ್ತು ದಿನಗಳಿಂದ ಆಕ್ಸಿಜನ್‌ ಸೆಂಟರ್‌ಗಾಗಿ ಶ್ರಮ ವಹಿಸುತ್ತಿದ್ದಾರೆ. ರೋಗಿಗಳಿಗೆ ಒಳ್ಳೆಯ ಊಟದ ವ್ಯವಸ್ಥೆ ಕೂಡ ನಾವು ಮಾಡಿದ್ದೇವೆ ಎಂದು ಅಶೋಕ್ ಹೇಳಿದರು.

ಬೆಂಗಳೂರಿನ 3 ಕಡೆ ಕೋವಿಡ್ ಕೇರ್ ಸೆಂಟರ್ ಶುರು ...

ಹಜ್ ಭವನದಲ್ಲಿ ಇಪ್ಪತ್ನಾಲ್ಕು ಗಂಟೆ ವೈದ್ಯರ ವ್ಯವಸ್ಥೆ ಇರುತ್ತದೆ.  ಲಾಕ್ ಡೌನ್ ನಂತರ ಕೇಸ್ ಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಮೂರನೇ ಅಲೆಗೆ ಈಗಿನಿಂದಲೇ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ.  ಮಕ್ಕಳಿಗೆ ಸೋಂಕು ತಗುಲಿದರೆ ಅವರ ತಂದೆ ತಾಯಿ ಕೂಡಾ ಆಸ್ಪತ್ರೆಗೆ ಬರುತ್ತಾರೆ. ಅವರೂ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಕೊರೋನಾ ತುರ್ತು ಚಿಕಿತ್ಸೆಗಾಗಿ 'ಆಕ್ಸಿಬಸ್'ಗೆ ಸಿಎಂ ಬಿಎಸ್‌ವೈ ಚಾಲನೆ ..

24 ರವರೆಗೆ ಲಾಕ್ ಡೌನ್ ಇರುತ್ತದೆ.  ನಂತರ ಮುಂದುವರೆಸಬೇಕಾ ಬೇಡವೇ ಎಂಬ ಬಗ್ಗೆ ಸಭೆ ಮಾಡಿ  ಚರ್ಚೆ ಮಾಡುತ್ತೇವೆ. ತಜ್ಞರ ಅಭಿಪ್ರಾಯ ಕೂಡಾ ತೆಗೆದುಕೊಳ್ಳುತ್ತೇವೆ. ಬಳಿಕವೆ ನಿರ್ಧಾರ ಮಾಡುತ್ತೇವೆ ಎಂದು ಅಶೋಕ್ ಹೇಳಿದರು. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು