ಚಾಮರಾಜನಗರ ದುರಂತ : ಅನಾಥಳಾಗಿದ್ದ ಬಾಲಕಿಗೆ ಮತ್ತೆ ಸಿಕ್ಕ ಪೋಷಕರ ಮಮಕಾರ

By Suvarna News  |  First Published May 15, 2021, 1:12 PM IST
  • ಕೊರೋನಾದಿಂದ ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳು
  • ಚಾಮರಾಜನಗರ ಜಿಲ್ಲಾಸ್ಪತ್ರೆಯ ಆಕ್ಸಿಜನ್ ದುರಂತದಲ್ಲಿ ಪೋಷಕರನ್ನು ಕಳೆದುಕೊಂಡ ಬಾಲಕಿ
  • ಮತ್ತೆ ಮಮತೆಯ ಮಡಿಲು ಸೇರಿದ ಮಗಳು

ಬೆಂಗಳೂರು (ಮೇ.15): ಕೊರೋನಾ ಮಹಾಮಾರಿ ಎಲ್ಲೆಡೆ ತನ್ನ ಅಟ್ಟಹಾಸ ಮೆರೆಯುತ್ತಿದೆ. ಅನೇಕ ಸಾವು ನೋವುಗಳಾಗುತ್ತಿದೆ.  ಈ ವೇಳೆ ಅನೇಕ ಮಕ್ಕಳು ಪೋಷಕರನ್ನು ಕಳೆದುಕೊಂಡು ಅನಾಥರಾದರು. 

ಅದೇ ರೀತಿ ಮೇ 2 ಹಾಗೂ 3 ರಂದು ಚಾಮರಾಜನಗರದಲ್ಲೊಂದು ದುರಂತ ಸಂಭವಿಸಿತು. ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತದಿಂದ 24 ಮಂದಿ ಪ್ರಾಣ ಕಳೆದುಕೊಂಡರು. ಇದರಲ್ಲಿ 5 ವರ್ಷದ ಪುಟ್ಟ ಬಾಲಕಿ  ತನ್ನ ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥಳಾದಳು. ಆದರೀಗ ಆಕೆಗೆ ಮತ್ತೆ  ಪೋಷಕರ ಮಮಕಾರ ಮರಳಿ ಸಿಕ್ಕಿದೆ. 

Tap to resize

Latest Videos

undefined

ಮಕ್ಕಳಿಲ್ಲದ ಆಕೆಯ ಚಿಕ್ಕಮ್ಮ ಆಕೆಯನ್ನು ಈಗ ದತ್ತು ಪಡೆದುಕೊಳ್ಳಲು ಮುಂದಾಗಿದ್ದಾರೆ.  ಮಹಾಮಾರಿಯಿಂದ ಅಪ್ಪ-ಅಮ್ಮನನ್ನು ಕಳೆದುಕೊಂಡ ಆಕೆಯನ್ನು ಸಾಕಿ ಸಲಹಲು ನಾನು ಯಾವುದೇ ಗೊಂದಲ ಇಲ್ಲದೇ ಮುಂದಾದೆ ಎಂದು ರೈತ ಕುಟುಂಬದ ಆಕೆ ಹೇಳಿದ್ದಾರೆ. 

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ‌ ಮತ್ತೊಂದು ಎಡವಟ್ಟು ...

ಇನ್ನು ಆಕೆಯನ್ನು ದತ್ತು ಪಡೆಯಲು ಮಕ್ಕಳ ಕಲ್ಯಾಣ ಇಲಾಖೆ ಮಾರ್ಗಸೂಚಿಯಂತೆ Juvenile Justice Act 2015ರ  ನಿಯಮಗಳನ್ನು ಪಾಲಿಸಲು ಸೂಚಿಸಿದ್ದು, ಮಗುವಿಗಾಗಿ ತಾವು ಯಾವುದೇ ರೀತಿಯ ರಿಸ್ಕ್‌ ಪಡೆಯಲು ಸಿದ್ಧರಿರುವುದಾಗಿ ಚಿಕ್ಕಮ್ಮ ಹೇಳಿದ್ದಾರೆ. ಅಲ್ಲದೇ ಬೇರೆಯವರಿಗೆ ಆಕೆಯನ್ನು ಖಂಡಿತಾ ದತ್ತು ನಿಡುವುದಿಲ್ಲ. ನಾನೇ ಆಕೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ ಎಂದಿದ್ದಾರೆ. 

ಸದ್ಯ ಮಗು ಚಿಕ್ಕಮ್ಮನ ಜೊತೆ ಹೊಂದಿಕೊಂಡಿದ್ದು 3 ತಿಂಗಳ ಪರಿವೀಕ್ಷಣೆಯ ನಂತರ ದತ್ತು ನೀಡುವ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ. 

ತಂದೆ - ತಾಯಿ ಬಲಿ ಪಡೆದ ಕೊರೋನಾ : ಅನಾಥವಾದ ಪುಟ್ಟ ಮಗು ...

 ಇನ್ನು ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಇಲಾಖೆ  ಮುಖ್ಯಸ್ಥ ಆಂಟೋನಿ ಸೆಬಾಸ್ಟಿಯನ್  ಹೇಳುವಂತೆ ರಾಜ್ಯದಲ್ಲಿ ಅನೇಕ ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದು ಲಾಕ್‌ಡೌನ್ ಪ್ರಕ್ರಿಯೆ, ಕೋವಿಡ್ ಪ್ಯಾಂಡಮಿಕ್‌ನಿಂದ  ತಕ್ಷಣಕ್ಕೆ ನೆರವಾಗುವುದು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಕೊರೋನಾ ಮಹಾಮಾರಿಯಿಂದ ಅನೇಕ ಕುಟುಂಬಗಳಲ್ಲಿ ಹೆಚ್ಚು ಸಾವುಗಳಾಗಿವೆ.  ಅನೇಕ ಮಕ್ಕಳು ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ದತ್ತು ಪ್ರಕ್ರಿಯೆಯಲ್ಲಿ ಯಾರೇ ಆದರೂ ನಿಯಮಾವಳಿಗಳ ಅಡಿಯಲ್ಲಿಯೇ ಮುಂದುವರಿಯಬೇಕಾಗುತ್ತದೆ. ರಕ್ತ ಸಂಬಂಧಿಗಳೂ ಸಹ ಹಾಗೆಯೆ ದತ್ತು ಪಡೆಯುವಂತಿಲ್ಲ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!