ಪೊಲೀಸರೇ ಗಂಡನನ್ನು ಕೊಂದ್ರು, ಮಕ್ಕಳನ್ನ ಎದೆಗವಚಿಕೊಂಡು ವಾಹನದ ಹಿಂದೆ ಓಡಿದೆ: ಶೈನಾಜ್ ಬೇಗಂ

Published : Aug 05, 2026, 07:55 AM IST
Hagaribommanahalli

ಸಾರಾಂಶ

ಕುಡಿದು ಗಲಾಟೆ ಮಾಡುತ್ತಿದ್ದ ಪತಿಗೆ ಬುದ್ಧಿ ಹೇಳಲು ಠಾಣೆಗೆ ಕರೆತಂದ ಪತ್ನಿ ಈಗ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಹಗರಿಬೊಮ್ಮನಹಳ್ಳಿ ಠಾಣೆಯಲ್ಲಿ ಪೊಲೀಸರ ಅಮಾನುಷ ಹಲ್ಲೆಯಿಂದಲೇ ತನ್ನ ಪತಿ ಖಲೀಲ್ ಸಾಬ್ ಸಾವನ್ನಪ್ಪಿದ್ದು, ಇದು ಲಾಕಪ್ ಸಾವು ಎಂದು ಪತ್ನಿ ಶೈನಾಜ್ ಬೇಗಂ ಆರೋಪಿಸಿದ್ದಾರೆ. ನ್ಯಾಯ ಸಿಗದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ್ದು, ಪ್ರಕರಣಕ್ಕೆ ರಾಜಕೀಯ ಮುಖಂಡರು ಧ್ವನಿಗೂಡಿಸಿದ್ದಾರೆ.

ವಿಜಯನಗರ: ಕುಡಿದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದಾರೆ, ಬುದ್ಧಿ ಹೇಳಿ ಎಂದು ನನ್ನ ಪತಿಯನ್ನು ಠಾಣೆಗೆ ಕರೆ ತಂದರೆ ನನ್ನ ಪತಿಯ ಮೇಲೆ ರಾಘವೇಂದ್ರ ಮತ್ತು ವೆಂಕಟೇಶ್ ಎಂಬ ಇಬ್ಬರು ಪೊಲೀಸರು ಅಮಾನುಷವಾಗಿ ಹಲ್ಲೆ ಮಾಡಿ ಹತ್ಯೆಗೈದರು. ಪತಿಯನ್ನು ಹತ್ಯೆಗೈದಿರುವ ಪೊಲೀಸರಿಗೆ ಗಲ್ಲು ಶಿಕ್ಷೆಯಾಗಲಿ ಎಂದು ಲಾಕಪ್ ಸಾವಿಗೀಡಾದ ಖಲೀಲ್ ಸಾಬ್ ಪತ್ನಿ ಶೈನಾಜ್ ಬೇಗಂ ಆಗ್ರಹಿಸಿದರು.

ಕಟ್ಟಡ ಕಾರ್ಮಿಕ ಖಲೀಲ್ ಸಾಬ್ ಲಾಕಪ್ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಹರಪನಹಳ್ಳಿಯ ಅಂಜುಮನ್ ಕಮಿಟಿಯ ಅಧ್ಯಕ್ಷ ಹಾಗೂ ಮಾಜಿ ಸಚಿವ ಎನ್.ಎಂ. ನಬಿ ಅವರ ಪುತ್ರ ಎನ್.ಎಂ. ನೂರ್ ಅಹಮದ್ ಮಂಗಳವಾರ ಪಟ್ಟಣದ ಮೆಹಬೂಬ್ ನಗರದ ಅವರ ನಿವಾಸಕ್ಕೆ ಸಾಂತ್ವನ ಹೇಳಲೆಂದು ತೆರಳಿದ್ದಾಗ ಖಲೀಲಸಾಬ ಅವರ ಪತ್ನಿ ಅಕ್ಷರಶಃ ಪೊಲೀಸರ ವಿರುದ್ಧ ಕೆಂಡ ಕಾರಿದರು.

ಮಕ್ಕಳಿಬ್ಬರನ್ನೂ ಎದೆಗವಚಿಕೊಂಡು ವಾಹನದ ಹಿಂದೆ ಓಡಿದೆ

ಠಾಣೆಯಲ್ಲಿಯೇ ಸತ್ತಿದ್ದರೂ ಚಿಕಿತ್ಸೆ ಕೊಡಿಸಬೇಕು ಎಂದು ನನ್ನ ಪತಿಯನ್ನು ಸರಕು ಸಾಗಾಣಿಕೆ ವಾಹನದಲ್ಲಿ ನಾಯಿಯಂತೆ ಒಯ್ದರು. ಸತ್ತಿರುವ ನನ್ನ ಪತಿಯನ್ನು ಯಾವುದಾದರೂ ಕಾಲುವೆಯಲ್ಲಿ ಎಸೆಯುತ್ತಾರೆ ಎಂಬ ಆತಂಕದಲ್ಲಿಯೇ ನಾನು ನನ್ನ ಮಕ್ಕಳಿಬ್ಬರನ್ನೂ ಎದೆಗವಚಿಕೊಂಡು ವಾಹನದ ಹಿಂದೆ ಓಡಿದೆ ಎಂದು ಗದ್ಗದಿತರಾದರು.

ಆಸ್ಪತ್ರೆಯಲ್ಲಿ ನನ್ನ ಪತಿಯ ಬಾಯಿಯಿಂದ ಮತ್ತು ಕಿವಿಯಿಂದ ರಕ್ತ ಬಂದಿದ್ದು ಗಮನಿಸಿದ್ದೇನೆ. ಪತಿಯ ಸಾವು ಠಾಣೆಯಲ್ಲಿ ಪೊಲೀಸರಿಂದಲೇ ಆಗಿದೆ. ನನಗೆ ನ್ಯಾಯ ಬೇಕು. ಅದನ್ನಷ್ಟೇ ಕೇಳೋದು. ನನ್ನ ಬದುಕನ್ನು ನಾನು ಕಟ್ಟಿಕೊಳ್ಳುತ್ತೇನೆ, ನನಗೆ ಯಾವ ಪರಿಹಾರವೂ ಬೇಡ. ನನ್ನ ಪತಿಯನ್ನು ಕೊಂದ ಇಬ್ಬರೂ ಪೊಲೀಸರಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಪೊಲೀಸರು ಹೇಳುತ್ತಿರುವುದು ಕಟ್ಟುಕತೆ

ನನ್ನ ಪತಿ ಕಟ್ಟಡ ಕಾರ್ಮಿಕರಾಗಿದ್ದರು. ಯಾವಾಗಲೂ ಆರೋಗ್ಯದಿಂದಿದ್ದರು. ಮೂತ್ರ ವಿಸರ್ಜನೆಗೆಂದು ಹೋದಾಗ ಜಾರಿ ಬಿದ್ದು ತಲೆಗೆ ಪೆಟ್ಟಾಗಿ ಫಿಟ್ಸ್ ಬಂದು ತೀರಿಕೊಂಡಿದ್ದಾರೆ ಎಂದು ಪೊಲೀಸರು ಹೇಳುತ್ತಿರುವುದು ಕಟ್ಟುಕತೆ. ನ್ಯಾಯ ಸಿಗದಿದ್ದರೆ ಠಾಣೆಯ ಮುಂದೆ ಧರಣಿ ನಡೆಸುವುದಾಗಿ ಎಂದು ಎಚ್ಚರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನೂರ್ ಅಹಮದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಘಟನೆ ನಡೆದು ನಾಲ್ಕು ದಿನವಾದರೂ ಮರಣೋತ್ತರ ಪರಿಕ್ಷಾ ವರದಿ ಮತ್ತು ಸಿಸಿ ಟಿವಿ ಫುಟೇಜ್‌ಗಳನ್ನು ಬಹಿರಂಗಪಡಿಸುತ್ತಿಲ್ಲ. ಪ್ರಕರಣ ಕುರಿತಂತೆ ಈ ವರೆಗೂ ಗಂಭೀರ ತನಿಖೆ ನಡೆದಿಲ್ಲ ಎಂದು ಆರೋಪಿಸಿದರು.

ಇದನ್ನೂ ಓದಿ: ಇನ್ಮುಂದೆ ವಿಮೆ ಇಲ್ಲದಿದ್ರೆ ಪೆಟ್ರೋಲ್ ಸಿಗೋಲ್ಲ; ಪ್ರಾಯೋಗಿಕ ಜಾರಿಗೆ ಸುಪ್ರೀಂ ನಿರ್ದೇಶನ, ಹೊಸ ವಾಹನ ಖರೀದಿಸಿದವರು ಈ ವಿಷ್ಯ ತಿಳಿದಿರಲಿ!

ಖಲೀಲ್ ಸಾಬ ಕುಟುಂಬದವರ ಕಾನೂನು ಹೋರಾಟಕ್ಕೆ ಸಾಥ್

ಪ್ರಕರಣದ ಸತ್ಯಾಸತ್ಯತೆ ಬಹಿರಂಗವಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ಲಾಕಪ್ ಸಾವಿಗೀಡಾಗಿರುವ ಖಲೀಲ್ ಸಾಬ ಕುಟುಂಬದವರ ಕಾನೂನು ಹೋರಾಟಕ್ಕೂ ಜೊತೆಯಾಗುತ್ತೇನೆ. ಎರಡು ದಿನಗಳಲ್ಲಿ ತನಿಖೆಯ ಕುರಿತು ಮಾಹಿತಿ ಒದಗಿಸದಿದ್ದರೆ ಕುಟುಂಬದವರ ಜೊತೆ ಗೃಹಮಂತ್ರಿ ಪ್ರಿಯಾಂಕ ಖರ್ಗೆ ಅವರ ಬಳಿ ತೆರಳಿ ಪಟ್ಟಣದ ಪೊಲೀಸ್ ವೈಫಲ್ಯ ಕುರಿತು ದೂರು ದಾಖಲಿಸುವುದಾಗಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ನೆಲ್ಲು ಇಸ್ಮಾಯಿಲ್, ನ್ಯಾಯಬೆಲೆ ಇಸ್ಮಾಯಿಲ್, ಮುಖಂಡರಾದ ಬಶೀರ್ ಅಹಮದ್, ಎಲ್ಲಪ್ಪ ಸೇರಿದಂತೆ ಕುಟುಂಬದ ಸದಸ್ಯರು ಹಾಗೂ ಮುಸ್ಲೀಂ ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ : ರಾಯಚೂರು: ಬುಲೆಟ್ ಮೇಲೆ ಹೊರಟಿದ್ದವನ ಮೇಲೆ ದುಷ್ಕರ್ಮಿಗಳಿಂದ ಭೀಕರ ಅಟ್ಯಾಕ್! ನಡುರಸ್ತೆಯಲ್ಲೇ ಉಸಿರು ಚೆಲ್ಲಿದ ಯುವಕ!

PREV
Read more Articles on
click me!

Recommended Stories

ಬರ-ಅತಿವೃಷ್ಟಿ ಅಧ್ಯಯನ: 31 ಜಿಲ್ಲೆಗಳಿಗೆ ಸಚಿವರ ನೇಮಕಗೊಳಿಸಿ ಸಿಎಂ ಆದೇಶ; ನಿಮ್ಮ ಜಿಲ್ಲೆಗೆ ಯಾವ ಸಚಿವರು?
Hubballi: ಆ್ಯಪ್ ಆಧಾರಿತ ಆಟೋ ಸೇವೆ ಸ್ಥಗಿತಗೊಳಿಸುವಂತೆ ಹುಬ್ಬಳ್ಳಿಯಲ್ಲಿ ಪ್ರತಿಭಟನೆ