CM ಡಿಕೆ ಶಿವಕುಮಾರ್‌ಗೆ MB ಪಾಟೀಲರನ್ನು ಸಚಿವರಾಗಿಸೋ ಮನಸ್ಸಿರಲಿಲ್ಲ: ಶಾಸಕ ಯತ್ನಾಳ

Published : Aug 05, 2026, 07:33 AM IST
BR Patil MB Patil

ಸಾರಾಂಶ

ಡಿ.ಕೆ. ಶಿವಕುಮಾರ್‌ಗೆ ಎಂ.ಬಿ.ಪಾಟೀಲರನ್ನು ಸಚಿವರನ್ನಾಗಿಸುವ ಮನಸ್ಸಿರಲಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ಕಾಂಗ್ರೆಸ್ ಶಾಸಕರ ನಡುವಿನ ಜಗಳ ತಾತ್ಕಾಲಿಕ ಎಂದಿರುವ ಅವರು, ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆಯ ಗೊಂದಲಗಳ ಬಗ್ಗೆಯೂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ವಿಜಯಪುರ: ಡಿ.ಕೆ. ಶಿವಕುಮಾರಗೆ ಎಂ.ಬಿ.ಪಾಟೀಲರನ್ನು ಸಚಿವರನ್ನಾಗಿ ಮಾಡುವ ಮನಸ್ಸಿರಲಿಲ್ಲ. ಎಂ.ಬಿ.ಪಾಟೀಲ ಪ್ರಭಾವಿ ಆಗಬಾರದೆಂದು ಈ ರೀತಿ ಮಾಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಕೈಗಾರಿಕಾ ಸಚಿವ ಎಂ.ಬಿ.ಪಾಟೀಲರಿಂದಲೇ ನಮಗೆ ಸಚಿವ ಸ್ಥಾನ ತಪ್ಪಿದೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹಾಗೂ ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ ಆರೋಪಿಸಿದ ವಿಚಾರವಾಗಿ ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದನ್ನೆಲ್ಲ ಸಿಎಂ ಡಿ.ಕೆ.ಶಿವಕುಮಾರ್‌ ಅವರೇ ಹಚ್ಚಿರುತ್ತಾರೆ. ವಾಸ್ತವದಲ್ಲಿ ಯಾರಿಗೆ ಬೇಡ ಎಂದಿದ್ದಾರೆ?. ನಿನ್ನನ್ನು ನಾ ಸೋಲಿಸುವೆ, ನೋಡಿಕೊಳ್ಳುತ್ತೇನೆ ಎಂಬುದು ಶಾಸಕರ ಕೈಯಲ್ಲಿ ಇಲ್ಲ. ಸೋಲಿಸುವುದು, ಗೆಲ್ಲಿಸುವುದು ಜನರ ಕೈಯಲ್ಲಿದೆ. ಸೋಲಿಸುತ್ತೇನೆಂದು ಸವಾಲು ಹಾಕುವುದು ಜನರ ಕೈಯಲ್ಲಿದೆ ಎಂದರು.

ಎಂ.ಬಿ. ಪಾಟೀಲ, ಗೌಡರು, ಪಾಟೀಲರು ನಗುನಗುತ್ತಾ ಜೊತೆಗಿರುತ್ತಾರೆ

ನಮ್ಮ ಮಧ್ಯೆ ವಾರ್‌ ಡಿಕ್ಲೇರ್‌ ಆಗಿದೆ ಎಂದು ಎಂ.ಬಿ.ಪಾಟೀಲ ವಿರುದ್ಧ ಸಿಡಿದಿರುವ ಕೈ ಶಾಸಕ ಯಶವಂತರಾಯಗೌಡ ಪಾಟೀಲರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ವಾರ್‌ ಮಾಡೋಕೆ ಇದೇನು ಇಂಡಿಯಾ ಪಾಕಿಸ್ತಾನವಾ ಎಂದು ಪ್ರಶ್ನಿಸಿದರು. ಶಾಸಕರು ಶಾಸಕರ ಮೇಲೆ ವಾರ್‌ ಮಾಡಲು ಆಗಲ್ಲ, ಎಂ.ಬಿ.ಪಾಟೀಲರು ಬಬಲೇಶ್ವರದಲ್ಲಿ, ಯಶವಂತರಾಯಗೌಡ ಇಂಡಿಯಲ್ಲಿ. ಕಳೆದ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಶಿವಾನಂದ ಪಾಟೀಲ, ಎಂ.ಬಿ. ಪಾಟೀಲ ಹಾಗೂ ನಮ್ಮ ಪಕ್ಷದವರೇ ವಾರ್‌ ಮಾಡಿದ್ದರು. ಆದರೂ ನಾನು ಆಯ್ಕೆಯಾಗಿ ಬಂದೆ. ಏನೇ ವಾರ್‌ ಇದ್ದರೂ ಅದು ಜನರ ಕೈಯಲ್ಲಿರುತ್ತದೆ. ಸದ್ಯ ಇವೆಲ್ಲ ಕೇವಲ ಬೆದರಿಕೆ. ಕೆಲ ದಿನಗಳ ನಂತರ ಅದೇ ಎಂ.ಬಿ. ಪಾಟೀಲ, ಗೌಡರು, ಪಾಟೀಲರು ನಗುನಗುತ್ತಾ ಜೊತೆಗಿರುತ್ತಾರೆ ಎಂದು ಹೇಳಿದರು.

ಪೊಲೀಸ್ ಕಾನ್ಸಟೇಬಲ್‌ ಪರೀಕ್ಷೆಯಲ್ಲಿ ನಡೆದ ಗೊಂದಲ ವಿಚಾರವಾಗಿ ಮಾತನಾಡಿ, ಕಾನ್ಸಟೇಬಲ್‌ ಪರೀಕ್ಷೆಗಳನ್ನು ಗೊಂದಲ ಮಾಡಿದ್ದಾರೆ. ಪಿಎಸ್ಐ ನೇಮಕಾತಿ ಪರೀಕ್ಷೆಯ ಕುರಿತು ಇದೇ ಪ್ರಿಯಾಂಕ ಖರ್ಗೆ ಮಾತನಾಡುತ್ತಿದ್ದರು. ಈಗ ಪಿಸಿ ಪರೀಕ್ಷೆ ಕುರಿತು ತನಿಖೆ ಮಾಡಿಸಲಿ ಎಂದು ಯತ್ನಾಳ ಸವಾಲು ಹಾಕಿದರು. ಪಿಎಸ್‌ಐ ಪರೀಕ್ಷೆಯ ಕುರಿತು ವಿಧಾನಸಭೆಯಲ್ಲಿ ಮಾತನಾಡಿದರು, ಈಗ ಈ ಕುರಿತು ಮಾತನಾಡಲಿ, ಪೊಲೀಸ್ ನೇಮಕಾತಿ ಪಾರದರ್ಶಕವಾಗಿ ನಡೆದು ಅರ್ಹರು ನೇಮಕವಾಗಬೇಕು ಎಂದು ಹೇಳಿದರು.ಪಿಸಿ ಪರೀಕ್ಷೆ ಗೊಂದಲ ಕುರಿತ ವಿಚಾರಕ್ಕೆ ಪ್ರತಿಕ್ರಿಯಿಸಿ, ಗೃಹಮಂತ್ರಿಗಳು ವಿದ್ಯಾರ್ಥಿಗಳ ದಾರಿ ತಪ್ಪಿಸುತ್ತಿದ್ದಾರೆ. ನೀಟ್ ಹೋರಾಟದಂತೆ ದೆಹಲಿಯ ಜಂತರ್‌ ಮಂತರ್‌ನಲ್ಲಿ 25 ದಿನಗಳ ಕಾಲ ಪ್ರತಿಭಟಿಸಿ ಲಾಠಿ ಚಾರ್ಜ್ ಮಾಡುತ್ತೇವೆ. ನಂತರ ರಾಜೀನಾಮೆ ಎಂದು ಗೃಹ ಸಚಿವರ ಹೇಳಿಕೆ ವಿಚಾರವಾಗಿ ಮಾತನಾಡಿ, ವಿದ್ಯಾರ್ಥಿಗಳನ್ನು ಪ್ರತಿಭಟನೆಗೆ ಕೂಡಿಸಿ ಲಾಠಿ ಚಾರ್ಜ್ ಮಾಡಿಸಿ, ಗೋಲಿಬಾರ್‌ ಮಾಡಿಸಿ ಅವರ ಪ್ರಾಣ ತೆಗೆದುಕೊಳ್ಳುವ ಭಾವನೆ ಇರಬಾರದು. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಇರಬೇಕೆಂಬ ಭಾವನೆ ಇರಬೇಕು. ಅದನ್ನು ಬಿಟ್ಟು ಪ್ರಚೋದನೆ ಮಾಡುತ್ತಿದ್ದಾರೆ. ಇವರ ಮೇಲೆಯೇ ಮೊದಲ ಕೇಸ್ ದಾಖಲಾಗುತ್ತದೆ ಎಂದು ಯತ್ನಾಳ ಹೇಳಿದರು.

PREV
Read more Articles on
click me!

Recommended Stories

ರಾಯಚೂರು: ಬುಲೆಟ್ ಮೇಲೆ ಹೊರಟಿದ್ದವನ ಮೇಲೆ ದುಷ್ಕರ್ಮಿಗಳಿಂದ ಭೀಕರ ಅಟ್ಯಾಕ್! ನಡುರಸ್ತೆಯಲ್ಲೇ ಉಸಿರು ಚೆಲ್ಲಿದ ಯುವಕ!
'ಬನ್ರಪ್ಪಾ ನಿಮ್ ಜತೆ ನಾನಿದ್ದೀನಿ.. ಅದೇನ್ ಪ್ರಾಬ್ಲಂ ಹೇಳಿ ಎಂದ ಸಿಎಂ; ಕಾರಿಂದ ಇಳಿದು ಮರದ ಕೆಳಗೆ ಜೆನ್‌ಝೀ ದೂರು ಸ್ವೀಕರಿಸಿದ ಡಿಕೆಶಿ