ಶಿಕ್ಷಣ ಸಚಿವ ಮಧು ಬಂಗಾರಪ್ಪರನ್ನು ಬದಲಿಸಿ: ಸಿಎಂಗೆ ಎಚ್.ವಿಶ್ವನಾಥ್ ಮನವಿ ಮಾಡಿದ್ದೇಕೆ?

Published : May 26, 2026, 09:24 PM IST
h vishwanath

ಸಾರಾಂಶ

ರಾಜ್ಯದಲ್ಲಿ ಶಾಲಾ ಶಿಕ್ಷಣ ಅದೋಗತಿಗೆ ತಲುಪಿದ್ದು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಬದಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಎಚ್.ವಿಶ್ವನಾಥ್ ಮನವಿ ಮಾಡಿದರು.

ಮೈಸೂರು (ಮೇ.26): ರಾಜ್ಯದಲ್ಲಿ ಶಾಲಾ ಶಿಕ್ಷಣ ಅದೋಗತಿಗೆ ತಲುಪಿದ್ದು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಬದಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಎಚ್.ವಿಶ್ವನಾಥ್ ಮನವಿ ಮಾಡಿದರು. ಪಿಯುಸಿ ಫೇಲ್ ಆಗಿರುವ ಮಧು ಬಂಗಾರಪ್ಪ ಅವರನ್ನು ಶಿಕ್ಷಣ ಖಾತೆಯಿಂದ ತೆಗೆದು ಬೇರೆ ಖಾತೆ ಕೊಡಿ. ಶಾಲಾ ಶಿಕ್ಷಣದ ಬಗ್ಗೆ, ಕನ್ನಡದ ಬಗ್ಗೆ ಅಭಿಮಾನ ಇರುವ ಶಾಸಕಗೆ ಶಿಕ್ಷಣ ಖಾತೆ ನೀಡಿ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಕೋರಿದರು.

ರಾಜ್ಯದ ಶಾಲಾ ಶಿಕ್ಷಣದ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಾಹಿತಿ ದೇವನೂರು ಮಹದೇವು ಅವರನ್ನು ಭೇಟಿ ಮಾಡಿದ ಬಳಿಕ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲು ಹೊರಟಿದ್ದಾರೆ. ಕಳೆದ ಮೂರು ವರ್ಷದಿಂದ ಶಿಕ್ಷಣ ಸಚಿವರು ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ. ಈ ಸಾಲಿನಿಂದಲೇ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಕೊಡುತ್ತೇವೆಂದು ಹೇಳಿದ್ದಾರೆ. ಆದರೆ, ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡಲು ಶಿಕ್ಷಕರು ಎಲ್ಲಿದ್ದಾರೆ ಎಂದು ಅವರು ಪ್ರಶ್ನಿಸಿದರು.

6ನೇ ತರಗತಿಯಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡ್ತೇವೆ ಎಂದಿದ್ದಾರೆ. 3ನೇ ತರಗತಿಯಿಂದ ದೈಹಿಕ ಶಿಕ್ಷಣ, ಕಲೆ, ಸಾಹಿತ್ಯ ಬೋಧನೆ ಮಾಡ್ತೇವೆ ಎಂದಿದ್ದಾರೆ. ಇದಕ್ಕೆಲ್ಲ ಶಿಕ್ಷಕರು ಎಲ್ಲಿದ್ದಾರೆ? ಶಿಕ್ಷಣ ಸಚಿವರು ಬರೀ ಬೊಗಳೆ ಬಿಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರವನ್ನು ಅಧೋಗತಿಗೆ ಕೊಂಡೊಯ್ಯುತ್ತಿದ್ದಾರೆ. 5 ವರ್ಷದಲ್ಲಿ ಎಲ್ಲಾ ಖಾಸಗಿ ಶಾಲೆಗಳನ್ನು ಮುಚ್ಚಿಸಿ ಸರ್ಕಾರಿ ಶಾಲೆಗಳನ್ನಾಗಿ ಮಾಡ್ತೀವಿ ಅಂದಿದ್ದಾರೆ. ಇದು ಸಾಧ್ಯವೇ ಎಂದು ಅವರು ಕಿಡಿಕಾರಿದರು.

ಶಿಕ್ಷಣ ತಜ್ಞರ ಸಮಿತಿಯನ್ನೇ ಮಾಡಿಲ್ಲ. ಶಿಕ್ಷಣ ಇಲಾಖೆಯಲ್ಲಿ ಯಾವುದೇ ಮಾರ್ಗಸೂಚಿಗಳನ್ನು ಪ್ರಕಟಿಸಿಲ್ಲ. ಮಕ್ಕಳ‌ ಮುಗ್ಧ ಮನಸ್ಸಿನ ಮೇಲೆ ಒತ್ತಡ ಹೇರಲು ಹೊರಟಿದ್ದಾರೆ. ಶಿಕ್ಷಣ ಸಚಿವರಿಗೆ ನೈತಿಕತೆ ಇಲ್ಲ. ಶಿಕ್ಷಣ ಸಚಿವರ ಹೇಳಿಕೆ ನಗೆಪಾಟಲಿನಂತಿವೆ. ಇದು ರಾಜ್ಯ ಸರ್ಕಾರದ 6ನೇ ಗ್ಯಾರಂಟಿಯಾಗಿದ್ದು ಬರೀ ಸುಳ್ಳಿನ‌ಇಕಂತೆಯಾಗಿದೆ. ಮುಖಅಯಮಂತ್ರಿಗಳು ಇತ್ತ ಗಮನ ಹರಿಸಬೇಕು. ಶಿಕ್ಷಣ ಸಚಿವ ಮಧು ಬಂಗಾರಪ್ಪರನ್ನು ಬದಲಿಸಿ, ಅನುಭವವಿರುವ ಶಾಸಕನಿಗೆ ಶಿಕ್ಷಣ ಖಾತೆ ನೀಡಬೇಕು ಎಂದು ಅವರು ತಿಳಿಸಿದರು.

ನಾನು ಯಾವುದೇ ಹಣ ಪಡೆದಿಲ್ಲ

ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಪ್ರಕರಣ ದಾಖಲಾಗಿರುವ ಕುರಿತು ಪ್ರತಿಕ್ರಿಯಿಸಿದ ಎಚ್. ವಿಶ್ವನಾಥ್ ಅವರು, ಯಾವೋನ್ರೀ ಅವನು ಕೋಟೆಹುಂಡಿ ಮಹದೇವು. ನಾನೊಬ್ಬ ಸೀನಿಯರ್ ಪೊಲೊಟಿಷಿಯನ್. ಅವನ ಜೊತೆಗೆ ನನ್ನನ್ನು ಹೋಲಿಕೆ ಮಾಡ್ಬೇಡಿ. ನಾನು ಕೋಟೆಹುಂಡಿ ಮಹದೇವು ಬಳಿ ಯಾವುದೇ ಹಣ ಪಡೆದಿಲ್ಲ. ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ ಎಂದರು.

ಎಂ.ಟಿ.ಬಿ ನಾಗರಾಜ್ ಹಾಗೂ ನಾನು ಒಳ್ಳೆಯ ಸ್ನೇಹಿತರು. ನನಗೆ ಹಣ ಕೊಟ್ಟಿದ್ರೇ ಎಂಟಿಬಿ ನಾಗರಾಜ್ ಕೇಳ್ತಾರೆ. ಮಧ್ಯದಲ್ಲಿ ಇವನ್ಯಾರ್ರೀ ಕೇಳೋಕೆ?. ನಾನು ಹಿರಿಯ ನಾಯಕ, ನನ್ನ ಬಗ್ಗೆ ಮಾತನಾಡುವ ಮೊದಲು ಯೋಚನೆ ಮಾಡಲಿ. ನಾನು ಕೂಡ ಒಬ್ಬ ವಕೀಲ. ಈಗಾಗಲೇ ನನ್ನ ಮೇಲೆ ಐದು ಕೇಸು ಹಾಕಿದ್ದಾರೆ. ಸಚಿವ ಭೈರತಿ ಸುರೇಶ್ 50 ಕೋಟಿ ಮಾನನಷ್ಟ ಮೊಕದ್ದಮೆ ಹಾಕಿದ್ದು, ನನ್ನ ಮೇಲೆ ಕೇಸ್ ಹಾಕಿರುವವರೆಲ್ಲ ಸಿದ್ದರಾಮಯ್ಯನ ಚೇಲಾಗಳು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

PREV
Read more Articles on
click me!

Recommended Stories

ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಜನರು ನಂಬಿಕೆ ಬೆಳೆಸಿಕೊಳ್ಳಬೇಕು: ಸಚಿವ ಎನ್.ಚಲುವರಾಯಸ್ವಾಮಿ
ಕಣ್ಮರೆಯಾದ ಹುಬ್ಬಳ್ಳಿ-ಬಾದಾಮಿ-ಗುಳೇದಗುಡ್ಡ-ಇಳಕಲ್‌ ತಲುಪವ ಬಸ್; ಪ್ರಯಾಣಿಕರ ಪರದಾಟ