ಗುರುಮಠಕಲ್‌: ಕೊರೋನಾ ಶಾಸಕ ನಾಗನಗೌಡ ಕಂದಕೂರು ಗುಣಮುಖ

Kannadaprabha News   | Asianet News
Published : Aug 19, 2020, 01:13 PM IST
ಗುರುಮಠಕಲ್‌: ಕೊರೋನಾ ಶಾಸಕ ನಾಗನಗೌಡ ಕಂದಕೂರು ಗುಣಮುಖ

ಸಾರಾಂಶ

ಸೋಂಕಿನ ವಿರುದ್ಧ ಹೋರಾಟ ಮಾಡುವುದು ಅವಶ್ಯವಾಗಿದೆ ಎಂದು ಜನರಿಗೆ ಕರೆ ನೀಡಿದ ಶಾಸಕ ನಾಗನಗೌಡ ಕಂದಕೂರು| ವೈದ್ಯರ ಸಲಹೆ ಮೇರೆ ಹೋಂ ಕ್ವಾರಂಟೈನ್‌ನಲ್ಲಿದ್ದೇನೆ. ಶೀಘ್ರದಲ್ಲೇ ಕ್ಷೇತ್ರದ ಜನರ ಸೇವೆಗೆ ಬರಲಿದ್ದೇನೆ|ಮೈಲಾರಲಿಂಗೇಶ್ವರ, ಮಾತಾ ಮಾಣಿಕೇಶ್ವರಿ ಹಾಗೂ ಗುರುಮಠಕಲ್‌ ಕ್ಷೇತ್ರದ ಸಮಸ್ತ ಜನರ ಆಶೀರ್ವಾದದಿಂದಲೇ ನಾನು ಸೋಂಕಿನಿಂದ ಗುಣಮುಖನಾಗಿದ್ದೇನೆ|   

ಯಾದಗಿರಿ(ಆ.19): ಕೋವಿಡ್‌-19 ಸೋಂಕು ದೃಢಪಟ್ಟಿದ್ದರಿಂದ, ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗೆ ದಾಖಲಾಗಿದ್ದ ಗುರುಮಠಕಲ್‌ ಶಾಸಕ ನಾಗನಗೌಡ ಕಂದಕೂರು ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ.

ಸೋಮವಾರ ಮನೆಗೆ ಮರಳಿದ ಅವರು, ಸೋಂಕಿನ ವಿರುದ್ಧ ಹೋರಾಟ ಮಾಡುವುದು ಅವಶ್ಯವಾಗಿದೆ ಎಂದು ಜನರಿಗೆ ಕರೆ ನೀಡಿದರು. ವೈದ್ಯರ ಸಲಹೆ ಮೇರೆ ಹೋಂ ಕ್ವಾರಂಟೈನ್‌ನಲ್ಲಿದ್ದೇನೆ. ಶೀಘ್ರದಲ್ಲೇ ಕ್ಷೇತ್ರದ ಜನರ ಸೇವೆಗೆ ಬರಲಿದ್ದೇನೆ. ಮೈಲಾರಲಿಂಗೇಶ್ವರ, ಮಾತಾ ಮಾಣಿಕೇಶ್ವರಿ ಹಾಗೂ ಗುರುಮಠಕಲ್‌ ಕ್ಷೇತ್ರದ ಸಮಸ್ತ ಜನರ ಆಶೀರ್ವಾದದಿಂದಲೇ ನಾನು ಸೋಂಕಿನಿಂದ ಗುಣಮುಖನಾಗಿದ್ದೇನೆ ಎಂದಿದ್ದಾರೆ.

ಛಾಯಾ ಭಗವತಿ ದೇವಿ ಪಾದಸ್ಪರ್ಶ ಮಾಡಿದ 'ಕೃಷ್ಣೆ'..!

ಯಾರ ಸಂಪರ್ಕವೂ ಇಲ್ಲದೆ ನನಗೆ ಕೋವಿಡ್‌ ಸೊಂಕು ತಗುಲಿದ ನಂತರ ಸಾಕಷ್ಟುನೊಂದುಕೊಂಡಿದ್ದೆ. ಆದರೆ, ಈ ವ್ಯಾಧಿ​ ಯಾರ ಪ್ರಾಣವನ್ನೂ ತೆಗೆಯುವುದಿಲ್ಲ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಕಡ್ಡಾಯವಾಗಿ ಮಾಸ್ಕ್‌ ಧರಿಸುವುದು ಮತ್ತು ಆಗಾಗ್ಗೆ ಕೈಗಳನ್ನು ತೊಳೆದುಕೊಳ್ಳುವುದು ಅವಶ್ಯವಾಗಿದೆ ಎಂದು ಸಲಹೆ ನೀಡಿದ್ದಾರೆ.
 

PREV
click me!

Recommended Stories

ಪೊಲೀಸ್‌ ಚೆಕಿಂಗ್‌ ವೇಳೆ ಹೋಟೆಲ್‌ ಬಾಲ್ಕನಿಯಿಂದ ಹಾರಿದ ಬೆಂಗಳೂರು ಮಹಿಳೆ, ಸ್ಥಿತಿ ಗಂಭೀರ!
ಡಿ.16ರಂದು ಮಂಡ್ಯಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ, ಜಿಲ್ಲಾಡಳಿತದಿಂದ ಭರದ ಸಿದ್ದತೆ, ಕಟ್ಟುನಿಟ್ಟಿನ ಭದ್ರತೆ