ಕೊರೋನಾ ಸೋಂಕಿನಿಂದ ತನ್ನ ಸಹೋದರ ಮೃತಪಟ್ಟ ವಿಷಯ ತಿಳಿದು ಅಣ್ಣನೂ ಸಾವು| ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ನಡೆದನ ಘಟನೆ| ಬಸಪ್ಪ ಮಹಾಂತಪ್ಪ ಭಾವಿಕಟ್ಟಿ, ಶರಣಪ್ಪ ಮಹಾಂತಪ್ಪ ಭಾವಿಕಟ್ಟಿ ಮೃತಪಟ್ಟವರು|
ಹುನಗುಂದ(ಆ.19): ಕೊರೋನಾ ಸೋಂಕಿನಿಂದ ತನ್ನ ಸಹೋದರ ಮೃತಪಟ್ಟ ವಿಷಯ ತಿಳಿದು ಅಣ್ಣನೂ ಹೃದಯಾಘಾತದಿಂದ ಮೃತಪಟ್ಟ ಘಟನೆ ಸೋಮವಾರ ರಾತ್ರಿ ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ನಡೆದಿದೆ.
ಬಸಪ್ಪ ಮಹಾಂತಪ್ಪ ಭಾವಿಕಟ್ಟಿ(45), ಶರಣಪ್ಪ ಮಹಾಂತಪ್ಪ ಭಾವಿಕಟ್ಟಿ(50) ಮೃತಪಟ್ಟವರಾಗಿದ್ದಾರೆ.
ಅಪಾಯದ ಮಟ್ಟ ಮೀರಿದೆ ಘಟಪ್ರಭಾ; ಪ್ರವಾಹದ ಮಧ್ಯೆ ಪಲ್ಲಕ್ಕಿ ಕೊಂಡೊಯ್ದ ಗ್ರಾಮಸ್ಥರು
ಪಟ್ಟಣದ ಬಸಪ್ಪ ಮಹಾಂತಪ್ಪ ಭಾವಿಕಟ್ಟಿ ಅವರು ಕೊರೋನಾ ಸೋಂಕಿನಿಂದ ಸೋಮವಾರ ರಾತ್ರಿ ಮೃಪಟ್ಟಿದ್ದರು. ಈ ಸುದ್ದಿ ತಿಳಿದ ತಕ್ಷಣವೇ ಅಣ್ಣ ಶರಣಪ್ಪ ಮಹಾಂತಪ್ಪ ಭಾವಿಕಟ್ಟಿ ತೀವ್ರ ಹೃದಯಾಘಾತಕ್ಕೊಳಗಾಗಿದ್ದು, ಆತನನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಈತ ಸಾವನ್ನಪ್ಪಿದ್ದಾನೆ.