ಪ್ರಚಾರಕ್ಕೆ ತೆರಳದ ಜೆಡಿಎಸ್ ಶಾಸಕ : ಬಿಚ್ಚಿಟ್ಟರು ಕಾರಣ

Kannadaprabha News   | Asianet News
Published : Oct 18, 2020, 07:32 AM IST
ಪ್ರಚಾರಕ್ಕೆ ತೆರಳದ ಜೆಡಿಎಸ್ ಶಾಸಕ : ಬಿಚ್ಚಿಟ್ಟರು ಕಾರಣ

ಸಾರಾಂಶ

ಜೆಡಿಎಸ್ ಶಾಸಕರೋರ್ವರು ಶಿರಾ ಚುನಾವಣಾ ಪ್ರಚಾರದಿಂದ ದೂರವೇ ಉಳಿದಿದ್ದಾರೆ. ಇದನ್ನು ಪ್ರಶ್ನಿಸಿದಾಗ ಕಾರಣ ಬಿಚ್ಚಿಟ್ಟಿದ್ದಾರೆ. 

ತುಮಕೂರು (ಅ.18): ‘ನನ್ನ ಹೆಂಡತಿ, ಮಗ, ಡ್ರೈವರ್‌ ಸೇರಿ ಎಲ್ಲರಿಗೂ ಕೊರೋನಾ ಬಂದ ಕಾರಣ ಶಿರಾ ಉಪಚುನಾವಣೆ ಪ್ರಚಾರಕ್ಕೆ ಹೋಗಿಲ್ಲ’ ಎಂದು ಗುಬ್ಬಿ ಜೆಡಿಎಸ್‌ ಶಾಸಕ ಎಸ್‌.ಆರ್‌. ಶ್ರೀನಿವಾಸ್‌ ಸ್ಪಷ್ಟಪಡಿಸಿದರು. 

ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಮನೆಯವರು ಒಂದು ತಿಂಗಳು ಆಸ್ಪತ್ರೆಯಲ್ಲಿದ್ದರು. ನಾನೂ ಕೂಡ ಕ್ವಾರಂಟೈನ್‌ನಲ್ಲಿದ್ದಿದ್ದರಿಂದ ಪ್ರಚಾರ ಸಭೆಗೆ ಹೋಗಲು ಆಗಲಿಲ್ಲ. ಕುಮಾರಸ್ವಾಮಿ, ದೇವೇಗೌಡ, ರೇವಣ್ಣ ಬಂದಾಗಲೂ ಹೋಗಲು ಸಾಧ್ಯವಾಗಲಿಲ್ಲ. 

ಭಾವನೆಗೆ ಧಕ್ಕೆ ತಂದು ನೋವಾಗಿದ್ದರೆ ನನ್ನ ಕ್ಷಮಿಸಿ : ಅಸಮಾಧಾನಗೊಂಡು ಎದ್ದು ಹೊರನಡೆದ ಎಚ್‌ಡಿಕೆ ...

ನಮಗೆ ಜವಾಬ್ದಾರಿ ಕೊಟ್ಟಿಲ್ಲ ಎಂದರು. ನನ್ನ ಬೇಜಾರು ಏನೆಂಬುದನ್ನು ಹೇಳಿದ್ದೇನೆ. ಮುಂದೆಯೂ ಹೇಳುತ್ತೇನೆ. ಪಕ್ಷ ಬದಲಾವಣೆ ಮಾಡುವ ಬಗ್ಗೆ ಯೋಚನೆ ಮಾಡಿಲ್ಲ. ರಾಜಕಾರಣದಲ್ಲಿ ಮುಂದಿನ ದಿನದಲ್ಲಿ ಏನೇನು ಆಗುತ್ತದೆ ಎಂದು ಹೇಳಲು ಬರುವುದಿಲ್ಲ ಎಂದರು.

PREV
click me!

Recommended Stories

Karnataka News Live: ಮುಂದುವರಿದ ಸಿಎಂ ಕುರ್ಚಿ ಕದನ ಜನವರಿ 6ಕ್ಕೆ ಡಿಕೆಶಿ ಸಿಎಂ: ಮತ್ತೆ ಆಪ್ತ ಶಾಸಕರ ಬಾಂಬ್
ವನ್ಯಜೀವಿ ಸಂರಕ್ಷಣೆ: ಏಷ್ಯಾನೆಟ್ ಸುವರ್ಣ ನ್ಯೂಸ್ & ಕನ್ನಡಪ್ರಭದ ಅಭಿಯಾನಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಸಾಥ್!