Ramanagara: ಸತತ ಮಳೆಯಿಂದ ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿ

Published : Sep 13, 2022, 03:00 AM IST
Ramanagara: ಸತತ ಮಳೆಯಿಂದ ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿ

ಸಾರಾಂಶ

ಕಳೆದ ಒಂದು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕೆರೆಕಟ್ಟೆಗಳು ಭರ್ತಿಯಾಗಿದ್ದು, ಬರದಿಂದ ಭಣಗುಡುತ್ತಿದ್ದ ಜಿಲ್ಲೆಯ ಕೆರೆಕಟ್ಟೆಗಳು ಭೂಮಿಯ ದಾಹ ನೀಗಿದ್ದು, ಭಾರಿ ಮಳೆಯಿಂದಾಗಿ ಇದೀಗ ಅಂತರ್ಜಲ ಪ್ರಮಾಣದಲ್ಲಿ ಸಹ ಗಣನೀಯ ವೃದ್ಧಿಯಾಗಿದೆ.

ಎಂ.ಅಫ್ರೋಜ್ ಖಾನ್‌ 

ರಾಮನಗರ (ಸೆ.13): ಕಳೆದ ಒಂದು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕೆರೆಕಟ್ಟೆಗಳು ಭರ್ತಿಯಾಗಿದ್ದು, ಬರದಿಂದ ಭಣಗುಡುತ್ತಿದ್ದ ಜಿಲ್ಲೆಯ ಕೆರೆಕಟ್ಟೆಗಳು ಭೂಮಿಯ ದಾಹ ನೀಗಿದ್ದು, ಭಾರಿ ಮಳೆಯಿಂದಾಗಿ ಇದೀಗ ಅಂತರ್ಜಲ ಪ್ರಮಾಣದಲ್ಲಿ ಸಹ ಗಣನೀಯ ವೃದ್ಧಿಯಾಗಿದೆ.

ಬತ್ತಿಹೋಗಿದ್ದ ಕೆರೆಗಳಿಗೆ ಜೀವಕಳೆ: ಮಳೆಯ ಕೊರತೆ ಮತ್ತು ಬಿಸಿಲ ಝಳದಿಂದಾಗಿ ಜಿಲ್ಲೆಯ ಹಲವೆಡೆ ಕೆರೆಗಳು ಬತ್ತಿಹೋಗಿದ್ದರೆ, ಇನ್ನು ಕೆಲವು ಕಡೆ ಬರಿದಾಗಿದ್ದ ಕೆರೆಗಳು ಬತ್ತಿಹೋಗುವ ಹಂತ ತಲುಪಿದ್ದವು. ಕೆಲವು ಗ್ರಾಮಗಳಲ್ಲಿ ನೀರಿನ ಹಾಹಾಕಾರ ಮುಗಿಲು ಮುಟ್ಟಿತ್ತು. ಇದೇ ಪರಿಸ್ಥಿತಿ ಮುಂದುವರೆದಿದ್ದರೇ, ಜಿಲ್ಲೆಯಲ್ಲಿ ತೀವ್ರ ಬರಗಾಲ ಎದುರಾಗುವ ಸಂಭವವಿತ್ತು. ಆದರೆ, ವರುಣನ ಕೃಪೆಯಿಂದಾಗಿ ಒಂದು ತಿಂಗಳ ಅವಧಿಯಲ್ಲಿ ಉತ್ತಮ ಮಳೆಯಾಗಿದೆ. ಜಿಲ್ಲೆಯಲ್ಲಿ ಸುರಿದ ದಾಖಲೆಯ ಮಳೆಯಿಂದಾಗಿ ಕಳೆದ 30 ವರ್ಷಗಳಿಂದ ತುಂಬದ ಹಲವು ಕೆರೆಕಟ್ಟೆಗಳು ಇಂದು ಭರ್ತಿಯಾಗಿ ಕೋಡಿಹರಿಯುತ್ತಿದೆ.

Ramanagara: ಜನ ನೋವಿನಲ್ಲಿದ್ದರೆ ಬಿಜೆಪಿ ಸಂಭ್ರಮಾಚರಣೆ ವಿಕೃತಿ: ಸಂಸದ ಡಿ.ಕೆ.​ಸು​ರೇಶ್‌

ಪಾತಾಳ ತಲುಪಿತ್ತು: ಕಳೆದ ಎರಡು ವರ್ಷ ಉತ್ತಮ ಮಳೆಯಾಗದ ಹಿನ್ನೆಲೆಯಲ್ಲಿ ಜಿಲ್ಲೆಯ ಕೆಲವು ಕಡೆ ನೀರಿಗೆ ಸಮಸ್ಯೆ ಉಂಟಾಗಿತ್ತು. ಜನ ನೀರಿಗಾಗಿ ಬೋರ್‌ವೆಲ್‌ಗಳನ್ನು ಅವಲಂಬಿಸಿದ್ದರಿಂದ ಅಂತರ್ಜಲ ಪಾತಾಳ ಕಂಡಿತ್ತು. ಕಳೆದ ಎರಡು ವರ್ಷಗಳ ಕಾಲ ಇದೇ ಸಮಯದಲ್ಲಿ ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಾಗಿ ಬಳಕೆ ಮಾಡಿದ ಕಾರಣದಿಂದಾಗಿ ನಾಲ್ಕು ತಾಲೂಕಿನ ಪೈಕಿ ರಾಮನಗರ ಮತ್ತು ಕನಕಪುರ ತಾಲೂಕುಗಳನ್ನು ಜಿಲ್ಲಾ ಅಂತರ್ಜಲ ನಿರ್ದೇಶನಾಲಯದ ಅಧಿಕಾರಿಗಳು ಅತೀ ಹೆಚ್ಚು ಅಂತರ್ಜಲ ಬಳಸುವ ತಾಲೂಕುಗಳೆಂದು ಘೋಷಣೆ ಮಾಡಿದ್ದರು.

ಇದರಿಂದಾಗಿ ಈ ಎರಡು ತಾಲೂಕುಗಳಲ್ಲಿ ಕೊಳವೆ ಬಾವಿ ಕೊರೆಯಲು ಅನುಮತಿಯನ್ನು ಕಡ್ಡಾಯಗೊಳಿಸಲಾಗಿತ್ತು. ಒಂದೊಮ್ಮೆ ಅನುಮತಿ ಇಲ್ಲದೇ ಕೊಳವೆ ಬಾವಿ ಕೋರಿಸಿದ್ದೇ ಆದಲ್ಲಿ ನಿರ್ದೇಶನಾಲಯದ ಅಧಿಕಾರಿಗಳು ದಂಡವಿಧಿಸುವ ಕಾರ್ಯ ಮಾಡುತ್ತಿದ್ದರು. ಇಷ್ಟೆಲ್ಲಾ ಕಟ್ಟು ನಿಟ್ಟಿನಕಾನೂನಿನ ನಡುವೆಯು ಅತೀ ಹೆಚ್ಚು ಅಂತರ್ಜಲ ಬಳಕೆ ಮಾಡುವ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿತ್ತು. ಆದರೆ, ಇತ್ತೀಚಿಗೆ ಸುರಿದ ಮಳೆಯಿಂದಾಗಿ ಇಂತಹ ಸಮಸ್ಯೆಗಳಿಗೆ ಸದ್ಯಕ್ಕೆ ಬ್ರೇಕ್‌ ಹಾಕಲಾಗಿದ್ದು, ಜಿಲ್ಲೆಯಲ್ಲಿ ನೀರಿನ ಸಮೃದ್ಧಿ ಹೆಚ್ಚಾಗಿದೆ.

ನೆಲಕಚ್ಚಿದ ಬೆಳೆಗಳು: ಒಂದು ಕಡೆ ಅಂತರ್ಜಲ ಹೆಚ್ಚಾಗಿದ್ದರೆ, ಇನ್ನೊಂದು ಕಡೆ ಹವಾಮಾನ ವೈಪರೀತ್ಯದಿಂದಾಗಿ ಸುರಿದ ಮಳೆಗೆ ಪ್ರಮುಖ ಬೆಳೆಗಳೆಲ್ಲಾ ಬಹುತೇಕ ನೆಲಕಚ್ಚಿದೆ. ಕಷ್ಟಪಟ್ಟು ಕೃಷಿ ಮಾಡಿದ್ದ ರೈತರ ಫಸಲು ಕೈತಪ್ಪಿ ಹೋಗಿರುವುದರಿಂದ ತಲೆಮೇಲೆಕೈ ಹೊತ್ತು ಕುಳಿತ್ತಿದ್ದಾನೆ. ಇದೇ ವೇಳೆ ಕೆರೆಕಟ್ಟೆಗಳಲ್ಲಿ ಸಮೃದ್ಧವಾಗಿ ನೀರು ಹರಿಯುತ್ತಿರುವ ಕಾರಣ, ಮುಂದಿನ ದಿನಗಳಲ್ಲಿನ ನೀರಿನಕೊರತೆ ನೀಗಿರುವುದರಿಂದ ಮುಂದಿನ ದಿನಗಳಲ್ಲಿ ಸಮೃದ್ಧ ಕೃಷಿ ಮಾಡಲು ಅವಕಾಶ ಲಭಿಸಲಿದೆ ಎಂದು ಅಂದಾಜಿಸಲಾಗಿದೆ.

ಕಳೆದ ಹಲವು ದಿನಗಳಲ್ಲಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಳೆದ ವರ್ಷದ ಅರ್ಧದಷ್ಟುಅಂತರ್ಜಲ ಪ್ರಮಾಣ ಈ ವರ್ಷದ ಅರ್ಧ ವರ್ಷದಲ್ಲಿ ಲಭ್ಯವಾಗಿದೆ. ಹಾಗಾಗಿ ಬತ್ತಿಯೋಗಿರುವ ಬಹುತೇಕ ಕೊಳವೆ ಬಾವಿಗಳಲ್ಲಿ ನೀರು ಲಭ್ಯವಾಗುತ್ತಿದೆ. ಇನ್ನು ಕಳೆದ ಒಂದುವಾರದಿಂದ ತಣ್ಣಗಾಗಿದ್ದ ಮಳೆಯ ಮತ್ತೆ ಆರಂಭವಾಗಿದೆ. ಒಂದೊಮ್ಮೆ ಇದೇ ರೀತಿ ಮಳೆಯ ಆರ್ಭಟ ಮುಂದುವರೆದಿದ್ದೇ ಆದಲ್ಲಿ ಅಂತರ್ಜಲ ಇನ್ನಷ್ಟುವೃದ್ಧಿಯಾಗಲಿದೆ.

ಬತ್ತಿಹೋಗಿದ್ದ ಕೊಳವೆಬಾವಿಗಳಲ್ಲಿ ಚಿಮ್ಮಿದ ನೀರು: ಈ ಹಿಂದೆ ರಾಮನಗರ ಜಿಲ್ಲೆಯಲ್ಲಿ ಕೊಳವೆ ಬಾಯಿಯಲ್ಲಿ ನೀರು ಲಭ್ಯವಾಗಬೇಕಾದರೆ ಕನಿಷ್ಠ 700ರಿಂದ 1000 ಅಡಿಯತನಕ ಬಾವಿ ಕೊರೆಸಬೇಕಿತ್ತು. ಇಷ್ಟುಕೊರೆಸಿದ ಬಳಿಕವೂ ನೀರು ಲಭ್ಯವಾಗದೇ ಇರುವ ಹಲವು ಉದಾರಣೆಯು ಸಾಕಷ್ಟುಇದೆ. ಆದರೆ, ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಅಂರ್ಜಲಮಟ್ಟಏಕಾಏಕಿ ಹೆಚ್ಚಾಗಿದೆ. ಅದರಲ್ಲೂ ನೀರಿಲ್ಲದೇ ಸಾಕಷ್ಟು ವರ್ಷ ಬತ್ತಿ ಹೋಗಿದ್ದ ಕೊಳವೆ ಬಾವಿಯಲ್ಲಿ ಇಂದು ನೀರು ಉಕ್ಕಿ ಹರಿಯುತ್ತಿರುವುದು ರಾಮನಗರ ಜಿಲ್ಲೆಯಲ್ಲಿನ ಅಂತರ್ಜಲವೃದ್ಧಿಯಾಗಿರುವುದಕ್ಕೆ ಸಾಕ್ಷಿಯಾಗಿದೆ.

Ramanagara: ಸುಗ್ಗ​ನ​ಹ​ಳ್ಳಿ ಸೇತುವೆ, ಭಕ್ಷಿ ಕೆರೆ ವೀಕ್ಷಿಸಿದ ಶಾಸಕಿ ಅನಿತಾ ಕುಮಾರಸ್ವಾಮಿ

ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಲ್ಲಿನ ಅಂತರ್ಜಲಮಟ್ಟ ಹೆಚ್ಚಾಗಿದೆ. ಜತಗೆ, ಜಿಲ್ಲಾ ಪಂಚಾಯಿತಿ ವತಿಯಿಂದಲೂ ಸಾಕಷ್ಟುಕ್ರಮಗಳನ್ನು ಕೈಗೊಳ್ಳಲಾಗಿದೆ.
-ದಿಗ್ವಿಜಯ್‌ ಬೋಡ್ಕೆ, ಸಿಇಒ, ಜಿಪಂ ರಾಮನಗರ

PREV
Read more Articles on
click me!

Recommended Stories

ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್: ಪೊಲೀಸರ ಬಲೆಗೆ ಬಿದ್ದ ಮೂವರು!