ಕೋಲಾರ: ರಾಗಿ ಖರೀದಿ ಕೇಂದ್ರ, ಬೆಂಬಲ ಬೆಲೆ ಎಷ್ಟು..?

By Kannadaprabha NewsFirst Published Dec 8, 2019, 2:20 PM IST
Highlights

ಕೋಲಾರದಲ್ಲಿ ರಾಗಿ ಬೆಲೆ ಕುಸಿತ ಕಂಡ ಹಿನ್ನೆಲೆಯಲ್ಲಿ ಇದೀಗ ಖರೀದಿ ಕೇಂದ್ರವನ್ನು ತೆಗೆದು ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಕೋಲಾರದಲ್ಲಿ ಆರು ಕೇಂದ್ರಗಳನ್ನು ತೆರೆಯಲಾಗಿದ್ದು, ರೈತರು ಇಲ್ಲಿ ತಮ್ಮ ರಾಗಿ ಮಾರಾಟ ಮಾಡಬಹುದು.

ಕೋಲಾರ(ಡಿ.08): ಜಿಲ್ಲೆಯಲ್ಲಿ 6 ಖರೀದಿ ಕೇಂದ್ರಗಳನ್ನು ತೆರೆದು ಪ್ರತಿ ಕ್ವಿಂಟಾಲ್‌ಗೆ 3150 ರು. ಬೆಂಬಲ ಬೆಲೆ ನೀಡಿ ರೈತರಿಂದ ರಾಗಿ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್‌ ಅವರು ತಿಳಿಸಿದ್ದಾರೆ.

ಜಿಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕನಿಷ್ಠ ಬೆಂಬಲ ಬೆಲೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ವರ್ಷ ರಾಗಿಯೂ ಉತ್ತಮವಾಗಿ ಬೆಳೆದಿದೆ. ಉತ್ತಮ ಇಳುವರಿಯನ್ನು ನಿರೀಕ್ಷಿಸಲಾಗಿದೆ ಎಂದಿದ್ದಾರೆ.

ಮಳೆಯಿಂದ ಕಟಾವಿಗೆ ಬಂದಿದ್ದ ರಾಗಿ ಸಂಪೂರ್ಣ ಹಾನಿ

ರಾಗಿಯು ಈ ಬಾರಿ ಉತ್ತಮ ಬೆಳೆಯಾಗಿರುವುದರಿಂದ 1 ಲಕ್ಷಕ್ಕಿಂತ ಹೆಚ್ಚಿನ ದಾಸ್ತಾನು ಶೇಖರಣೆಗೂಳ್ಳುವ ನಿರೀಕ್ಷೆ ಇದೆ. ಆದ್ದರಿಂದ ರೈತರಿಗೆ ರಾಗಿ ಖರೀದಿಯ ಬಗ್ಗೆ ಉತ್ತಮ ಪ್ರಚಾರ ಮಾಡಿ ಮಾಹಿತಿಯನ್ನು ತಲುಪಿಸಬೇಕು. ರೈತರಿಂದ ರಾಗಿ ಮಾರಾಟ ಮಾಡಲು ಬಂದಂತಹ ಅರ್ಜಿಗಳನ್ನು ಅಂದೇ ನೋಂದಾಯಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ರೈತರನ್ನು ಕಾಯಿಸಬಾರದು ಎಂದು ತಿಳಿಸಿದ್ದಾರೆ.

'ಯಡಿಯೂರಪ್ಪ ಸರ್ಕಾರ ಉಳಿಸಲು ಭಜನೆ ಮಾಡ್ತಿದ್ದಾನೆ'.

ಜನವರಿಯಿಂದ 3 ತಿಂಗಳ ಕಾಲ ಖರೀದಿ ಕೇಂದ್ರಗಳಲ್ಲಿ ರಾಗಿಯನ್ನು ಖರೀದಿಸಲಾಗುವುದು. ಕಳೆದ ವರ್ಷ 2,897 ರು. ಬೆಂಬಲ ಬೆಲೆ ನೀಡಲಾಗಿತ್ತು. ಈ ಬಾರಿ ಉತ್ತಮ ಬೆಲೆಯನ್ನು ನೀಡಿ ಖರೀದಿಸಲಾಗುತ್ತಿದೆ ಎಂದು ತಿಳಿಸಿದ ಅವರು, ದಾಸ್ತಾನು ಮಳಿಗೆಗಳಲ್ಲಿ ಖರೀದಿಸಿದ ರಾಗಿಯನ್ನು ವ್ಯವಸ್ಥಿತವಾಗಿ ಸಂರಕ್ಷಣೆ ಮಾಡಬೇಕು ಎಂದು ತಿಳಿಸಿದ್ದಾರೆ.

ಸಿಕ್ಕವರಿಗೆ ಸೀರುಂಡೆಯಾದ ಈರುಳ್ಳಿ, ಕೊಳ್ಳೋಕೆ ಮುಗಿಬೀಳ್ತಾರೆ ವ್ಯಾಪಾರಿಗಳು

click me!