ಒಳ್ಳೆ ಆಡಳಿತ ನೀಡಬೇಕು ಎನ್ನುವ ಆಲೋಚನೆ ಇದ್ದಲ್ಲಿ ಯಾವುದೇ ಕ್ಯಾತೆ ಬರುವುದಿಲ್ಲ. ಸಂಘಟನೆ ಸರ್ಕಾರ ಎಂದರೇ ಒಂದು ಕುಟುಂಬ ಇದ್ದಂತೆ, ಅಲ್ಲಿರುವ ಎಲ್ಲರೂ ಒಂದೇ ರೀತಿ ಯೋಜನೆ ಮಾಡಬೇಕು ಎಂದು ಸಚಿವ ಅಂಗಾರ ಹೇಳಿದರು
ಉಡುಪಿ (ಜ.26): ಸರ್ಕಾರದಲ್ಲಿರುವವರಿಗೆ ಒಳ್ಳೆಯ ಆಡಳಿತ ನೀಡಬೇಕು ಎಂಬ ಯೋಚನೆ ಇದ್ದರೇ ಯಾವುದೇ ಸಮಸ್ಯೆ ಬರುವುದಿಲ್ಲ ಎಂದು ಮೀನುಗಾರಿಕಾ - ಬಂದರು ಸಚಿವ ಎಸ್.ಅಂಗಾರ ಹೇಳಿದ್ದಾರೆ.
ಅವರು ಮಂಗಳವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸರ್ಕಾರದಲ್ಲಿ ಸಚಿವ ಖಾತೆ ಕ್ಯಾತೆ ಗೊಂದಲಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದರು.
undefined
ಖಾತೆ ಗೊಂದಲಗಳ ಬಗ್ಗೆ ನಾನು ಏನೂ ಹೇಳುವುದಿಲ್ಲ, ಸಂಘಟನೆ ಸರ್ಕಾರ ಎಂದರೇ ಒಂದು ಕುಟುಂಬ ಇದ್ದಂತೆ, ಅಲ್ಲಿರುವ ಎಲ್ಲರೂ ಒಂದೇ ರೀತಿ ಯೋಜನೆ ಮಾಡಬೇಕು, ಆಗ ಯಾವುದೇ ಸಮಸ್ಯೆಗಳು ಬರುವುದಿಲ್ಲ ಎಂದರು.
ಹಾವೇರಿ ಉಸ್ತುವಾರಿ ಮಾಡುವ ಸಿಎಂ ಭರವಸೆ ನೀಡಿದ್ದಾರೆ: ಶಂಕರ್
ನಾನು ಸಂಘದ ಸಂಸ್ಕಾರಗಳ ಹಿನ್ನೆಲೆಯಿಂದ ಈ ಸ್ಥಾನಕ್ಕೆ ಬಂದಿದ್ದೇನೆ, ನಾನು ಅಧಿಕಾರದ ಹಿಂದೆ ಹೋದವನಲ್ಲ, ಅಧಿಕಾರವೇ ನನ್ನ ಹಿಂದೆ ಬಂದಿದೆ, ಅಧಿಕಾರಕ್ಕೆ ಬಂದ ಮೇಲೆ ಎಲ್ಲಾ ರೀತಿಯ ಸಹಕಾರ ನೀಡುವುದು ನನ್ನ ಕರ್ತವ್ಯ ಎಂದರು.
ಕೊಟ್ಟರೆ ಒಪ್ಪಿಕೊಳ್ಳುತ್ತೇನೆ : ಅಂಗಾರ ಅವರು ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾಗುವ ಬಗ್ಗೆ ಕೇಳಿದಾಗ, ಈ ಬಗ್ಗೆ ನಾನೇನು ಹೇಳುವುದಕ್ಕಾಗುವುದಿಲ್ಲ, ಸಂಘ ಮತ್ತು ಸಿಎಂ ಇದನ್ನು ನಿರ್ಧರಿಸುತ್ತಾರೆ, ಅವರು ಹೇಳಿದರೇ ಒಪ್ಪಿಕೊಳ್ಳಲೇಬೇಕಾಗುತ್ತದೆ ಎಂದರು.
ಸಮಸ್ಯೆಗಳಿರುವುದು ನಿಜ : ಬಂದರು ಮತ್ತು ಮೀನುಗಾರಿಕಾ ಇಲಾಖೆಯಲ್ಲಿ ಸಮಸ್ಯೆಗಳಿರುವುದು ತನಗೆ ತಿಳಿದಿದೆ. ಸಂಬಂಧಪಟ್ಟ ಅಧಿಕಾರಿಗಳಿಂದ ತಿಳಿದುಕೊಳ್ಳುತ್ತೇನೆ, ಅಗತ್ಯ ಇದ್ದ ಸ್ಥಳಗಳಿಗೆ ಭೇಟಿ ನೀಡಿ ಪ್ರಾಯೋಗಿಕ ಅನುಭವ ಪಡೆಯುತ್ತೇನೆ ಮತ್ತು ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇನೆ ಎಂದರು.