2030ಕ್ಕೆ ಏಡ್ಸ್‌ ಮುಕ್ತ ಭಾರತ ನಿರ್ಮಾಣ ಸರ್ಕಾ​ರ​ದ ಗುರಿ: ಡಾ.ಸೆಲ್ವಮಣಿ

By Kannadaprabha News  |  First Published Aug 11, 2023, 9:21 PM IST

2030ರೊಳಗೆ ದೇಶದಲ್ಲಿ ಏಡ್ಸ್‌  ಕಾಯಿಲೆಯನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು ಎಂಬುದು ಸರ್ಕಾರದ ಧ್ಯೇಯ ಮತ್ತು ಕ್ರಮವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್‌.ಸೆಲ್ವಮಣಿ ಹೇಳಿದರು. 


ಶಿವಮೊಗ್ಗ (ಆ.11): 2030ರೊಳಗೆ ದೇಶದಲ್ಲಿ ಏಡ್ಸ್‌  ಕಾಯಿಲೆಯನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು ಎಂಬುದು ಸರ್ಕಾರದ ಧ್ಯೇಯ ಮತ್ತು ಕ್ರಮವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್‌.ಸೆಲ್ವಮಣಿ ಹೇಳಿದರು. ನಗರದ ನೆಹರೂ ಕ್ರೀಡಾಂಗಣದಲ್ಲಿ ಅಂತರ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಶುಕ್ರವಾರ ಏರ್ಪಡಿಸಿದ್ದ ಎಚ್‌ಐವಿ, ಏಡ್ಸ್‌  ಕುರಿತು ಅರಿವು ಮೂಡಿಸಲು ಜಿಲ್ಲಾ ಮಟ್ಟದಲ್ಲಿ ಮ್ಯಾರಥಾನ್‌ ಸ್ಪರ್ಧೆ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಮಾರಕ ಎಚ್‌ಐವಿ, ಏಡ್ಸ್‌ ರೋಗ ಮತ್ತು ರಕ್ತದಾನ ಸೇವೆ​ಯ ಮಹತ್ವ ತಿಳಿಸುವ ಉದ್ದೇಶದಿಂದ ಶಿವಮೊಗ್ಗ ತಾಲೂಕಿನಲ್ಲಿ ರೆಡ್‌ ರಿಬ್ಬನ್‌ ಕ್ಲಬ್‌ ಹೊಂದಿರುವ ಕಾಲೇಜುಗಳ ಎನ್‌ಎಸ್‌ಎಸ್‌ ಅಧಿಕಾರಿಗಳ ಸಹಯೋಗದೊಂದಿಗೆ ಈ ಮ್ಯಾರಥಾನ್‌ ಸ್ಪರ್ಧೆ ಏರ್ಪಡಿಸಲಾಗಿದೆ. ಏಡ್ಸ್‌  ತಡೆಗಟ್ಟಲು ಆರೋಗ್ಯ ಇಲಾಖೆ ಅವಿರತವಾಗಿ ಶ್ರಮಿಸುತ್ತಿದ್ದು, ಎಲ್ಲರೂ ಸಹಕಾರ ನೀಡಬೇಕು ಎಂದರು. ಎಚ್‌ಐವಿ ಬಗ್ಗೆ ಅರಿವು, ಸೇವಾ ಸೌಲಭ್ಯಗಳ ಬಗ್ಗೆ ಮಾಹಿತಿ, ಕಳಂಕ ಮತ್ತು ತಾರತಮ್ಯ ತಡೆಗಟ್ಟುವುದು ನ್ಯಾಕೋ ಏಡ್ಸ್‌  ಆಪ್‌, ಉಚಿತ ರಾಷ್ಟ್ರೀಯ ಸಹಾಯವಾಣಿ 1097, ಎಸ್‌ಐಟಿ ಇತ್ಯಾದಿ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು. 

Tap to resize

Latest Videos

ಪ್ರಧಾನಿ ವಿರುದ್ಧ ಅವಿ​ಶ್ವಾಸ ನಿರ್ಣ​ಯಕ್ಕೆ ಮುಂದಾ​ಗಿ ಬೆತ್ತ​ಲೆ​ಯಾದ ಐಎನ್‌ಡಿಐಎ: ಸಂಸದ ರಾಘವೇಂದ್ರ

ಮ್ಯಾರಥಾನ್‌ಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಎಸ್‌.ಎನ್‌. ಚನ್ನಬಸಪ್ಪ, ರಾಜ್ಯ ಸರ್ಕಾರದ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಏಡ್ಸ್‌  ಜಾಗೃತಿಗಾಗಿ ಮ್ಯಾರಥಾನ್‌ ಓಟದಿಂದ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಆರೋಗ್ಯ ಸಮಾಜ ನಿರ್ಮಾಣ ಎಲ್ಲರ ಕರ್ತವ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಸಿಇಒ ಸ್ನೇಹಲ್‌ ಲೋಖಂಡೆ, ಡಿಎಚ್‌ಒ ಡಾ. ರಾಜೇಶ್‌ ಸುರಗಿಹಳ್ಳಿ, ಟಿಎಚ್‌ಒ ಡಾ. ಚಂದ್ರಶೇಖರ್‌, ಡಾ. ದಿನೇಶ್‌, ಕ್ರೀಡಾಧಿಕಾರಿ ಮಂಜುನಾಥ್‌, ಜಿ. ವಿಜಯಕುಮಾರ್‌, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

click me!