‘ವಿವಿಧ ಮದ್ಯದಂಗಡಿ ಪರವಾನಗಿ ನೀಡುವಾಗ ಮೀಸಲಾತಿ ಪಾಲನೆ ಮಾಡಬೇಕು ಎಂಬ ನಿಯಮಗಳಿಲ್ಲ. ಹೀಗಾಗಿಯೇ ಎಸ್ಸಿ ಹಾಗೂ ಎಸ್ಟಿ ಪರವಾನಗಿದಾರರಿಗೆ ಸೇರಿದ ಮದ್ಯದಂಗಡಿಗಳ ಸಂಖ್ಯೆ ತೀರಾ ಕಡಿಮೆ ಇದೆ. ಆದ್ದರಿಂದ ಮದ್ಯದಂಗಡಿ ಪರವಾನಗಿ ನೀಡುವಾಗಲೂ ಮೀಸಲಾತಿ ಪರಿಗಣಿಸಬೇಕು ಎಂಬ ಬೇಡಿಕೆ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಅಬಕಾರಿ ಸಚಿವ ಆರ್. ತಿಮ್ಮಾಪುರ ಹೇಳಿದ್ದಾರೆ.
ವಿಧಾನಸಭೆ (ಡಿ.6): ‘ವಿವಿಧ ಮದ್ಯದಂಗಡಿ ಪರವಾನಗಿ ನೀಡುವಾಗ ಮೀಸಲಾತಿ ಪಾಲನೆ ಮಾಡಬೇಕು ಎಂಬ ನಿಯಮಗಳಿಲ್ಲ. ಹೀಗಾಗಿಯೇ ಎಸ್ಸಿ ಹಾಗೂ ಎಸ್ಟಿ ಪರವಾನಗಿದಾರರಿಗೆ ಸೇರಿದ ಮದ್ಯದಂಗಡಿಗಳ ಸಂಖ್ಯೆ ತೀರಾ ಕಡಿಮೆ ಇದೆ. ಆದ್ದರಿಂದ ಮದ್ಯದಂಗಡಿ ಪರವಾನಗಿ ನೀಡುವಾಗಲೂ ಮೀಸಲಾತಿ ಪರಿಗಣಿಸಬೇಕು ಎಂಬ ಬೇಡಿಕೆ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಅಬಕಾರಿ ಸಚಿವ ಆರ್. ತಿಮ್ಮಾಪುರ ಹೇಳಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಕಾಂಗ್ರೆಸ್ ಸದಸ್ಯ ಎಂ.ಪಿ. ನರೇಂದ್ರ ಸ್ವಾಮಿ, ಸಿಎಲ್-7, ಸಿಎಲ್-9 ಸೇರಿದಂತೆ ಎಲ್ಲಾ ರೀತಿಯ ಮದ್ಯದಂಗಡಿ ಪರವಾನಗಿ ನೀಡುವಾಗಲೂ ಎಸ್ಸಿ ಹಾಗೂ ಎಸ್ಟಿಗೆ ಮೀಸಲಾತಿ ನೀಡಬೇಕು. ಮೀಸಲಾತಿ ನಮ್ಮ ಹಕ್ಕು. ಈ ವಿಭಾಗದಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಲು ಸರ್ಕಾರವು ತನ್ನ ನಿಲುವು ತಿಳಿಸಲಿ ಎಂದು ಆಗ್ರಹಿಸಿದರು.
undefined
ಮುಸ್ಲಿಮರಿಗೆ ಈ ದೇಶದ ಸಂಪತ್ತು ಹಂಚಿದ್ರೆ ತಪ್ಪೇನು? ಅಬಕಾರಿ ಸಚಿವ ಯಾಕೆ ಹಿಂಗಂದ್ರು!?
ಈ ವೇಳೆ ಸಚಿವ ಆರ್.ಬಿ. ತಿಮ್ಮಾಪುರ, ರಾಜ್ಯದಲ್ಲಿ ಒಟ್ಟಾರೆ ಮದ್ಯದಂಗಡಿಗಳಲ್ಲಿ ಎಸ್ಸಿ ಹಾಗೂ ಎಸ್ಟಿ ಪರವಾನಗಿದಾರರಿಗೆ ಸೇರಿದ ಮಳಿಗೆ ಕಡಿಮೆ ಇವೆ. ಉದಾ: 3,875 ಸಿಎಲ್-7 (ಬೋರ್ಡಿಂಗ್ ಅಂಡ್ ಲಾಡ್ಜಿಂಗ್) ಪರವಾನಗಿಗಳಲ್ಲಿ ಪರಿಶಿಷ್ಟಜಾತಿಗೆ ಸೇರಿದ 65, ಪರಿಶಿಷ್ಟ ಪಂಗಡಕ್ಕೆ ಸೇರಿದ 75 ಅಂಗಡಿ ಮಾತ್ರ ಇವೆ. ಇನ್ನು ಮುಂದೆ ಮದ್ಯದಂಗಡಿಗಳಲ್ಲೂ ಮೀಸಲಾತಿ ಒದಗಿಸುವ ಬಗ್ಗೆ ನಿಯಮಾನುಸಾರ ಪರಿಶೀಲಿಸಲಾಗುವುದು ಎಂದು ಹೇಳಿದರು.
ಈ ನೆಪದಲ್ಲಿ ಹೊಸ ಅಂಗಡಿ ಬೇಡ:
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸುನಿಲ್‌ಕುಮಾರ್, ಈ ನೆಪದಲ್ಲಿ ನೀವು ಹೊಸ ಮದ್ಯದಂಗಡಿಗಳಿಗೆ ಅವಕಾಶ ನೀಡಬೇಡಿ. ಮೀಸಲಾತಿ ಸರಿಪಡಿಸುತ್ತೇವೆ ಎಂದು ಹೊಸದಾಗಿ ಮದ್ಯದಂಗಡಿ ತೆರೆದು ಹಾಳು ಮಾಡಬೇಡಿ. ಈಗಲೇ ಹಾದಿಗೊಂದು ಬಾರ್ ಮತ್ತು ರೆಸ್ಟೋರೆಂಟ್‌ಗಳು ಆಗಿವೆ ಎಂದರು.
ಕುಡುಕರು ಹೆಚ್ಚಾಗಿದ್ದಾರೆ:
ಆರ್. ಅಶೋಕ್ ಮಾತನಾಡಿ, ರಾಜ್ಯದಲ್ಲಿ ಪ್ರತಿ ಬೀದಿಯಲ್ಲಿನ ಅಂಗಡಿಗಳಲ್ಲೂ ಮದ್ಯ ದೊರೆಯುವಂತಾಗಿದೆ. ಈಗಲೇ ಕುಡುಕರು ಹೆಚ್ಚಾಗಿದ್ದಾರೆ. ಸರ್ಕಾರವು ಆದಾಯಕ್ಕಾಗಿ ಬಾರ್‌ಗಳನ್ನು ಹೆಚ್ಚಳ ಮಾಡಿ ಮತ್ತಷ್ಟು ಕುಡುಕರನ್ನು ಸೃಷ್ಟಿಸಬಾರದು. ಯಾವುದೇ ಕಾರಣಕ್ಕೂ ಹೊಸ ಮದ್ಯದಂಗಡಿಗಳಿಗೆ ಪರವಾನಗಿ ನೀಡಬಾರದು ಎಂದು ಒತ್ತಾಯಿಸಿದರು.
ಗ್ಯಾರಂಟಿ ಸರ್ಕಾರಕ್ಕೆ ಫೈನಾನ್ಸ್ ಬೂಸ್ಟರ್ ಕೊಟ್ಟ ಬಿಯರ್ ಪ್ರಿಯರು: 22,500 ಕೋಟಿ ರೂ. ಆದಾಯ
ಕಾಂಗ್ರೆಸ್‌ನ ಶಿವಲಿಂಗೇಗೌಡ ಮಾತನಾಡಿ, ಬೆಂಗಳೂರಿನವರು ತಾಲೂಕುಗಳ ವ್ಯಾಪ್ತಿಯಲ್ಲಿ ಬಂದು ಪ್ರತಿ ಹಳ್ಳಿ ಹಳ್ಳಿಗೂ ಬಾರ್ ಮಾಡುತ್ತಿದ್ದಾರೆ. ಈ ಮೂಲಕ ಜನರನ್ನು ಹಾಳು ಮಾಡುತ್ತಿದ್ದಾರೆ. ಹೀಗಾಗಿ ಸಿಎಲ್-7 ನೆಪದಲ್ಲಿ ಸೃಷ್ಟಿಯಾಗುತ್ತಿರುವ ಅಕ್ರಮ ಮಳಿಗೆಗಳನ್ನು ಬಂದ್ ಮಾಡಿಸಿ ಎಂದು ಆಗ್ರಹಿಸಿದರು.