* ಧಾರವಾಡ ತಾಲೂಕಿನ ಲಕಮಾಪೂರ ಗ್ರಾಮದಲ್ಲಿ ನಡೆದ ಘಟನೆ
* ಶಿಥಿಲಾವ್ಯಸ್ಥೆಯಲ್ಲಿರುವ ಓವರ್ ಹೆಡ್ ಟ್ಯಾಂಕ್
* ಡೇಂಜರಸ್ ವಿದ್ಯುತ್ ತಂತಿ
ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ(ಮೇ.31): ಆತ ಅಂಗವಿಕಲ, ಅವನಿಗೆ ಸರಿಯಾಗಿ ಮಾತನಾಡಲು ಬರಲ್ಲ, ಇತ್ತ ಕಿವಿಯೂ ಕೇಳೊದಿಲ್ಲ, ಎಸ್ ಇತ ಕಳೆದ 5 ವರ್ಷದಿಂದ ಜೀವದ ಭಯದಲ್ಲಿ ವಾಸ ಮಾಡುತ್ತಿದ್ದಾನೆ. ಆದರೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡ್ರು.ಎಷ್ಟೋ ಭಾರಿ ಪಂಚಾಯ್ತಿಗೆ ಅಲೆದಾಡಿದ್ರೂ ಯಾರೂ ಕೇರ್ ಮಾಡುತ್ತಿಲ್ಲ ಎಂದು ಅಂಗವಿಕಲ ಸುರೇಶ ಹೇಳಿಕೊಂಡಿದ್ದಾನೆ.
undefined
ಹೀಗೆ ಇಗ ಬೀಳುತ್ತೋ ನಾಳೆ ಬೀಳುತ್ತೋ, ಅನ್ನೋ ಹಾಗೆ ಇರುವ ಶಿಥಿಲಾವ್ಯಸ್ಥೆಯ ಓವರ್ ಹೆಡ್ ಟ್ಯಾಂಕರ್, ಟ್ಯಾಂಕರ್ ಕೆಳೆಗೆ ವಾಸ ಮಾಡುತ್ತಿರುವ ಅಂಗವಿಕಲ, ಈತನಿಗೆ ಕಿವಿನೂ ಸರಿಯಾಗಿ ಕೇಳೋದಿಲ್ಲ, ಮಾತನಾಡಲೂ ಸರಯಾಗಿ ಬರಲ್ಲ, ಮತ್ತೊಂದೆಡೆ ವಾಟರ್ ಟ್ಯಾಂಕರ್ ಪಕ್ಕ ಇರುವ ಚಿಕ್ಕದೊಂದು ಕೊಠಡಿಯಲ್ಲಿ ಟೇಲರ್ ಆಗಿ ಕೆಲಸ ಮಾಡಿಕೊಂಡು ಜೀವನವನ್ನ ಸಾಗಿಸುತ್ತಿದ್ದಾನೆ.
ವಿಪಕ್ಷ ನಾಯಕನಿಗಾಗಿ ಕಾಂಗ್ರೆಸ್ಸಿನಲ್ಲಿ ತಲಾಶ್..!
ಧಾರವಾಡ ತಾಲೂಕಿನ ಲಕಮಾಪೂರ ಗ್ರಾಮದಲ್ಲಿ ಸರಕಾರಿ ಶಾಲೆಯ ಪಕ್ಕ ಇರುವ ಸುಮಾರು 50 ವರ್ಷಗಳಿಂದ ಇರುವ ಶಿಥಿಲಗೊಂಡ ಓವರ್ ಹೆಡ್ ವಾಟರ್ ಟ್ಯಾಂಕರ್ ಸದ್ಯ ಈಗ್ಲೋ ಆಗೋ ಬೀಳುವ ಪರಿಸ್ಥಿತಿಯಲ್ಲಿದೆ. ಇನ್ನು ಈ ವಾಟರ್ ಟ್ಯಾಂಕರ್‌ನಿಂದ ಬಡ ಅಂಗವಿಲಕನಾದ ಸುರೇಶ ಪತ್ತಾರ ಎಂಬವನು ಟ್ಯಾಂಕರ್ ಕೆಳಗಡೆನೆ ಮನೆ ಇರುವುದರಿಂದ ಯಾವಾಗ ಬೀಳುತ್ತೋ ಎಂಬ ಆತಂಕದಲ್ಲಿ ವಾಸ ಮಾಡುತ್ತಿದ್ದಾನೆ. ಇನ್ನು ಈ ಟ್ಯಾಂಕರ್‌ನಲ್ಲಿ ನೀರು ತುಂಬಿಸಿ ಮನೆಗಳಿಗೆ ಬಿಡಲಾಗುತ್ತಿದೆ.
ಆದರೆ ಪ್ರತಿದಿನ ಟ್ಯಾಂಕರ್ ತುಂಬಿ ಹೆಚ್ಚಿನ ಪ್ರಮಾಣದ ನೀರು ಬಿದ್ದು ಬಿದ್ದು ಸದ್ಯ ಸುರೇಶ ಪತ್ತಾರ ಅವನ ಮನೆಯ ಗೋಡೆ ನೆನೆದು ಗೋಡೆ ಬೀಳುವಂತಾಗಿದೆ. ಈ ಕುರಿತು ಸುರೇಶ ಅಕ್ಟೋಬರ್ 12 , 2020 ರಂದು ಮನವಿ ಮಾಡಿಕೊಂಡಿದ್ದಾನೆ. ಆದರೆ ಯಾದವಾಡ ಗ್ರಾಮ ಪಂಚಾಯತಿ ಪಿಡಿಓ ಮತ್ತು ಅಧ್ಯಕ್ಷರು ಕ್ಯಾರೇ ಎನ್ನುತ್ತಿಲ್ಲ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಮುಂದೆ ಹೇಳಿಕೊಂಡಿದ್ದಾನೆ. ಇನ್ನು ಇತ್ತ ಓವರ್ ಹೆಡ್ ಟ‌್ಯಾಂಕರ್ ಮನೆ ಹಾಳಾಗುತ್ತಿದೆ ಎಂದು ಚಿಂತೆಯಲ್ಲಿದ್ದಾನೆ.
Hubballi: ಇಂಧನ ಕೊರತೆಯ ವದಂತಿ: ಪೆಟ್ರೋಲ್ ಬಂಕ್‌ಗಳ ಮುಂದೆ ದೊಡ್ಡ ಸರದಿ ಸಾಲು!
ಡೇಂಜರಸ್ ವಿದ್ಯುತ್ ತಂತಿ :
ಒಂದು ಕಡೆ ಟ್ಯಾಂಕರ್ ಸಮಸ್ಯಯಿಂದ ಮನೆ ಬೀಳುವ ಪರಿಸ್ಥಿತಿ ಇದ್ದರೆ ಮತ್ತೊಂದಡೆ ಮನೆಯ ಮುಂದೆ ಹಾದು ಹೋಗಿರುವ ವಿದ್ಯುತ್ ತಂತಿ ಇಗ ಬಿಳುತ್ತೋ, ನಾಳೆ ಬೀಳುತ್ತೋ ಎಂಬ ಭಯದಲ್ಲಿ ವಾಸ ಮಾಡುತ್ತಿದ್ದಾರೆ. ಭಯದ ವಾತಾವರಣದಲ್ಲಿ ಅಕ್ಕ ಪಕ್ಕದ ಕುಟುಂಬಗಳ ವಾಸ ಮಾಡುತ್ತಿವೆ. ಇನ್ನು ಪಂಚಾಯ್ತಿ ಅವರು ಟ್ಯಾಂಕರ್ ಕೆಡವಲೂ ಆದೇಶವನ್ನ ಮಾಡಿದ್ರೂ ಇನ್ನು ಅದೇ ಟ್ಯಾಂಕರ್ನಲ್ಲಿ ನೀರು ತುಂಬಿಸುತ್ತಿದ್ದಾರೆ.
ಒಟ್ಟಿನಲ್ಲಿ ಇತ್ತ ಓವರ ಹೆಡ್ ಟ್ಯಾಂಕರ್ ಶಿಥಿಲಗೊಂಡರೂ ಪಂಚಾಯ್ತಿ ಸದಸ್ಯರು ಮತ್ತು ಪಿಡಿಓ, ಅಧ್ಯಕ್ಷರು ಕ್ಯಾರೇ ಎನ್ನುತ್ತಿಲ್ಲ. ಇನ್ನು ವಾಟರ್ ಟ್ಯಾಂಕರ್ ಕೆಡವಲೂ ಪಂಚಾಯ್ತಿ ಅವರು ಆದೇಶ ಮಾಡಿದ್ರೂ ಯಾಕೆ ಈ ನಿಷ್ಕಾಳಜಿ. ಇತ್ತು ವಾಟರ್ ಟ್ಯಾಂಕರ್ ಅತ್ತ ಕೆಳಗೆ ಜೋತು ಬಿದ್ದಿರುವ ವಿದ್ಯುತ್ ತಂತಿ. ಇವೆಲ್ಲದುರ ಮಧ್ಯೆ ಯಾವಾಗ ಯಾವ ದುರಂತ ಸಂಭಂವಿಸುತ್ತದೆಯೋ ಗೊತ್ತಿಲ್ಲ. ಈ ವರದಿಯನ್ನಾದ್ರೂ ನೋಡಿಕೊಂಡು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕ್ಕೊಳ್ಳಬೇಕಿದೆ.