* ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ನಡೆದ ಘಟನೆ
* ನೀರಿನಲ್ಲಿ ಮುಳುಗಿ ಮೃತಪಟ್ಟ ಮಹೇಶ್ವರಿ, ಶ್ರೀದೇವಿ
* ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು
ಸಿರುಗುಪ್ಪ(ಮೇ.31): ಆ ಬಾಲಕಿಯರದ್ದು, ಒಂದೇ ಶಾಲೆ. ಒಂದೇ ಊರು. ಶಾಲೆಗೆ ಹೋದ್ರು ಜೊತೆಯಲ್ಲೇ, ಅಟವಾಡಿದ್ರು ಜೊತೆಯಲ್ಲೇ. ಆದ್ರೇ ದುರ್ವಿಧಿ ಮಾತ್ರ ಸಾವಿನಲ್ಲೂ ಅವರನ್ನು ಬೇರ್ಪಡಿಸಿಲ್ಲ. ಹೌದು, ಶಾಲೆಯಲ್ಲಿ ಜತೆಯಾಗಿ ಕಲಿಯುತ್ತ ನಲಿಯಬೇಕಿದ್ದ ಬಾಲಕಿಯರಿಬ್ಬರು ಬಟ್ಟೆ ತೊಳೆಯಲು ಹೋಗಿ ಸಾವನ್ನಪ್ಪಿರೋ ಹೃದಯವಿದ್ರಾವಕ ಘಟನೆ ಸಿರಗುಪ್ಪ ತಾಲೂಕಿನ ಶ್ರೀದರಗಡ್ಡೆ ಗ್ರಾಮದಲ್ಲಿ ನಡೆದಿದೆ.
ಕೆರೆಯ ಪಾಲಾದ ಐವರ ಪೈಕಿ ಇಬ್ಬರ ಸಾವು
undefined
ಶ್ರೀಧರಗಡ್ಡೆ ಗ್ರಾಮದಲ್ಲಿ ಗ್ರಾಮಕ್ಕೆ ಕುಡಿವ ನೀರು ಸರಬರಾಜಿಗಾಗಿ ನಿರ್ಮಾಣಗೊಂಡಿರುವ ಕೆರೆಯಲ್ಲಿ ಮುಳುಗಿ ಶ್ರೀದೇವಿ (12) ಹಾಗೂ ಮಹೇಶ್ವರಿ (13) ಮೃತಪಟ್ಟಿರುವ ಘಟನೆಗೆ ಇಡೀ ಗ್ರಾಮಕ್ಕೆ ಗ್ರಾಮವನ್ನೇ ಕಣ್ಣಿರಿನಲ್ಲಿ ಕೈತೊಳೆಯುವಂತೆ ಮಾಡಿದೆ.
ಬಳ್ಳಾರಿಯಲ್ಲಿ ಮೊದಲ ಬಾರಿಗೆ ಮಾವು ಮೇಳ: ಎಲ್ಲೆಲ್ಲೂ ಹಣ್ಣಿನ ರಾಜನದ್ದೇ ದರ್ಬಾರ್..!
ಈ ಇಬ್ಬರು ಬಾಲಕಿಯರ ಕುಟುಂಬಗಳು ಆರ್ಥಿಕವಾಗಿ ದುರ್ಬಲರಾಗಿದ್ದು , ನಿತ್ಯವೂ ತಮ್ಮ ಅಲ್ಪ ಭೂಮಿಯ ಕೃಷಿಯ ಜತೆಗೆ ಜೀವನ ನಡೆಸುತ್ತಿದ್ದರು. ಇಂತಹ ವೇಳೆ ಮನೆಯಲ್ಲಿ ಆಟವಾಡುತ್ತ ಮನೆಗೆಲಸ ಮಾಡುತ್ತ ಓಡಾಡುತ್ತಿದ್ದ ಮಕ್ಕಳು ವಿಧಿಯಾಟಕ್ಕೆ ಬಲಿಯಾಗಿದ್ದಾರೆ.
ತಾಯಿಯ ಬಳಿಗೆ ನಡೆದ ಮಹೇಶ್ವರಿ:
ಹುಟ್ಟಿದ ಒಂದೆರಡು ವರ್ಷದಲ್ಲಿಯೇ ತಾಯಿ ಮಲ್ಲಮ್ಮನನ್ನು ಕಳೆದುಕೊಂಡಿದ್ದ ಮಹೇಶ್ವರಿ ಚಿಕ್ಕಮ್ಮನ ಆಸರೆಯಲ್ಲಿಯೇ ಬೆಳೆಯುತ್ತಿದ್ದಳು. ಆದ್ರೇ ವಿಧಿಯಾಟದಿಂದ ತನ್ನ ತಾಯಿ ಬಳಿ ಮಹೇಶ್ವರಿ ಇದೀಗ ತೆರಳಿದ್ದಾಳೆ. ತಾಯಿ ಇಲ್ಲದ ತಬ್ಬಲಿ ಎನ್ನುವ ಉದ್ದೇಶದಿಂದ ಮನೆ ಮಂದಿಯಲ್ಲ ಸೇರಿ ಬಡತನದಲ್ಲಿಯೂ ಮಹೇಶ್ವರಿಯನ್ನು ಮುದ್ದಾಗಿ ಸಾಕಿದ್ರು. ಆದ್ರೇ ವಿಧಿಯಾನೋಡಬೇಕಿದೆ ಇದೀಗ ತಾಯಿಯ ಬಳಿ ಕರೆದುಕೊಂಡು ಹೋಗಿದೆ.
ಘಟನೆ ಹಿನ್ನೆಲೆ ಶಾಲೆಗೆ ತೆರಳಬೇಕಿದ್ದ ಐವರು ಮಕ್ಕಳು
ತಮ್ಮ ಸುತ್ತಮುತ್ತಲಿನ ಮನೆಯವರ ಜತೆ ಮನೆಯಲ್ಲಿ ನೀರಿಲ್ಲದ ಕಾರಣ ಕೆರೆಯ ಬಳಿಯೇ ಹೋಗಿ ಬಟ್ಟೆ ತೊಳೆಯಲು ಹೋಗಿದ್ದಾರೆ . ಬಟ್ಟೆ ತೊಳೆಯುವ ವೇಳೆ ಬಟ್ಟೆ ತಿಕ್ಕುತ್ತಿದ್ದ ಸಾಬೂನು ಕೈಜಾರಿದೆ ಅದನ್ನು ಹುಡುಕಲು ಹೋದ ಬಾಲಕಿಯೊಬ್ಬಳು ನೀರಿಗೆ ಜಾರಿದ ಹಿನ್ನೆಲೆಯಲ್ಲಿ ಒಬ್ಬರನ್ನು ಮತ್ತೊಬ್ಬರು ಹಿಡಿಯಲು ಹೋಗಿ ಐವರು ನೀರಿಗೆ ಬಿದ್ದಿದ್ದಾರೆ.
ಬಳ್ಳಾರಿ ಗಣಿ ವಿರುದ್ಧ ದನಿಯೆತ್ತಿದ ರೈತರ ಮೇಲೆ ಸುಳ್ಳು ಪ್ರಕರಣ?
ಕಾಪಾಡಿದ ಯುವಕರು:
ಐವರು ಬಾಲಕಿಯರು ನೀರಿನಲ್ಲಿ ಬಿದ್ದ ಕೂಗಾಡುತ್ತಿದ್ದಾಗ ದಾರಿಯಲ್ಲಿ ಹೋಗುತ್ತಿದ್ದ ಚಿದಾನಂದಪ್ಪ ಮತ್ತು ಅಯ್ಯಪ್ಪ ಎನ್ನುವ ಇಬ್ಬರು ಯುವಕರು ನೀರಿಗಿಳಿದು ಮೂವರು ಬಾಲಕಿಯರನ್ನು ರಕ್ಷಿಸುವಲ್ಲಿ ಯಶಸ್ಸಿಯಾಗಿದ್ದಾರೆ. ಆದ್ರೇ ಶ್ರೀದೇವಿ ಮತ್ತು ಮಹೇಶ್ವರಿ ಮಾತ್ರ ಸಾವನ್ನಪ್ಪಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯವೇ?:
ಗ್ರಾಮಕ್ಕೆ ನಿತ್ಯವೂ ನೀರು ಸರಬರಾಜು ಮಾಡಬೇಕಾಗಿದ್ದ ಗ್ರಾಮ ಪಂಚಾಯಿತಿ ಹಾಗೂ ಕುಡಿವ ನೀರು ಸರಬರಾಜು ಮಾಡೋ ಇಲಾಖೆಯವರು ಗ್ರಾಮಕ್ಕೆ ಕೆರೆಯಿಂದ ನೀರು ಸರಬರಾಜು ಮಾಡದೆ ಇರುವುದೇ ಇದಕ್ಕೆ ಈ ದುರ್ಘಟನೆಗೆ ಮುಖ್ಯ ಕಾರಣ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ. ನೀರು ಬಾರದ ಹಿನ್ನೆಲೆ ಮಕ್ಕಳು ಕೆರೆಗೆ ಬಟ್ಟೆ ತೊಳೆಯಲು ಹೋಗಲು ಕಾರಣ ಎನ್ನುವುದನ್ನು ಸಹ ಕಾರಣ ಎನ್ನಲಾಗ್ತಿದೆ. ಈ ಬಗ್ಗೆ ಇನ್ನಾದರೂ ಸಂಬಂಧಿ ಇಲಾಖೆಯ ಅಧಿಕಾರಿಗಳು ಗಮನ ಹರಿಸುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕಿದೆ.